ಹಿರಾ ವಿಮೆನ್ಸ್ ಕಾಲೇಜಿನಲ್ಲಿ 'ಝಹರಾತು ಹಿರಾ' ಸಾಹಿತ್ಯಿಕ- ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು, ಜು.21: ಬಬ್ಬುಕಟ್ಟೆಯ ಹಿರಾ ವಿಮೆನ್ಸ್ ಕಾಲೇಜು ವತಿಯಿಂದ ಹಿರಾ ಸಭಾಂಗಣದಲ್ಲಿ ಏಕದಿನ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ 'ಝಹರಾತು ಹಿರಾ' ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್.ಮಹಮೂದ್ ಉದ್ಘಾಟಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಮಕ್ಕಳ ಪ್ರತಿಭೆಯನ್ನು ನಿರಂತರ ಪೋಷಿಸುವ ಜವಾಬ್ದಾರಿ ನಮ್ಮದೇ ಎಂದು ಹೇಳಿದರು.
ಶಾಂತಿ ಎಜ್ಯುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಜ.ಕರೀಂ ಉಳ್ಳಾಲ್, ಸದಸ್ಯರಾದ ಶಮೀನ ಅಫ್ಸಾನ್, ನಸೀರ ದೀನ್, ಸಂಚಾಲಕ ರಹ್ಮತುಲ್ಲಾ, ಪ್ರಾಂಶುಪಾಲೆ ಫಾತಿಮ ಮೆಹರೂನ್, ಆಡಳಿತಾಧಿಕಾರಿ ಝಾಕಿರ್ ಹುಸೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಮೌಲಾನ ಶುಐಬ್ ಹುಸೈನ್ ನದ್ವಿ ಮಾತನಾಡಿ ಶುಭ ಹಾರೈಸಿದರು. ಝಾಮಿಯ ಕಿರಾಅತ್ ಪಠಿಸಿದರು. ಅಮೀನಾ ನೌಶಾದ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ರಹೀಝಾ ಮತ್ತು ಝುಬೈ ವಂದಿಸಿದರು. ಸನಿಹಾ ಮತ್ತು ಇಸ್ಮತ್ ಕಾರ್ಯಕ್ರಮ ನಿರೂಪಿಸಿದರು.
Next Story