ಎಸ್ಸೆಸ್ಸೆಫ್ ವತಿಯಿಂದ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮ
ಮಂಗಳೂರು : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ನೇತೃತ್ವದಲ್ಲಿ ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮ ದ.ಕ ಜಿಲ್ಲಾ (ಈಸ್ಟ್) ವತಿಯಿಂದ ಜುಲೈ 24 ರಂದು ಸುಳ್ಯ ದ ಗೂನಡ್ಕ ಸಜ್ಜನ ಸಭಾಂಗಣ, ಬೀಜದಕಟ್ಟೆ ಯಲ್ಲಿ ನಡೆಯಲಿದೆ.
ನೈತಿಕತೆ, ಸಮಗ್ರತೆ, ಸಮರ್ಪಣೆ ಎಂಬ ಧ್ಯೇಯ ದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯ ಐದು ಡಿವಿಷನ್ ಗಳಿಂದ ಸುಮಾರು 500 ರಷ್ಟು ವಿದ್ಯಾರ್ಥಿ ಗಳು ಭಾಗವಹಿಸಲಿದ್ದು. ಬೆಳಗ್ಗೆ 7 ಗಂಟೆಗೆ ಝಿಯಾರತ್ ನೊಂದಿಗೆ ಪ್ರಾರಂಭವಾಗಿ, ಧ್ವಜಾರೋಹಣ, ಉದ್ಘಾಟನಾ ಸಮಾರಂಭ, ಅಧ್ಯಾತ್ಮಿಕ ತರಗತಿ, ಮೋಟಿವೇಶನ್, ಪ್ಯಾನೆಲ್ ಚರ್ಚೆ, ಕೇರಿಯರ್ ಗೈಡೆನ್ಸ್ ಹಾಗೂ ಸಮಾರೋಪ ಸಮಾರಂಭ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ರಾಶಿದ್ ಬುಖಾರಿ ಕೇರಳ, ನೌಫಲ್ ಸಖಾಫಿ ಕಳಸ, ಡಾ. ಸಿ.ಎಮ್ ಹನೀಫ್ ಬೆಳ್ಳಾರೆ, ಸಿಎನ್ ಜಾಫರ್ ಕಾಸರಗೋಡು, ರಖೀಬ್ ಮಾಸ್ಟರ್ ಕನ್ನಂಗಾರ್ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟಕರಾಗಿ ಸಜ್ಜನ ಪ್ರತಿಷ್ಟಾನ ಬೀಜದಕಟ್ಟೆ ಇದರ ಸ್ಥಾಪಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ. ಉಮರ್ ಬೀಜದಕಟ್ಟೆ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ, ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ