Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಪುಷ್ಪ-3 ರ ಸುಳಿವು ನೀಡಿದ ಫಹದ್‌...

ಪುಷ್ಪ-3 ರ ಸುಳಿವು ನೀಡಿದ ಫಹದ್‌ ಫಾಸಿಲ್:‌ ಅಭಿಮಾನಿಗಳಲ್ಲಿ ತೀವ್ರಗೊಂಡ ನಿರೀಕ್ಷೆ

Saleeth SufiyanSaleeth Sufiyan19 July 2022 9:53 PM IST
share
ಪುಷ್ಪ-3 ರ ಸುಳಿವು ನೀಡಿದ ಫಹದ್‌ ಫಾಸಿಲ್:‌ ಅಭಿಮಾನಿಗಳಲ್ಲಿ ತೀವ್ರಗೊಂಡ ನಿರೀಕ್ಷೆ

ಕೊಚ್ಚಿ: ತಮ್ಮ ಮುಂಬರುವ ʼಮಲಯಂಕುಂಜುʼ ಚಿತ್ರದ ಪ್ರಚಾರದ ನಡುವೆ ಬಹುಭಾಷಾ ನಟ ಫಹಾದ್ ಫಾಸಿಲ್ ಇತ್ತೀಚೆಗೆ ಬಿಡುಗಡೆಯಾದ ಪ್ಯಾನ್‌ ಇಂಡಿಯಾ ಪುಷ್ಪಾ ಚಿತ್ರದ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಫಾಸಿಲ್‌, ಪುಷ್ಪಾ 3 ಬರಬಹುದೆಂಬ ಸುಳಿವನ್ನು ನೀಡಿದ್ದಾರೆ. ನಿರ್ದೇಶಕರ ಬಳಿ ಪುಷ್ಪಾ ಚಿತ್ರವನ್ನು ವಿಸ್ತರಿಸುವಷ್ಟು ವಿಷಯಗಳು ಇವೆ ಎಂದು ಅವರು ಹೇಳಿದ್ದಾರೆ. ಈ ಸುದ್ದಿಯು ಚಿತ್ರದ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆಯನ್ನು ಹುಟ್ಟಿಸಿದೆ.

ನಿರ್ದೇಶಕ ಸುಕುಮಾರ್ ಅವರ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದರೆ, ಖಡಕ್‌ ಖಲನಾಯಕನಾಗಿ ಫಹದ್ ಫಾಸಿಲ್ ಬಣ್ಣ ಹಚ್ಚಿದ್ದರು.  ಭಾಗ ಒಂದು ಮಾತ್ರ ಸದ್ಯ ಬಿಡುಗಡೆಯಾಗಿದ್ದು, ಸಾಕಷ್ಟು ಹಣವನ್ನು ಚಿತ್ರವು ಗಳಿಸಿದೆ.

 ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಮುಂಬರುವ ವಾರಗಳಲ್ಲಿ ಪುಷ್ಪ: ದಿ ರೂಲ್ ಅಥವಾ ಪುಷ್ಪ 2 ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಚಿತ್ರವು 2023 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮಲಯಂಕುಂಜು ಚಿತ್ರದ ಪ್ರಚಾರದ ವೇಳೆ ಫಹದ್ ಫಾಸಿಲ್ ಪುಷ್ಪ 3 ಕುರಿತು ಮಾತನಾಡಿದರು. ವಿಡಿಯೋ ಸಂದರ್ಶನವೊಂದರಲ್ಲಿ ಮಾತನಾಡಿದ ಫಹದ್‌, ಸುಕುಮಾರ್ ಸರ್ ಕಥೆಯನ್ನು ಹೇಳಿದಾಗ, ಪುಷ್ಪ ಒಂದು ಭಾಗದ ಚಿತ್ರವಾಗಬೇಕಿತ್ತು. ಪೊಲೀಸ್ ಠಾಣೆಯ ದೃಶ್ಯ ಮತ್ತು ನನ್ನ ಭಾಗದ ಧ್ವಿತೀಯಾರ್ಧದಲ್ಲಿ ಬರಬೇಕಿತ್ತು. ಆದರೆ, ನಂತರ, ದ್ವಿತೀಯಾರ್ಧವನ್ನೇ ಚಿತ್ರದ ಎರಡನೇ ಭಾಗವಾಗಿ ಚಿತ್ರೀಕರಿಸಲಾಗುತ್ತದೆ ಎಂದು ನಿರ್ಧರಿಸಲಾಯಿತು. ಇತ್ತೀಚೆಗೆ, ಅವರು ನನ್ನೊಂದಿಗೆ ಮಾತನಾಡುವಾಗ, ಅವರು ಪುಷ್ಪ 3 ಮಾಡಲು ಸಾಕಷ್ಟು ವಿಷಯಗಳನ್ನು ಹೊಂದಿರುವುದಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ.

ಡಿಸೆಂಬರ್ 2021 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಪುಷ್ಪ: ದಿ ರೈಸ್ ಬ್ಲಾಕ್‌ಬಸ್ಟರ್ ಚಲನಚಿತ್ರವಾಗಿತ್ತು. ಚಿತ್ರವು ರಕ್ತ ಚಂದನದ ಕಳ್ಳಸಾಗಣೆದಾರ ಪುಷ್ಪರಾಜ್ ಮತ್ತು ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೆಕಾವತ್ ಅವರ ಕತೆಯನ್ನು ಹೇಳಿದೆ. ನಿರ್ದಿಷ್ಟವಾಗಿ ಅಲ್ಲು ಅರ್ಜುನ್‌ ನಿರ್ವಹಿಸಿದ ಪುಷ್ಪರಾಜ್‌ ಪಾತ್ರದ ಬೆಳವಣಿಗೆಯನ್ನು ಚಿತ್ರವು ತೋರಿಸಿತ್ತು. ಮುಂದಿನ ಭಾಗದಲ್ಲಿ ಫಹಾದ್‌ ಫಾಸಿಲ್‌ ನಿರ್ವಹಿಸಿದ ಪೊಲೀಸ್‌ ಅಧಿಕಾರಿ ಪಾತ್ರದೊಂದಿಗಿನ ಮುಖಾಮುಖಿಯನ್ನು ಚಿತ್ರವು ತೋರಿಸಲಿತ್ತು. ಈ ನಡುವೆ, ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ಅವರು ಕೂಡಾ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿತ್ತು.

When Suku sir first told me the story, #Pushpa was only in one film, after the police station scene, my part in the second half, then it became two parts..

#Sukumar sir has enough materials to make #Pushpa3 - #FahadhFaasil said in interview of Manish Narayanan ‌ #AlluArjun pic.twitter.com/sng3mfPBai

— Mallu Arjun Army Kerala™ (@MalluArjun_Army) July 19, 2022

#Pushpa Big Breaking ..!!!

Pushpa 3rd part is possible #FahadhFaasil opened in his latest interview that director #Sukumar recently told him that we have scope for #Pushpa3 also .. #AlluArjun #PushpaTheRise #PushpaTheRule #PushpaTheRampage pic.twitter.com/0P6KlJOLT6

— Allu Arjun The Boss™ (@FanaticsofBunny) July 19, 2022
share
Saleeth Sufiyan
Saleeth Sufiyan
Next Story
X