ಸಂಸದ ಪ್ರಜ್ಚಲ್ ರೇವಣ್ಣ ವಿರುದ್ಧ ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಮೇನಕಾ ಗಾಂಧಿ

ಪ್ರಜ್ಚಲ್ ರೇವಣ್ಣ | ಮೇನಕಾ ಗಾಂಧಿ
ಬೆಂಗಳೂರು: ಅರಣ್ಯ ಇಲಾಖೆಯ ದಂತ ಮಾರಾಟದ ಪ್ರಕರಣವೊಂದಕ್ಕೆ ಸಂಬಂಧಿಸಿ ಸಂಸದೆ ಮೇನಕಾ ಗಾಂಧಿ ಹಾಸನ ಸಂಸದ ಪ್ರಜ್ಚಲ್ ರೇವಣ್ಣ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ಆರೋಪಿಗಳ ರಕ್ಷಣೆಗೆ ಪ್ರಜ್ವಲ್ ರೇವಣ್ಣ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.
ಆನೆಯೊಂದನ್ನು ಕೊಂದ ಆರೋಪಿಗಳು ಜೆಡಿಎಸ್ ಬೆಂಬಲಿಗರಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತೆ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ದಂತಕ್ಕಾಗಿ ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗ ಕೊಂದಿದ್ದ ಆರೋಪಿಗಳಾದ ಚಂದ್ರೆಗೌಡ ಮತ್ತು ಇತರರು ಬಳಿಕ ಅದನ್ನು ಹೂತು ಹಾಕಿದ್ದರು. ಆದರೆ ಮಾರ್ಚ್ 19ರಂದು ಸತ್ತ ಆನೆಯಿಂದ ದಂತ ಕತ್ತರಿಸಿದ್ದ ಆರೋಪಿಗಳು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿತ್ತು.
ಪ್ರಕರಣ ಸಂಬಂಧ ಹಾಸನ ಅರಣ್ಯ ಇಲಾಖೆ ದೂರು ದಾಖಲಿಸಿ ತನಿಖೆ ಆರಂಭಿಸಿತ್ತು. ಸದ್ಯ ಆರೋಪಿಗಳ ರಕ್ಷಣೆಗೆ ಒತ್ತಡ ಹೇರಲಾಗಿದೆ ಎಂಬ ಆರೋಪ ಕೇಳಿಬ ಬಂದಿದೆ.







