ಮಹಾನ್ ಮಾನವತಾವಾದಿಯನ್ನು ಕಳೆದುಕೊಂಡ ಉಡುಪಿ ಜನತೆ : ವೆಲ್ಫೇರ್ ಪಾರ್ಟಿ
ಉಡುಪಿ: ಮಹಾನ್ ಮಾನವತಾವಾದಿ ಚಿಂತಕ, ಹೊರಾಟಗಾರ, ವೈಚಾರಿಕ ಸ್ಪಷ್ಟತೆಯ ಬರಹಗಾರ ಮುಂತಾದ ಎಲ್ಲಾ ವೈಶಿಷ್ಟ್ಯಗಳೊಂದಿಗೆ ಸರ್ವಾಂಗೀಣ ಪ್ರಭುದ್ಧತೆಯ ವ್ಯಕ್ತಿತ್ವ ಜಿ. ರಾಜಶೇಖರ್ ಅವರನ್ನು ಕಳೆದುಕೊಂಡು ಉಡುಪಿ ಬಡವಾಗಿದೆ ಎಂದು ಉಡುಪಿ ಜಿಲ್ಲಾ ವೆಲ್ಫೇರ್ ಪಾರ್ಟಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸಹಬಾಳ್ವೆಯ ಬಗ್ಗೆ ಅಪಾರ ಕಾಳಜಿಯುಳ್ಳ ಅನ್ಯಾಯದ ವಿರುದ್ದ ನಿರಂತರ ಹೋರಾಡುತ್ತಾ ನ್ಯಾಯಕ್ಕಾಗಿ ರಾಜಶೇಖರ್ ತನ್ನ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರ ಲೇಖನಿ ಅನ್ಯಾಯದ ವಿರುದ್ಧ ಪ್ರಭಲ ಆಯುಧವಾಗಿತ್ತು.
ಅವರು ಪ್ರಜಾಪ್ರಭುತ್ವ ಮತ್ತು ಮಾನವಹಕ್ಕುಗಳಿಗಾಗಿ ರಾಜಿ ರಹಿತ ಹೊರಾಟ ನಡೆಸಿದ್ದಲ್ಲದೆ ಇತರರಿಗೆ ಹೋರಾಟದ ಸ್ಪೂರ್ತಿಯಾಗಿದ್ದರು. ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾದ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಹೇಳಿಕೆಯಲ್ಲಿ ತಿಳಿಸಿದ್ದಾರೆ
Next Story





