ನಾವುಂದ: ನೆರೆಪರಿಹಾರ ಶೀಘ್ರ ಪಾವತಿಗೆ ಆಗ್ರಹಿಸಿ ಧರಣಿ
ಬೈಂದೂರು, ಜು.18: ನಾವುಂದದಲ್ಲಿ ಧಾರಾಕಾರ ಮಳೆಯಿಂದ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕೃಷಿಕೂಲಿಕಾರರ ಸಂಘ ಹಾಗೂ6 ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ನಾವುಂದ ಗ್ರಾಮ ಪಂಚಾಯತ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರೈತರ ಭತ್ತದ ಕೃಷಿ ಕೊಳೆತು ಹೋಗಿರುವುದನ್ನು ಸಮೀಕ್ಷೆ ನಡೆಸಬೇಕು. ಬೆಳೆ ಹಾನಿಗೊಳಗಾದ ರೈತರಿಗೆ ಗರಿಷ್ಠ ಪ್ರಮಾಣದ ಪ್ಯಾಕೇಜ್ ಘೋಷಣೆ ಮಾಡಬೇಕು. ಸರಕಾರದ ಪರಿಷ್ಕೃತ ಆದೇಶದಂತೆ ಪೂರ್ಣ ಹಾನಿಗೆ 5 ಲಕ್ಷ ರೂ. ನೀಡಬೇಕು. ನೆರೆ ಸಂದರ್ಭದಲ್ಲಿ ಹಾಲು ಡೈರಿಗಳಿಗೆ ಹಾಲು ವಿತರಿಸಲು ಸಾಧ್ಯವಾಗದೆ ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಬೇಕು
ಮಸ್ಕಿ ಬಳಿ ರೈಲು ಅಂಡರ್ ಪಾಸ್ ಬಳಿ ಚರಂಡಿ ಹೂಳೆತ್ತಬೇಕು. ಮಸ್ಕಿ ರಸ್ತೆ ದುರಸ್ತಿ ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಸರಕಾರ ಶೀಘ್ರ ಪರಿ ಹರಿಸಬೇಕೆಂದು ಆಗ್ರಹಿಸಿ ಗ್ರಾಪಂ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸ ಲಾಯಿತು. ಮನವಿಯನ್ನು ಗ್ರಾಪಂ ಅಧ್ಯಕ್ಷೆ ಜಾನಕಿ, ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ ಸ್ವೀಕರಿಸಿದರು.
ಧರಣಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೃಷಿಕೂಲಿಕಾರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೋಣಿ, ತಾಲೂಕು ಕಾರ್ಯದರ್ಶಿ ನಾಗರತ್ನ ನಾಡ, ಬೈಂದೂರು ಸಿಐಟಿಯು ಸಂಚಾಲಕ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಕಟ್ಟಡ ಕಾರ್ಮಿಕರ ನಾವುಂದ ಘಟಕದ ಅಧ್ಯಕ್ಷ ಪ್ರಭಾಕರ ಆಚಾರ್, ಕಾರ್ಯದರ್ಶಿ ಅಣ್ಣಪ್ಪ, ಶೋಭಾ ಉಪಸ್ಥಿತರಿದ್ದರು.