ಎಸೆಸ್ಸೆಫ್ ಸುರತ್ಕಲ್ ಡಿವಿಷನ್‌ನಿಂದ ಸನ್ಮಾನ ಕಾರ್ಯಕ್ರಮ

ಕೃಷ್ಣಾಪುರ : ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ೨೦೨೧-೨೨ನೆ ಸಾಲಿನ ಎಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳನ್ನು ಕೃಷ್ಣಾಪುರದ ಪ್ಯಾರಡೈಸ್ ಕ್ಲಬ್‌ನಲ್ಲಿ ಇತ್ತೀಚೆಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿ ಅಧ್ಯಕ್ಷತೆ ವಹಿಸಿದ್ದರು.
ಎಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಶಾಖೆಯ ಸದಸ್ಯರಾದ ಅಬಿದ್ ಅಲಿ ಕಾಟಿಪಳ್ಳ, ಮುಹಮ್ಮದ್ ಮರ್ಝುಖ್ ಅಲಿ ಕೃಷ್ಣಾಪುರ, ಮುಹಮ್ಮದ್ ಇಬ್ರಾಹಿಂ ಸೈಫುಲ್ಲಾ ಕೃಷ್ಣಾಪುರ, ಬಾಶಿತ್ ಕೃಷ್ಣಾಪುರ, ಮಾಹಿನ್ ಮುಹಮ್ಮದ್ ಆದೀಲ್ ಕೃಷ್ಣಾಪುರ, ನವಾಫ್ ೪ನೇ ಬ್ಲಾಕ್, ಹಾಯಿಝ್ ೪ನೇ ಬ್ಲಾಕ್ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಬ್ದುಲ್ ರಾಝಿ ಸುರತ್ಕಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಯ್ಯಿದ್ ಸಿರಾಜ್ ಮುಶೈಖ್ ಬಾಅಲವಿ ಅಲ್ ಅಹ್ಸನಿ, ರಾಜ್ಯ ಎಸೆಸ್ಸೆಫ್ ಮಾಜಿ ಕಾರ್ಯದರ್ಶಿ ಅಬ್ದುರ‌್ರಹ್ಮಾನ್ ಹಾಜಿ ಪ್ರಿಂಟೆಕ್, ಜಿಲ್ಲಾ ಕ್ಯಾಂಪಸ್ ಮಾಜಿ ಕಾರ್ಯದರ್ಶಿ ಮುಹಮ್ಮದ್ ಆಸಿಫ್ ಹಾಜಿ, ಎಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹೈದರ್ ೪ನೇ ಬ್ಲಾಕ್, ಎಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್, ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ, ದಅವಾ ಕಾರ್ಯದರ್ಶಿ ಆರೀಫ್ ಝುಹುರಿ ಮುಕ್ಕ, ವಿಸ್ಡಂ ಕಾರ್ಯದರ್ಶಿ ಸುಹೈಲ್, ರೈನ್ ಬೋ ಕಾರ್ಯದರ್ಶಿ ಮನ್ಸೂರ್ ಬಹಾಲ್, ಕ್ಯಾಂಪಸ್ ಕನ್ವೀನರ್ ಉಭೈದುಲ್ಲಾ ಪಾಲ್ಗೊಂಡಿದ್ದರು.
ಎಸೆಸ್ಸೆಫ್ ಸುರತ್ಕಲ್ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಅಫ್ರೀದ್ ಕೃಷ್ಣಾಪುರ ಸ್ವಾಗತಿಸಿದರು. ಎಸೆಸ್ಸೆಫ್ ಸುರತ್ಕಲ್ ಮೀಡಿಯಾ ಕಾರ್ಯದರ್ಶಿ ತನ್ಸಿರ್ ೪ನೇ ಬ್ಲಾಕ್ ವಂದಿಸಿದರು.