ಮಂಗಳೂರು: ಜು. 20-21ರಂದು ವಿದ್ಯುತ್ ವ್ಯತ್ಯಯ
ಮಂಗಳೂರು : ಮೂಡುಬಿದಿರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬೆಳುವಾಯಿ ಮತ್ತು ಶಿರ್ತಾಡಿ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವುದರಿಂದ ಜು.೨೦ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್‌ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯಿದೆ, ಕೆಸರಗದ್ದೆ, ಪೆಲಕುಂಜ, ಶಾಂತಿನಗರ, ಮೂಡಾಯಿ ಕಾಡು, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ, ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಬಸವನಕಜೆ, ಅಮನೊಟ್ಟು, ಆನೆಗುಡ್ಡೆ, ಜೋಗೊಟ್ಟು, ವಾಲ್ಪಾಡಿ, ಶಿರ್ತಾಡಿ, ಮಕ್ಕಿ, ಶಿಮುಂಜೆ, ಅಳಿಯೂರು, ಬೋರುಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
*ಜು.೨೦ರ ಬೆಳಗ್ಗೆ ೯:೩೦ರಿಂದ ಸಂಜೆ ೫:೩೦ರವರೆಗೆ ಉಜ್ಜೋಡಿ, ನೆಕ್ಕರೆಮಾರ್, ಗೋರಿಗುಡ್ಡ, ಎಕ್ಕೂರು, ನೇತ್ರಾವತಿ ಗ್ಯಾರೇಜ್, ಕಡೇಕಾರ್, ಜೆಪ್ಪಿನಮೊಗರು, ತಾರೆದೊಲ್ಯ, ತಂದೊಳಿಗೆ, ಡೆನ್ಮಾರ್ಕ್ ಲೇಔಟ್, ವಾಸುಕೀನಗರ, ಅಳಕೆ ಮಠ, ಪರಂಜ್ಯೋತಿ ಭಜನಾ ಮಂದಿರ, ಕನಕರಬೆಟ್ಟು, ರಾಮ್‌ತೋಟ, ಕುಡುಪ್ಪಾಡಿ ತೋಟ, ಸದಾಶಿವ ನಗರ, ಪಡೀಲ್ ಜಂಕ್ಷನ್, ಕಂಕನಾಡಿ ರೈಲ್ವೆ ಸ್ಟೇಷನ್, ನಾಗುರಿ, ಗರೋಡಿ, ಬಲಿಪಮಾರ್, ನೇತ್ರಾವತಿ ಲೇಔಟ್, ಪಂಪ್‌ವೆಲ್, ಪ್ರಶಾಂತ್‌ಭಾಗ್, ಸೈಮಾನ್ ಲೇನ್, ಮೇಘನಗರ, ಗುಡ್ಡೆತೋಟ, ರೆಡ್ ಬಿಲ್ಲಿಂಗ್,ಕೆಂಬಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜು.೨೦ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ನ್ಯೂಫೀಲ್ಡ್ ಸ್ಟ್ರೀಟ್, ಕಾರ್‌ಸ್ಟ್ರೀಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜು.೨೦ರ ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಕದ್ರಿ ಶಿವಭಾಗ್ ೧ರಿಂದ ೫ನೇ ಕ್ರಾಸ್‌ವರೆಗೆ, ತಾರೆತೋಟ, ಲೋವರ್ ಬೆಂದೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಜು.೨೧ರ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಸಿಟಿ ಸೆಂಟರ್, ಕೊಡಿಯಾಲ್‌ಬೈಲ್, ಜಿಲ್ಲಾ ನ್ಯಾಯಾಲಯ, ಅಲೋಶಿಯಸ್ ಕಾಲೇಜ್, ಜಯಶ್ರೀ ಆಸ್ಪತ್ರೆ ಮತ್ತು ಸ್ಟೇಟ್‌ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್, ಹಳೆ ಬಂದರು, ಬದ್ರಿಯಾ ರೋಡ್, ಗೂಡ್ಸ್ ಶೆಡ್ ರಸ್ತೆ, ಬ್ಯಾಂಬೂ ಬಜಾರ್, ನೀರೇಶ್ವಾಲ್ಯ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.







