ಯುವತಿ ನಾಪತ್ತೆ: ದೂರು

ಮಂಗಳೂರು : ಮದುವೆಗೆ ಹೋಗಿ ಬರುತ್ತೇನೆ ಎಂದು ಹೇಳಿ ತೆರಳಿದ ಯುವತಿ ನಾಪತ್ತೆಯಾಗಿರುವ ಬಗ್ಗೆ ಬಂದರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಬಿಯಾ ಫರ್ವೀನ್ (22) ನಾಪತ್ತೆಯಾದ ಯುವತಿ. ನಗರದ ಲೇಡಿಗೋಶನ್ ಮುಂಭಾಗದ ಕಟ್ಟಡವೊಂದರಲ್ಲಿ ಟೈಲರಿಂಗ್ ಮೆಶಿನ್‌ನ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ 8 ತಿಂಗಳಿನಿಂದ ಈಕೆ ಕೆಲಸ ಮಾಡಿಕೊಂಡಿದ್ದರು.
ಜು.18ರಂದು ಸಂಜೆ ಬಂದರಿನಲ್ಲಿರುವ ಸ್ನೇಹಿತರ ಮದುವೆಗೆ ಹೋಗಿ ಬರುವುದಾಗಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





