ಸಮಯ ವ್ಯರ್ಥ ಮಾಡದೆ ಕೋವಿಡ್ ಪರಿಹಾರ ನೀಡಿ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶ
ಹೊಸದಿಲ್ಲಿ, ಜು. ೧೮: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಮಯ ವ್ಯರ್ಥ ಮಾಡದೆ ಪರಿಹಾರ ಪಾವತಿಯ ಖಾತರಿ ನೀಡುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ನಿರ್ದೇಶಿಸಿದೆ.
ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠ, ಯಾವುದೇ ಹಕ್ಕುದಾರರು ಪರಿಹಾರವನ್ನು ಪಾವತಿಸದಿರುವ ಬಗ್ಗೆ ಮತ್ತು/ಅಥವಾ ಅವರ ಹಕ್ಕನ್ನು ತಿರಸ್ಕರಿಸಿದ ಬಗ್ಗೆ ಕುಂದು ಕೊರತೆ ಹೊಂದಿದ್ದರೆ, ಅವರು ಸಂಬಂಧಿಸಿದ ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು ಎಂದು ಹೇಳಿದೆ. ಹಕ್ಕುದಾರರ ಅರ್ಜಿಗಳನ್ನು ನಾಲ್ಕು ವಾರಗಳ ಒಳಗೆ ನಿರ್ಧರಿಸಿ ಎಂದು ಕುಂದುಕೊರತೆ ಪರಿಹಾರ ಸಮಿತಿಗೆ ಅದು ನಿರ್ದೇಶಿಸಿದೆ.
ಆಂಧ್ರಪ್ರದೇಶ ಸರಕಾರ ನಿಧಿಯನ್ನು ರಾಜ್ಯ ವಿಪತ್ತು ಸ್ಪಂದನ ಪಡೆ (ಎಸ್‌ಡಿಆರ್‌ಎಫ್)ಯಿಂದ ವೈಯುಕ್ತಿಕ ಠೇವಣಿ ಖಾತೆಗಳಿಗೆ ವರ್ಗಾಯಿಸಿರುವುದಾಗಿ ಆರೋಪಿಸಿದ ಮನವಿಗೆ ಸಂಬಂಧಿಸಿ ಪೀಠ, ನಿಧಿಯನ್ನು ಎರಡು ದಿನಗಳ ಒಳಗೆ ಎಸ್‌ಡಿಆರ್‌ಎಫ್‌ಗೆ ವರ್ಗಾಯಿಸುವಂತೆ ನಿರ್ದೇಶಿಸಿದೆ.
Next Story





