ಯೂತ್ ಫಾರ್ ಸೇವಾವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಗ್, ಲೇಖನ ಸಾಮಗ್ರಿ ವಿತರಣೆ

ಕಾರ್ಕಳ: ಸರಕಾರಿ ಶಾಲೆ ಮತ್ತು ಶಿವಪುರ ಸರಕಾರಿ ಶಾಲೆ ಹಾಗೂ ಜನಾರ್ದನ ಶಾಲೆ ಎಳ್ಳಾರೆ ಶಾಲೆಗಳಿಗೆ ಉಚಿತ ಲೇಖನ ಸಾಮಗ್ರಿಗಳು ಹಾಗೂ ಪುಸ್ತಕ ಮತ್ತು ಶಾಲಾ ಬ್ಯಾಗುಗಳನ್ನು ಯೂತ್ ಫಾರ್ ಸೇವಾ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ನಾಯಕ್ ಅವರು ಮಾತನಾಡುತ್ತಾ, ಸಮಾಜದಲ್ಲಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿರುವ ಈ ಸಂಸ್ಥೆಯು ಮುಖ್ಯವಾಗಿ ಸರಕಾರಿ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಇವರ ಸೇವೆ ನಮ್ಮ ಕಾರ್ಕಳ ತಾಲೂಕಿನ ಶಾಲೆಗಳಿಗೆ ಲಭಿಸಿದ್ದು ಹಲವಾರು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ ಹಾಗೆ ಇವರ ಸೇವೆ ಇತರರಿಗೆ ಆದರ್ಶಮಯವಾದಂತದ್ದು ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಯೂಥ್ ಫಾರ್ ಸೇವಾ ತಂಡದ ರಮಿತಾ ಶೈಲೇಂದ್ರ ರಾವ್ ಅವರು ಮಾತನಾಡಿ, ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಸಣ್ಣ ಪ್ರಯತ್ನವನ್ನು ನಮ್ಮ ಸಂಸ್ಥೆ ಮಾಡುತ್ತಿದೆ, ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಮುಂದೊಂದು ದಿನ ಶಾಲೆಗೆ ಗೌರವ ತರುವ ಕೆಲಸಗಳನ್ನು ಮಾಡಿ ಸಮಾಜಮುಖಿಯದಲ್ಲಿ ನಮ್ಮೆಲ್ಲರ ಶ್ರಮ ಸಾರ್ಥಕ ಎಂದು ಮಕ್ಕಳಿಗೆ ಹಾರೈಸಿದರು.
ಕಾರ್ಯಕ್ರಮದಲ್ಲಿ ಯೂಥ್ ಫಾರ್ ಸೇವಾ ಸಂಸ್ಥೆಯ ಹೆಬ್ರಿ ವಲಯದ ಶಶಿ ಕುಮಾರ್ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ ಶೆಟ್ಟಿ, ಕ್ಷೇತ್ರ ಸಮನ್ವಯ ಅಧಿಕಾರಿಯಾಗಿರುವ ಪ್ರವೀಣ್ ಶೆಟ್ಟಿ, ಶಿಕ್ಷಣ ಸಂಯೋಜಕ ರಾಗಿರುವ ವೆಂಕಟರಮಣ ಕಲ್ಕೂರ್, ಎಸ್ ಟಿ ಎಂ ಸಿ ಅಧ್ಯಕ್ಷರು, ಶಾಲಾ ಹಿತಿಷಿಯಾಗಿರುವ ಸಂದೇಶ ಆಚಾರ್ಯ ಮತ್ತು ಶಾಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಾಲಾ ಮುಖ್ಯೋಪಾಧ್ಯಾಯರು ನೆರವೇರಿಸಿದರು.







