ಮಾಣಿ: ಜು.23ರಂದು ಮರ್ಹೂಂ ಖಾಸಿಂ ಉಸ್ತಾದರ ಶಿಷ್ಯಂದಿರ ಸಂಗಮ
ಮಾಣಿ, ಜು.18: ಇಮಾಂ ಶಾಫಿ ಅಕಾಡಮಿಯ ಸಂಸ್ಥಾಪಕ, ಸಮಸ್ತ ಕೇಂದ್ರ ಮುಶಾವರದ ಸದಸ್ಯರಾಗಿದ್ದ ಶೈಖನಾ ಖಾಸಿಂ ಉಸ್ತಾದರ ಕರ್ನಾಟಕದ ಶಿಷ್ಯಂದಿರ ಸಂಗಮವು ನೇರಳಕಟ್ಟೆಯ ಸಮಸ್ತ ಮಹಲ್ನಲ್ಲಿ ಜು.23ಕ್ಕೆ 10ಕ್ಕೆ ನಡೆಯಲಿದೆ.
ಮೂಲತಃ ಕಾಸರಗೋಡಿನ ಮೊಗ್ರಾಲ್ನವರಾಗಿದ್ದರೂ ದ.ಕ ಜಿಲ್ಲೆಯ ವಿವಿಧ ಮೊಹಲ್ಲಾಗಳಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ತನ್ನ ಸೇವೆಯ ಮೂಲಕ ಚಿರಪರಿತರಾಗಿ ಜನಾನುರಾಗಿಯಾಗಿ ಪ್ರಸಿದ್ದಿ ಪಡೆದ ಖಾಸಿಂ ಉಸ್ತಾದರಿಗೆ ಕರ್ನಾಟಕದಲ್ಲಿ ನೂರಾರು ಶಿಷ್ಯಂದಿರಿದ್ದು ಅವರನ್ನು ಸಂಘಟಿಸುವ ಉದ್ದೇಶದಿಂದ ಈ ಸಂಗಮವನ್ನು ಏರ್ಪಡಿಸಲಾಗಿದೆ.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಉಸ್ತಾದರ ಶಿಷ್ಯಂದಿರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸಂಯೋಜಕರಾದ ಮಜೀದ್ ನಿಝಾಮಿ ಮತ್ತು ಮಿತ್ತೂರು ಮಜೀದ್ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story