ಫೆರ್ಮಾಯ್: ವನಮಹೋತ್ಸವ, ಸ್ವಚ್ಛತಾ ಕಾರ್ಯಾಕ್ರಮ
ಮಂಗಳೂರು : ಸಂತ ಅಂತೋನಿ ಚರ್ಚ್ ದೇವಾಲಯ ಫೆರ್ಮಾಯ್, ಪರಿಸರ ಆಯೋಗದ ಸಹಯೋಗದಲ್ಲಿ ಕಥೊಲಿಕ್ ಸಭಾ ಮತ್ತು ಭಾರತೀಯ ಕಥೊಲಿಕ್ ಯುವ ಸಂಚಾಲನ (ಐ.ಸಿ.ವೈ.ಎಂ)ದ ಸಹಕಾರದಲ್ಲಿ ವನಮಹೋತ್ಸವದ ಅಂಗವಾಗಿ ಮನೆ ಮನೆಗೆ ವೃಕ್ಷ ೨೦೨೨ ಹಾಗೂ ಸ್ವಚ್ಛತಾ ಕಾರ್ಯಕ್ರಮ ರವಿವಾರ ನಡೆಯಿತು.
ಧರ್ಮಗುರು ಡಾ.ಮಾರ್ಕ್ ಕಾಸ್ತೆಲಿನೊ ವನಮಹೋತ್ಸವ ಆಚರಣೆ ಮಾಡುವಾಗ ಗಿಡಗಳನ್ನು ನೆಟ್ಟರೆ ಸಾಲದು, ಆ ಗಿಡಗಳ ಪೋಷಣೆ ಮಾಡಿ ಮರಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
ಬಳಿಕ ದೇವಾಲಯ ವ್ಯಾಪ್ತಿಯ ಪ್ರತಿ ಕುಟುಂಬಕ್ಕೆ ಗಿಡಗಳನ್ನು ಹಸ್ತಾಂತರಿಸಲಾಯಿತು. ಕಥೊಲಿಕ ಸಭೆಯ ಅಧ್ಯಕ್ಷ ಲ್ಯಾನ್ಸಿ ಡಿಸೋಜ ಸ್ವಾಗತಿಸಿದರು. ಐ.ಸಿ.ವೈ.ಎಂ ಅಧ್ಯಕ್ಷ ಆಲ್ಯನ್ ಡೇಸಾ ವಂದಿಸಿದರು. ಪ್ರಶಾಂತ್ ಸಲ್ಡಾನ ಕಾರ್ಯಕ್ರಮ ನಿರೂಪಿಸಿದರು.
Next Story





