ತುಳು ನಾಟಕ ಪರ್ಬಕ್ಕೆ ಚಾಲನೆ

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ನಡೆದ ‘ನಾಟಕ ಪರ್ಬ ೨೦೨೨’ದ ಉದ್ಘಾಟನಾ ಕಾರ್ಯಕ್ರಮವು ತುಳು ಭವನದಲ್ಲಿ ನಡೆಯಿತು.
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ರಂಗಭೂಮಿ ಕಲಾವಿದರಾದ ಸುನೀತಾ ಎಕ್ಕೂರು, ವಾಸುದೇವ ಲಾಯಿಲಾ, ರಘುರಾಮ ಶೆಟ್ಟಿ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಯಿತು.
ನಮ್ಮ ಟೀವಿಯ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಸೀತಾರಾಮ ಹೆಗ್ಡೆ, ಸದಾಶಿವ ಕುಕ್ಯಾನ, ಕಾರ್ಪೊರೇಟರ್ ಶಕೀಲಾ ಕಾವ, ಗಣೇಶ್ ಕುಲಾಲ್ ಕೋಡಿಕಲ್, ಅಕಾಡಮಿಯ ರಿಜಿಸ್ಟ್ರಾರ್ ಕವಿತಾ, ಅಕಾಡಮಿಯ ಸದಸ್ಯರಾದ ನರೇಂದ್ರ ಕೆರೆಕಾಡು, ಪಿ.ಎಂ ರವಿ, ನಾಗೇಶ್ ಕುಲಾಲ್ ಉಪಸ್ಥಿತರಿದ್ದರು. ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿದರು.
Next Story