ಶ್ರೀಲಂಕಾದ ನೂತನ ಪ್ರಧಾನಿಯಾಗಿ ದಿನೇಶ್ ಗುಣವರ್ಧನ ಪ್ರಮಾಣ ವಚನ ಸ್ವೀಕಾರ

Photo: YouTube screengrab
ಕೊಲಂಬೊ: ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಶುಕ್ರವಾರ ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.
ಗುರುವಾರ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ ಅವರು ಗುಣವರ್ಧನ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಶ್ರೀಲಂಕಾ ರಾಜಕೀಯದ ಹಿರಿಯ ನಾಯಕ, 73 ವರ್ಷದ ಗುಣವರ್ಧನ ಅವರು ಈ ಹಿಂದೆ ವಿದೇಶಾಂಗ ಸಚಿವ ಹಾಗೂ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಎಪ್ರಿಲ್ನಲ್ಲಿ ಆಗಿನ ಅಧ್ಯಕ್ಷ ಗೊತಬಯ ರಾಜಪಕ್ಸ ಅವರು ಗೃಹ ಸಚಿವರನ್ನಾಗಿ ನೇಮಿಸಿದ್ದರು.
ಗೊತಬಯ ರಾಜಪಕ್ಸ ಅವರು ದೇಶದಿಂದ ಪಲಾಯನಗೈದು ಆಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ 73 ವರ್ಷದ ವಿಕ್ರಮಸಿಂಘೆ ಅವರು ಗುರುವಾರ ದೇಶದ ಎಂಟನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಕ್ರಮಸಿಂಘೆ ಅವರಿಂದ ಪ್ರಧಾನಿ ಹುದ್ದೆ ತೆರವಾಗಿತ್ತು.
#BREAKING – Dinesh Gunawardena was sworn in as the new Prime Minister#DineshGunawardena #PrimeMinister #SriLanka pic.twitter.com/cNJW6WXq9c
— Ada Derana 24 (@AdaDerana_24) July 22, 2022
Next Story