ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಹಿಜಾಬ್ ಧರಿಸಲು ಸ್ವಾತಂತ್ರ್ಯವಿಲ್ಲದಿರುವುದು ಅಮಾನವೀಯ: ಅಬ್ದುಲ್ ಮಜೀದ್
ಮೈಸೂರಿನಲ್ಲಿ ಎಸ್‍ಡಿಪಿಐ ಜನಾಧಿಕಾರ ಸಮಾವೇಶ

ಮೈಸೂರು,ಜು.17: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕೋಮುವಾದಿ ಬಿಜೆಪಿ ಸರ್ಕಾರದಲ್ಲಿಚಡ್ಡಿ ಮತ್ತು ಮಿಡ್ಡಿತೊಡಲು ಜನರು ಸ್ವಾತಂತ್ರ್ಯ ಹೊಂದಿದ್ದು, ಶಾಲೆಗಳಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಹಿಜಾಬ್‍ಧರಿಸಲು ಸ್ವಾತಂತ್ರ್ಯವಿಲ್ಲದಿರುವುದು ಅಮಾನವೀಯ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಕ್ರೋಶ ವ್ಯಕ್ತಪಡಿಸಿದರು.
ನಗರದರಾಜೀವ್ ನಗರದ ಬಳಿಯ ಅಲ್‍ಬದರ್ ಮೈದಾನದಲ್ಲಿ ರವಿವಾರ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ ಆಯೋಜಿಸಿದ್ದ ಜನಾಧಿಕಾರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅಸ್ಪೃಶ್ಯತೆಆಚರಣೆ ನಿಂತಿಲ್ಲ. ಕುದುರೆ ಹತ್ತಿದಕಾರಣಕ್ಕೆ, ನೀರುಕುಡಿದ ಮಾತಿಗೆ, ದೇವಾಲಯ ಪ್ರವೇಶಿಸಿದ್ದಕ್ಕೆ ದಲಿತರನ್ನು ಹತ್ಯೆ ಮಾಡಲಾಗುತ್ತಿದೆ.ರಾಜ್ಯದಲ್ಲಿ 1.25 ಕೋಟಿಜನಸಂಖ್ಯೆಇರುವದಲಿತರು ಮತ್ತುಒಂದುಕೋಟಿಯಷ್ಟಿರುವ ಮುಸಲ್ಮಾನರುಇದುವರೆಗೂ ಮುಖ್ಯಮಂತ್ರಿಯಾಗಿಲ್ಲ. ಯಾಕೆ ಈ ತಾರತಮ್ಯ. ಕನಿಷ್ಠ ಆರ್ಥಿಕ ನ್ಯಾಯವೂದಲಿತರು, ಆದಿವಾಸಿಗಳು ಮತ್ತುಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ. ಅಂಬಾನಿ ಮತ್ತುಅದಾನಿಗೆ ಮಾತ್ರಆರ್ಥಿಕ ನ್ಯಾಯ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು.
ಮುಸಲ್ಮಾನರನ್ನುರಾಜಕೀಯಅಧಿಕಾರದಿಂದದೂರಇಡಲಾಗುತ್ತಿದೆ.ಸಂವಿಧಾನದಆಧಾರದಲ್ಲಿದೇಶದ ಆಡಳಿತ ನಡೆಯಬೇಕಿದ್ದು, ಈಗ ದೇಶದಲ್ಲಿ ನಡೆಯುತ್ತಿರುವುದೇನು?ಸಂವಿಧಾನವನ್ನೆ ಬದಲಾಯಿಸುವ ಮಾತುಗಳು ಕೇಳಿಬರುತ್ತಿವೆ. ರಾಜ್ಯದಜನಸಂಖ್ಯೆ 6.5 ಕೋಟಿಇದ್ದು, ಯೋಗ ದಿನಾಚರಣೆಗೆ ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಾರಾಜ್ಯದ 4.5ಕೋಟಿ ಜನರಿಗೆಉಚಿತವಾಗಿ ಅಕ್ಕಿ ನೀಡುತ್ತಿದ್ದೇವೆಎಂದರು.ಅಂದರೆರಾಜ್ಯದ ಶೇ.75 ರಷ್ಟುಜನರು ಬಡತನರೇಖೆಗಿಂತ ಕೆಳಗಿದ್ದಾರೆ ಎಂದು ಪ್ರಧಾನಿಯೇಒಪ್ಪಿಕೊಂಡಂತಾಯ್ತು. ಹಾಗಾದರೆ 8 ವರ್ಷದಲ್ಲಿ ಮೋದಿ ಸಾಧನೆ ಮಾಡಿದ್ದಾದರೂ ಏನು? ಎಲ್ಲವನ್ನು ಮಾರಿಕೊಂಡಿದ್ದೆಅವರ ಸಾಧನೆಎಂದುಕಿಡಿಕಾರಿದರು.
ಎಸ್‍ಡಿಪಿಐ ಮುಖಂಡರಾದ ಬಿ.ಎಂ.ಕಾಂಬ್ಳೆ, ಅಲ್ಫಾನ್ಸೋ ಫ್ರಾಂಕೋ, ಅಬ್ದುಲ್ ಹನ್ನಾನ್, ದೇವನೂರ ಪುಟ್ಟಲಿಂಗಯ್ಯ, ಪ್ರೊ.ಸೈಯಿದಾ ಸಾದಿಯಾ, ಬಿ.ಆರ್.ಭಾಸ್ಕರ್ ಪ್ರಸಾದ್ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿಅಮ್ಜದ್‍ಖಾನ್, ಆರ್.ಲೋಕೇಶ್, ಅಬ್ದುಲ್ ಲತೀಫ್, ನೂರುದ್ದೀನ್ ಫಾರೂಖಿ, ರಿಯಾಝ್‍ಕಡುಂಬು, ಅಬ್ರಾರ್‍ಅಹಮದ್, ಮಜಾಝ್, ಸಾದತ್, ಖಲೀಲ್‍ಕ್ರಿಯೇಟೀವ್, ಸಿದ್ದೀಖ್ ಆನೆಮಹಲ್, ರಫತ್‍ಖಾನ್, ಮೊಹಮ್ಮದ್ ಷಫಿ ಮುಂತಾದವರು ಭಾಗವಹಿಸಿದ್ದರು.







