ಶ್ರೀರಂಗಪಟ್ಟಣ | 6 ದಿನಗಳ ಕಾರ್ಯಾಚರಣೆ; ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕರ ಮೃತ ದೇಹ ಪತ್ತೆ

ಸಾಂದರ್ಭಿಕ ಚಿತ್ರ
ಶ್ರೀರಂಗಪಟ್ಟಣ, ಜು.19: ಇಲ್ಲಿನ ಸಂಗಮದ ಬಳಿ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿದ್ದ ಬೆಂಗಳೂರಿನ ಯುವಕ ಹಾಗೂ ನದಿಗೆ ಹಾರಿದ್ದ ಮೈಸೂರಿನ ಯುವಕನ ಮೃತದೇಹಗಳು ಆರು ದಿನಗಳ ಕಾರ್ಯಾಚರಣೆ ನಂತರ ಪತ್ತೆಯಾಗಿದೆ.
ಬೆಂಗಳೂರಿನ ಯಲಹಂಕ ನಿವಾಸಿ ಅಶೋಕ್(26) ಅವರ ಶವ ತಾಲೂಕಿನ ದೊಡ್ಡಿಪಾಳ್ಯ ಸಮೀಪದ ಖಾಸಗಿ ವಿದ್ಯುತ್ ಉತ್ಪಾದನಾ ಕಾರ್ಯಾಗಾರದ ತಡೆಗೋಡೆಗೆ ಸಿಲುಕಿಕೊಂಡಿತ್ತು. ಈತ ತನ್ನ ಕುಟುಂಬದ ಜತೆ ಪ್ರವಾಸಕ್ಕೆ ಬಂದಿದ್ದಾಗ ನದಿಯಲ್ಲಿ ಕೊಚ್ಚಿ ಹೋಗಿದ್ದರು.
ಜು.12ರಂದು ಕೆಆರ್ ಎಸ್ ಡ್ಯಾಂ ಬಳಿ ಕಾವೇರಿ ನದಿಗೆ ಹಾರಿದ್ದನೆನ್ನಲಾಗಿದ್ದ ಮೈಸೂರಿನ ಯುವಕ ಸೃಜನ್ ಅವರ ಮೃತ ದೇಹವೂ ಬೆಳಗ್ಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story