ದೇಶವನ್ನು ಅರಿಯದವರಿಂದ ಧರ್ಮದ ಹೆಸರಿನಲ್ಲಿ ವಿಭಜನೆ: ಝೈನಿ
ಸುನ್ನಿ ಯುವಜನ ಸಂಘದಿಂದ ಈದ್ ಸ್ನೇಹ ಕೂಟ

ಉಡುಪಿ: ಒಂದು ದೇಶ ಸಾಮಾಜಿಕ, ಧಾರ್ಮಿಕವಾಗಿ ವೈವಿಧ್ಯತೆ ಯನ್ನು ಹೊಂದಿರುವುದು ಸಹಜ. ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳ ಲಾಗದವರು, ಧರ್ಮಕ್ಕೆ ಸಂಬಂಧಿಸದವರು ಇಂದು ಧರ್ಮದ ಹೆಸರಲ್ಲಿ ಜನರನ್ನು ವಿಭಜನೆ ಮಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದ್ವೀಪ ವಾಗುವ ಬದಲು ಒಬ್ಬರನ್ನೊಬ್ಬರು ಒಳಗೊಳ್ಳುವ ಮೂಲಕ ಭಾರತೀಯರು ವಿಶ್ವವ್ಯಾಪಿಯಾಗಬೇಕು. ಪರಸ್ಪರ ಮಾತುಕತೆಯಿಂದ ಈ ಅಡ್ಡಗೋಡೆಯನ್ನು ಕೆಡವಿ ಸಹಬಾಳ್ವೆ ಸಮಾನತೆಯ ಮೂಲಕ ಭಾರತ ವಿಶ್ವಗುರುವಾಗಬೇಕು ಎಂದು ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಹೇಳಿದ್ದಾರೆ.
ಸುನ್ನಿ ಯುವಜನ ಸಂಘ(ಎಸ್‌ವೈಎಸ್) ಉಡುಪಿ ಜಿಲ್ಲಾ ಸಮಿತಿಯ ವತಿ ಯಿಂದ ಸೋಮವಾರ ಉದ್ಯಾವರ ಬಲಾಯಿಪಾದೆಯ ನಿತ್ಯಾನಂದ ಆರ್ಕೆಡ್ ನಲ್ಲಿ ಹಮ್ಮಿಕೊಳ್ಳಲಾದ ಬಕ್ರೀದ್ ಹಬ್ಬದ ಈದ್ ಸ್ನೇಹಕೂಟದಲ್ಲಿ ಅವರು ಮಾತನಾಡುತಿದ್ದರು.
ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಮಸೀದಿ ಮಂದಿರ ಒಡೆದರೆ ಮತೆತಿ ಕಟ್ಟಬಹುದು. ಮಸ್ಸು ಒಡೆದರೆ ಕಟ್ಟುವುದು ಕಷ್ಟ. ಜಾತಿಮತ ಪಂತವನ್ನು ಮೀರಿದರೆ ಮಾತ್ರಾ ದೇಶ ಕಟ್ಟಬಹುದು ಎಂಬ ಸತ್ಯವನ್ನು ಎಲ್ಲರೂ ಆತ್ಮವಂಚನೆಯಿಲ್ಲದೆ ಒಪ್ಪಿಕೊಳ್ಳಬೇಕು. ಮನಸ್ಸನ್ನು ಬೆಸೆಯುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕಾಗಿದೆ ಎಂದರು.
ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಅಸ್ಸಯದ್ ಜಾಫರ್ ಅಸ್ಸಕಾಫ್ ತಂಳ್ ಕೋಟೇಶ್ವರ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮೆಡಿಕಲ್ ಅಸೋಸಿಯೇಶನ್ ಅಧ್ಯಕ್ಷ ವಿ.ಜಿ.ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ವಕೀಲರ ಸಂಘದ ಜಲ್ಲಾಧ್ಯಕ್ಷ ಬಿ.ನಾಗರಾಜ್, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಕೊರಂಗ್ರಪಾಡಿ, ಲಯನ್ಸ್ ಉಪಗವರ್ನರ್‌ಗಳಾದ ನೇರಿ ಕರ್ನೇಲಿಯೂ, ಮುಹಮ್ಮದ್ ಹನೀಫ್, ಲಯನ್ ಮಾಜಿ ಗವರ್ನರ್ ವಿಶ್ವನಾಥ ಶೆಟ್ಟಿ, ಸಮಾಜ ಸೇವಕರಾದ ಶೇಖರ ಹಾವಂಜೆ, ಸತೀಶ್ ಶೆಟ್ಟಿ ಅಂಬಲಪಾಡಿ, ಹರೀಶ್ ಕಿಣಿ ಅಲೆವೂರು, ವಕೀಲರಾದ ಉದಯಕುಮಾರ್, ವಿಜಯಕುಮಾರ್ ಶೆಟ್ಟಿ, ಯತೀಶ್ ಕರ್ಕೇರ, ಗಣೇಶ್ ನೆರ್ಗಿ, ಈಶ್ವರ್ ಶೆಟ್ಟಿ ಚಿಟ್ಪಾಡಿ, ಮುಸ್ಲಿಂ ಜಮಾಅತ್ ನಾಯಕರಾದ ಶೇಕ್ ಮುಹಮ್ಮದ್ ನಯೀಮ್ ಕಟಪಾಡಿ, ಸಯ್ಯದ್ ಫರೀದ್ ಉಡುಪಿ, ಸುಭಾನ್ ಅಹ್ಮದ್ ಹೊನ್ನಾಳ ಮುಖ್ಯ ಅತಿಥಿಗಳಾಗಿದ್ದರು.
ಕೋಶಾಧಿಕಾರಿ ಹಾಜಿ ಮೊಯಿದಿನ್ ಗುಡ್ವಿಲ್, ಸುನ್ನಿ ಯುವಜನ ಸಂಘದ ನಾಯಕರಾದ ಸಹಬಾನ್ ಹಾಜಿ, ಅಬ್ದುಲ್ಲ ಸೂಪರ್ ಸ್ಟಾರ್ ಕಾಪು, ಕಾಸಿಂ ಬಾರ್ಕೂರು, ಎಂ.ಎ.ಬಾವು ಹಾಜಿ ಮೂಳೂರು ಉಪಸ್ಥಿತರಿದ್ದರು. ಸುನ್ನಿ ಯುವಜನ ಸಂಘದ ಜಿಲ್ಲಾ ಅಧ್ಯಕ್ಷ ಹಮ್ಜತ್ ಹೆಜಮಾಡಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ಎ.ಅಬ್ದುಲ್ ರೆಹಮಾನ್ ರಿಝ್ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.