ರೈಲ್ಬೆ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳವು
ಮಂಗಳೂರು : ನಗರದ ಪಡೀಲ್‌ನಲ್ಲಿರುವ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪಾರ್ಕ್ ಮಾಡಲಾಗಿದ್ದ ಬುಲ್ಲೆಟ್ ಬೈಕ್ ಕಳವಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಹರ್ಷ ಎಸ್. ಎಂಬವರು ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಜು.೧೪ರಂದು ರಾತ್ರಿ ಊರಿಗೆ ತೆರಳುವ ಸಲುವಾಗಿ ಬೈಕನ್ನು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದರು. ಅಲ್ಲದೆ ಪಾರ್ಕಿಂಗ್ ಮಾಡಿದ ಬಗ್ಗೆಯೂ ರಶೀದಿ ಪಡೆದುಕೊಂಡಿದ್ದರು. ಜು.೧೮ರಂದು ಬೆಳಗ್ಗೆ ೭ಕ್ಕೆ ಮರಳಿ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಕಾಣೆಯಾಗಿತ್ತು. ಇದರ ಅಂದಾಜು ಮೌಲ್ಯ ೯೯ ಸಾವಿರ ರೂ. ಆಗಿದೆ ಎಂದು ಹರ್ಷ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story





