ಅರವಿಂದ ಕೇಜ್ರಿವಾಲ್ ಸರಕಾರದ ಅಬಕಾರಿ ನೀತಿ ಕುರಿತು ಸಿಬಿಐ ತನಿಖೆಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಶಿಫಾರಸು

Photo:PTI
ಹೊಸದಿಲ್ಲಿ: ಅರವಿಂದ ಕೇಜ್ರಿವಾಲ್ ನೇತೃತ್ವದ ಸರಕಾರದ ವಿವಾದಾತ್ಮಕ ಹೊಸ ಅಬಕಾರಿ ನೀತಿಯ ಕುರಿತು ಸಿಬಿಐನಿಂದ ತನಿಖೆ ನಡೆಸುವಂತೆ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಇಂದು ಶಿಫಾರಸು ಮಾಡಿದ್ದಾರೆ.
ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ನೇರವಾಗಿ ಹೆಸರಿಸಿದ ಲೆಫ್ಟಿನೆಂಟ್ ಗವರ್ನರ್,ಜುಲೈ 8ರ ಮುಖ್ಯ ಕಾರ್ಯದರ್ಶಿಯ ವರದಿಯು ಉನ್ನತ ರಾಜಕೀಯ ಮಟ್ಟದಲ್ಲಿ "ಗಣನೀಯ" ಹಣಕಾಸಿನ ಅನುಕೂಲಗಳನ್ನು ಸೂಚಿಸುತ್ತದೆ ಎಂದು ಹೇಳಿದರು.
"ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವ ಮನೀಶ್ ಸಿಸೋಡಿಯಾ ಅವರು ದೊಡ್ಡ ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಶಾಸನಬದ್ಧ ನಿಬಂಧನೆಗಳು ಹಾಗೂ ಅಧಿಸೂಚಿತ ಅಬಕಾರಿ ನೀತಿಯನ್ನು ಉಲ್ಲಂಘಿಸುವ ಪ್ರಮುಖ ನಿರ್ಧಾರಗಳು/ಕಾರ್ಯಗಳನ್ನು ಕೈಗೊಂಡಿದ್ದಾರೆ ಹಾಗೂ ಕಾರ್ಯಗತಗೊಳಿಸಿದ್ದಾರೆ" ಎಂದು ಸಕ್ಸೇನಾ ಅವರ ಕಚೇರಿ ತಿಳಿಸಿದೆ.
ಟೆಂಡರ್ಗಳನ್ನು ನೀಡಿದ ನಂತರ ಸಿಸೋಡಿಯಾ ಅವರು ಮದ್ಯದ ಪರವಾನಗಿಗಳಿಗೆ ಅನಗತ್ಯ ಹಣಕಾಸಿನ ಅನುಕೂಲಗಳನ್ನು ವಿಸ್ತರಿಸಿದ್ದಾರೆ ಎಂದು ಸಕ್ಸೇನಾ ಆರೋಪಿಸಿದರು.
Next Story