ಕ್ಯಾಬಿನ್‌ನಲ್ಲಿ ವಾಯು ಒತ್ತಡ ನಷ್ಟ: ಮುಂಬೈನಲ್ಲಿ ಇಳಿದ ಏರ್ ಇಂಡಿಯಾದ ದುಬೈ- ಕೊಚ್ಚಿ ವಿಮಾನ

ಹೊಸದಿಲ್ಲಿ, ಜು.21: ದುಬೈಯಿಂದ ಕೊಚ್ಚಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಡ್ರೀಮ್‌ಲೈನರ್ ವಿಮಾನದಲ್ಲಿ ‘ವಾಯು ಒತ್ತಡ ನಷ್ಟದ’ ಹಿನ್ನೆಲೆಯಲ್ಲಿ ಶುಕ್ರವಾರ ಮುಂಬೈನಲ್ಲಿ ಇಳಿಸಲಾಯಿತು. ವಿಮಾನದ ಕ್ಯಾಬಿನ್‌ನಲ್ಲಿ ವಾಯುಒತ್ತಡ ನಷ್ಟವಾಗಿದೆಯೆಂದು ಪೈಲಟ್ ತಿಳಿಸಿದ ಬಳಿಕ ವಿಮಾನದ ಪಥವನ್ನು ಮುಂಬೈಗೆ ತಿರುಗಿಸಲಾಯಿತೆಂದು ಎಂದು ಮೂಲಗಳು ತಿಳಿಸಿವೆ. ವಿಮಾನವು ಸುರಕ್ಷಿತವಾಗಿ ಇಳಿದಿದೆಯೆಂದು ಅವು ಹೇಳಿವೆ.
ವಿಮಾನದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 247 ಮಂದಿ ಪ್ರಯಾಣಿಸುತ್ತಿದ್ದರು.
ಕ್ಯಾಬಿನ್‌ನಲ್ಲಿ ವಾಯು ಒತ್ತಡ ನಷ್ಟ ಆನಂತರ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಆಮ್ಲಜನಕದ ಮಾಸ್ಕ್‌ಗಳನ್ನು ಧರಿಸುವಂತೆ ಮಾಡಲಾಯಿತೆಂದು ಮೂಲಗಳು ಹೇಳಿವೆ. ಘಟನೆಯ ಬಗ್ಗೆ ತನಿಖೆ ನಡೆಸಲು ವಾಯುಯಾನ ನಿಯಂತ್ರಣ ಸಂಸ್ಥೆ ಡಿಜಿಸಿಎ ಇಬ್ಬರು ಹಿರಿಯ ಅಧಿಕಾರಿಗಳನ್ನು ನೇಮಿಸಿದೆ. ಕ್ಯಾಬಿನ್‌ನಲ್ಲಿ ಒತ್ತಡ ನಷ್ಟವು ಅತ್ಯಂತ ಗಂಭೀರವಾದ ವಾಯುಯಾನ ಸುರಕ್ಷಿತ ಬೆದರಿಕೆಯಾಗಿದ್ದು, ಅದಕ್ಕೆ ತ್ವರಿತವಾಗಿ ಪ್ರತಿಕ್ರಿಯಿಸಲು ಪೈಲಟ್‌ಗಳಿಗ ತರಬೇತಿ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿ ವಿಮಾನದ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಅದರ ಸಿಬ್ಬಂದಿಯನ್ನು ಕೂಡಾ ತನಿಖೆ ಪೂರ್ತಿಯಾಗುವವರೆಗೆ ಕರ್ತವ್ಯ ನಿರ್ವಹಿಸದಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.







