ತಾಂಝಾನಿಯಾ ಪ್ರಜೆಯಿಂದ 9 ಕೋಟಿ ರೂ. ಮೌಲ್ಯದ ಹೆರಾಯಿನ್ ವಶ
ಹೊಸದಿಲ್ಲಿ,ಜು.21: ಚೆನ್ನೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ತಾಂಜಾನಿಯಾ ದೇಶದ ಪ್ರಜೆಯೊಬ್ಬನಿಂದ ಸುಮಾರು 9 ಕೋಟಿ ರೂ. ಮೌಲ್ಯದ , 1.266 ಕೆ.ಜಿ. ಹೆರಾಯಿನ್ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಕಸ್ಟಮ್ಸ್ ಇಲಾಖೆಯ ವಾಯುಯಾನ ಗುಪ್ತಚರ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಪ್ರಯಾಣಿಕನು ಉಗಾಂಡದ ಎಂಟೆಬೆ ವಿಮಾನಿಲ್ದಾಣದಿಂದ ಇಥಿಯೋಪಿಯಾ ಏರ್‌ಲೈನ್ಸ್ ವಿಮಾನದಲ್ಲಿ ಜುಲೈ 14ರಂದು ಚೆನ್ನೈಗೆ ಆಗಮಿಸಿದ್ದನು. ಆರೋಪಿಯು ಕ್ಯಾಪ್ಯೂಲ್‌ಗಳಲ್ಲಿ ತುಂಬಿಸಿಟ್ಟಿದ್ದ ಹೆರಾಯಿನ್ ಅನ್ನು ನುಂಗಿದ್ದು, ಆನಂತರ ಅದನ್ನು ಪೊಲೀಸರು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ ಕೂಡಾ ಉಗಾಂಡದ ವ್ಯಕ್ತಿಯೊಬ್ಬ 5.56 ಕೋಟಿ ರೂ. ಮೌಲ್ಯದ 63 ಕ್ಯಾಪ್ಯೂಲ್‌ಗಳನ್ನು ನುಂಗಿದ್ದು, ಆನಂತರ ಅದನ್ನು ಕಸ್ಟಮ್ಸ್ ಅಧಿಕಾರಿಗಳು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು.
Next Story