ನಮ್ಮ ನಡುವಿನ ವಿಭಜನೆಗಳು ಮುಕ್ತಾಯಗೊಂಡಿವೆ: ವಿಕ್ರಮಸಿಂಘೆ
ಕೊಲಂಬೊ, ಜು.20: ಬಿಕ್ಕಟ್ಟಿನಿಂದ ಜರ್ಝರಿತಗೊಂಡಿರುವ ಶ್ರೀಲಂಕಾದ ವಿಭಜನೆಗಳು ಮುಕ್ತಾಯಗೊಂಡಿವೆ ಎಂದು ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರನಿಲ್ ವಿಕ್ರಮಸಿಂಘೆ ಬುಧವಾರ ಹೇಳಿದ್ದಾರೆ. ಅಧ್ಯಕ್ಷರಾಗಿದ್ದ ಗೊತಬಯ ರಾಜಪಕ್ಸ ದೇಶದಿಂದ ಪಲಾಯನ ಮಾಡಿ ರಾಜೀನಾಮೆ ಘೋಷಿಸಿದ ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿದ್ದ ವಿಕ್ರಮಸಿಂಘೆ ಗೆಲುವು ಸಾಧಿಸಿದ್ದಾರೆಂದು ಘೋಷಿಸಲಾಗಿದೆ.
ಬಳಿಕ ಮಾತನಾಡಿದ ವಿಕ್ರಮಸಿಂಘೆ, ನಮ್ಮ ನಡುವಿನ ವಿಭಜನೆಗಳು ಇಂದಿಗೆ ಮುಕ್ತಾಯಗೊಂಡಿವೆ ಎಂದರು. ಈಗ ಎದುರಾಗಿರುವ ಬಿಕ್ಕಟ್ಟಿನಿಂದ ದೇಶವನ್ನು ಹೊರತರಲು ತನ್ನೊಂದಿಗೆ ಕೈಜೋಡಿಸುವಂತೆ ವಿಕ್ರಮಸಿಂಘೆ ವಿಪಕ್ಷ ಬೆಂಬಲಿತ ಅಭ್ಯರ್ಥಿ ದಲ್ಲಾಸ್ ಅಲಹಪೆರುಮ ಅವರಿಗೆ ಕರೆ ನೀಡಿದರು.
Next Story