'ಆಧುನಿಕ ಭಗೀರಥ ಸಿ.ಟಿ.ರವಿ' ಎಂದು ಬ್ಯಾನರ್ ಹಾಕಿದ್ದಕ್ಕೆ ಗ್ರಾಮಸ್ಥರ ಆಕ್ರೋಶ, ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ಆರೋಪ

ಚಿಕ್ಕಮಗಳೂರು, ಜು.20: ಬೆಳವಾಡಿ ಕೆರೆಗೆ ಬಾಗಿನ ಅರ್ಪಿಸಲು ಶಾಸಕ ಸಿ.ಟಿ.ರವಿ ತೆರಳಿದ್ದ ವೇಳೆ ಸಿ.ಟಿ.ರವಿ ಅವರನ್ನು ಆಧುನಿಕ ಭಗೀರಥ ಎಂದು ಸಂಭೋದಿಸಿ ಹಾಕಲಾಗಿದ್ದ ಬ್ಯಾನರ್ ವಿಚಾರಕ್ಕೆ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು* ಮತ್ತು ಸ್ಥಳೀಯರ ನಡುವೆ ಮಾರಾಮಾರಿ ನಡೆದ ಘಟನೆ ಬುಧವಾರ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದೆ.
ಬುಧವಾರ ಶಾಸಕ ಸಿ.ಟಿ.ರವಿ ಅವರು ಬೆಳವಾಡಿ ಕೆರೆ ತುಂಬಿ ಕೋಡಿ ಬಿದ್ದ ಹಿನ್ನಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಲು ತೆರಳಿದ್ದರು. ಈ ವೇಳೆ ಕೆರೆ ಸಮೀದದಲ್ಲಿ ಬಿಜೆಪಿ ಕಾರ್ಯಕರ್ತರು "ಕೆರೆಗೆ ನೀರು ಹರಿಸಿದ ಆಧುನಿಕ ಭಗಿರಥ ಸಿ.ಟಿ.ರವಿ" ಎಂದು ಶಾಸಕ ಸಿ.ಟಿ.ರವಿ ಅವರ ಭಾವಚಿತ್ರವಿದ್ದ ಬ್ಯಾನರ್ ಅನ್ನು ಹಾಕಿದ್ದರು. ಈ ಬ್ಯಾನರ್ ಕಂಡ ಕೆಲವರು ಸ್ಥಳದಲ್ಲಿ ವಿರೋಧ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ವಿರೋಧಿ ಬಣದವರನ್ನು ಪೊಲೀಸ್ ವಾಹನಕ್ಕೆ ತುಂಬಿಕೊಂಡು ಕರೆದೊಯ್ಯುವ ವೇಳೆ ಪೊಲೀಸರ ಸಮ್ಮುಖದಲ್ಲೇ ಕೆಲವರು ವಿರೋಧಿ ಬಣದವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸ್ ವಾಹನವನ್ನು ಅಡ್ಡ ಹಾಕಿ ಬ್ಯಾನರ್ ವಿರೋಧಿಸಿದವರ ಮೇಲೆ ಹಲ್ಲೆ ಮಾಡುತ್ತಿರುವ ಘಟನೆಯ ವಿಡಿಯೋ ಸದ್ಯ ವೈರಲ್ ಆಗಿದೆ.






.jpg)
.jpg)

