ಮಸೂದ್ ಹತ್ಯೆಗೆ ಖಂಡನೆ; ರಾಜ್ಯದಲ್ಲಿ ಅಸಹಿಷ್ಣುತೆ ಬೆಳೆಯುತ್ತಿದೆ: ಅನೀಸ್ ಕೌಸರಿ
ಮಂಗಳೂರು: ರಾಜ್ಯದಲ್ಲಿ ನಿರಂತರವಾಗಿ ಫ್ಯಾಶಿಸ್ಟ್ ಶಕ್ತಿಗಳು ನಡೆಸಿ ಬರುತ್ತಿರುವ ಧಾರ್ಮಿಕ ಕೋಮು ಭಾವನೆಗಳ ಕೆದಕುವಿಕೆ ಮತ್ತು ಉದ್ವಿಗ್ನತೆಯ ಫಲವಾಗಿ ಅಸಹಿಷ್ಣುತೆ ಬೆಳೆಯುತ್ತಿದೆ. ಬೆಳ್ಳಾರೆಯಲ್ಲಿ ನಡೆದಿರುವ ಮಸೂದ್ ಎಂಬ ಯುವಕನ ಕೊಲೆಯು ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸುತ್ತಿದೆ. ಕೊಲೆ ಮಾಡಿದವರನ್ನು ರಕ್ಷಿಸಲು, ಅವರ ಬೆಂಬಲ ನಿಲ್ಲಲು ಮುಂದೆ ಬರುವವರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕಿದೆ. ಕೊಲೆ ಗಟುಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಮತ್ತು ಸಮಾಜದಲ್ಲಿ ಶಾಂತಿ ಸಾಮರಸ್ಯ ಪುನಃಸ್ಥಾಪಿಸಲು ರಾಜ್ಯ ಸರಕಾರ ಅಗತ್ಯ ಕಾರ್ಯಕ್ರಮಗಳನ್ನು ನಡೆಸಬೇಕಿದೆ ಎಂದು SKSSF ರಾಜ್ಯ ಅಧ್ಯಕ್ಷರಾದ ಅನೀಸ್ ಕೌಸರಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





