ಡ್ಯಾನಿಶ್ ಓಪನ್-2022: ಚಿನ್ನದ ಪದಕ ಗೆದ್ದ ನಟ ಮಾಧವನ್ ಪುತ್ರ ವೇದಾಂತ್
Photo: instagram/vedaantmadhavan
ಹೊಸದಿಲ್ಲಿ: ಈಗಾಗಲೇ ಬೆಂಗಳೂರಿನಲ್ಲಿ ನಡೆದ ಜೂನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ 7 ಪದಕಗಳನ್ನು ಗೆದ್ದಿರುವ ಚಲನಚಿತ್ರ ನಟ ಆರ್ ಮಾಧವನ್ ಅವರ ಪುತ್ರ, ಈಜುಪಟು ವೇದಾಂತ್ ಮಾಧವನ್ 2022 ರ ಡ್ಯಾನಿಶ್ ಓಪನ್ನಲ್ಲಿ ಚಿನ್ನ ಗೆದ್ದಿದ್ದಾರೆ.
ವೇದಾಂತ್ ಇತ್ತೀಚೆಗೆ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ, ಅವರು 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದರು ಮಾತ್ರವಲ್ಲದೆ ರಾಷ್ಟ್ರೀಯ ಜೂನಿಯರ್ ದಾಖಲೆಯನ್ನು ನಿರ್ಮಿಸಿದರು ಎಂದು ನ್ಯೂಸ್ 18 ವರದಿ ಮಾಡಿದೆ.
awesome. More strength to you https://t.co/bxyBh0itgh
— Radikaa Sarathkumar (@realradikaa) July 18, 2022
Next Story