ಅವಿವಾಹಿತ ಮಹಿಳೆಯ 24 ವಾರಗಳ ಗರ್ಭ ತೆಗೆಸಲು ಅನುಮತಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ: ಪರಸ್ಪರ ಸಹಮತದ ಸಂಬಂಧದಿಂದ ಗಭಿಣಿಯಾಗಿದ್ದ ಅವಿವಾಹಿತ ಮಹಿಳೆಗೆ ತನ್ನ 24 ವಾರ ಅವಧಿಯ ಗರ್ಭವನ್ನು ತೆಗೆಸಲು ಸುಪ್ರೀಂ ಕೋರ್ಟ್ ಇಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಅನುಮತಿಸಿದೆ. ಮಹಿಳೆಯ ಜೀವಕ್ಕೆ ಅಪಾಯವಿಲ್ಲದೆ ಅಬಾರ್ಷನ್ ನಡೆಸಬಹುದೆಂದು ಏಮ್ಸ್ ರಚಿಸಿದ ತಜ್ಞರ ತಂಡ ವರದಿ ನೀಡಿದ ನಂತರವಷ್ಟೇ ಈ ಕ್ರಮಕೈಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಕೋರಿಕೆಯನ್ನು ನಿರಾಕರಿಸುವ ವೇಳೆ ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ನಿಯಮಗಳನ್ನು ದಿಲ್ಲಿ ಹೈಕೋರ್ಟ್ ತೀರಾ ಕಟ್ಟುನಿಟ್ಟಿನ ಧೋರಣೆ ಹೊಂದಿತ್ತು ಎಂದು ಜಸ್ಟಿಸ್ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
"ಆಕೆ ಅವಿವಾಹಿತೆ ಎಂಬ ಒಂದೇ ಕಾರಣಕ್ಕೆ ಆಕೆಗೆ ಈ ನಿಯಮಗಳ ಪ್ರಯೋಜನವನ್ನು ನಿರಾಕರಿಸುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ. ಇಪ್ಪತೈದು ವರ್ಷದ ಅವಿವಾಹಿತ ಮಹಿಳೆ ದಿಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
Next Story