ಗಾಂಜಾ ಸೇವನೆ: ಮೂವರು ವಶಕ್ಕೆ
ಕುಂದಾಪುರ : ಗಾಂಜಾ ಸೇವನೆಗೆ ಸಂಬಂಧಿಸಿ ಜು.೧೭ರಂದು ಕುಂದಾಪುರ ಶಾಸ್ತ್ರಿ ಪಾರ್ಕ್ ಬಳಿ ಎರ್ಮಾಳ್ ಬಡಾ ಗ್ರಾಮದ ಕೀರ್ತಿ (೨೦) ಹಾಗೂ ಕುಂದಾಪುರ ಹೊಸ ಬಸ್ ನಿಲ್ದಾಣದ ಬಳಿ ಕಾಪು ಪೊಲಿಪು ಮಸೀದಿ ಬಳಿಯ ನಿವಾಸಿ ಹಸನಬ್ಬ(೩೦) ಎಂಬವರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಪು: ಗಾಂಜಾ ಸೇವನೆಗೆ ಸಂಬಂಧಿಸಿ ಜು.೧೮ರಂದು ಏಣಗುಡ್ಡೆ ಗ್ರಾಮದ ಫಾರೆಸ್ಟ್ ಗೇಟ್ ಹತ್ತಿರ ಅಶ್ಲೇಷ್ ಕೋಟ್ಯಾನ್ ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರೆಲ್ಲ ಗಾಂಜಾ ಸೇವನೆ ಮಾಡಿರುವುದು ಮಣಿಪಾಲ ಕೆ.ಎಂ.ಸಿ ಪೊರೆನ್ಸಿಕ್ ಪರೀಕ್ಷೆಯಿಂದ ದೃಢಪಟ್ಟಿದೆ.
Next Story