Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022:...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022: ಅತ್ಯುತ್ತಮ ನಟ ಪುರಸ್ಕಾರ ಹಂಚಿಕೊಂಡ ಸೂರ್ಯ, ಅಜಯ್‌ ದೇವಗನ್‌

'ಜೀಟಿಗೆ' ತುಳು ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ

ವಾರ್ತಾಭಾರತಿವಾರ್ತಾಭಾರತಿ22 July 2022 5:04 PM IST
share
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022: ಅತ್ಯುತ್ತಮ ನಟ ಪುರಸ್ಕಾರ ಹಂಚಿಕೊಂಡ ಸೂರ್ಯ, ಅಜಯ್‌ ದೇವಗನ್‌

ಹೊಸದಿಲ್ಲಿ, ಜು.22: 2020ರಲ್ಲಿ ಬಿಡುಗಡೆಯಾದ ಚಿತ್ರಗಳಿಗಾಗಿನ 68ನೇ ರಾಷ್ಟ್ರೀಯ ಪುರಸ್ಕಾರಗಳನ್ನು ಶುಕ್ರವಾರ ಘೋಷಿಸಲಾಗಿದ್ದು, ತಮಿಳು ಸಿನೆಮಾ ಸೂರಾರೈ ಪೊಟ್ರು ಶ್ರೇಷ್ಠ ಚಿತ್ರ ಪ್ರಶಸ್ತಿ ಸೇರಿದಂತೆ ಐದು ಪುರಸ್ಕಾರಗಳನ್ನು ಗೆದ್ದುಕೊಂಡಿದೆ. ಈ ಬಾರಿ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ವಿಶೇಷವಾಗಿದೆ.

 ಅತ್ಯುತ್ತಮ ಅಭಿನಯಕ್ಕಾಗಿ ಸೂರಾರೈ ಪೊಟ್ರು ಚಿತ್ರದ ನಾಯಕ ನಟ ಸೂರ್ಯ ಹಾಗೂ ತಾನಾಜಿ - ದಿ ಅನ್‌ಸಂಗ್ ವಾರಿಯರ್ ಹಿಂದಿ ಚಿತ್ರದ ನಾಯಕ ನಟ ದೇವಗನ್ ಶ್ರೇಷ್ಠ ನಟ ಪುರಸ್ಕಾರವನ್ನು ಹಂಚಿಕೊಂಡಿದ್ದಾರೆ. ಶ್ರೇಷ್ಠ ನಟಿ ಪ್ರಶಸ್ತಿ ಸೂರಾರೈ ಪೊಟ್ರು ಚಿತ್ರದ ನಾಯಕಿ ಅಪರ್ಣಾ ಬಾಲಮುರಳಿಗೆ ಒಲಿದಿದೆ. ಅಲ್ಲದೆ ಸಮಗ್ರ ಮನರಂಜನೆಯ ಅತ್ಯುತ್ತಮ ಜನಪ್ರಿಯ ಸಿನೆಮಾ  ಪ್ರಶಸ್ತಿ ಕೂಡಾ  ಸೂರಾರೈಪೊಟ್ರು ಪಾಲಾಗಿದೆ. 

ಕನ್ನಡದ ತಲೆದಂಡ,ಡೊಳ್ಳು ನಾದದ ನವನೀತ  ಚಿತ್ರಗಳಿಗೆ ಪ್ರಶಸ್ತಿಯ ಗರಿ

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಿಗೆ ಕನ್ನಡದ ‘ತಲೆದಂಡ’, ‘ಡೊಳ್ಳು’, ‘ನಾದದ ನವನೀತ’ ಹಾಗೂ ತುಳುವಿನ ‘ಜೀಟಿಗೆ’ ಚಿತ್ರಗಳು ಪಾತ್ರವಾಗಿವೆ.
ನಟ ದಿ. ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ (ನಿರ್ದೇಶನ: ಪ್ರವೀಣ್ ಕೃಪಾಕರ್) ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು ರೂ. 1.50 ಲಕ್ಷ ನಗದು ಒಳಗೊಂಡಿದೆ. 

ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರವೂ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಅಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ(ಆಡಿಯೋಗ್ರಫಿ) ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ರೂ. 50 ಸಾವಿರ ನಗದು ಒಳಗೊಂಡಿದೆ. 

ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಚಿತ್ರಗಳ ವಿಭಾಗದಲ್ಲಿ ತುಳು ಚಿತ್ರ ‘ಜೀಟಿಗೆ’ಗೆ (ನಿರ್ದೇಶನ: ಸಂತೋಷ್ ಮಾಡ) ರಜತ ಕಮಲ ಲಭಿಸಿದೆ. 
ಅತ್ಯುತ್ತಮ ಕಲೆ, ಸಂಸ್ಕತಿ ಆಧಾರಿತ ಚಿತ್ರ ವಿಭಾಗದ ಅಡಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ? ಡಾ.ಪಂಡಿತ್ ವೆಂಕಟೇಶ್‌ಕುಮಾರ್’ ರಜತ ಕಮಲ ಪ್ರಶಸ್ತಿ ಪಡೆದಿದೆ.


ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು

ಶ್ರೇಷ್ಠ ಚಿತ್ರ: ಸೂರಾರೈ ಪೋಟ್ರು

ಸಮಗ್ರ ಮನರಂಜನೆಯ ಅತ್ಯುತ್ತಮ ಜನಪ್ರಿಯ ಚಿತ್ರ: ತಾನಾಜಿ: ದಿ ಅನ್‌ಸಂಗ್ ವಾರಿಯರ್

ಶ್ರೇಷ್ಟ ನಟ: ಸೂರ್ಯ  -ಚಿತ್ರ: ಸೂರಾರೈ ಪೊಟ್ರು(ತಮಿಳು) ಹಾಗೂ ಅಜಯ್‌ದೇವಗನ್: ತಾನಾಜಿ: ದಿ ಅನ್‌ಸಂಗ್ ವಾರಿಯರ್ (ಹಿಂದಿ)

ಶ್ರೇಷ್ಠ ನಟ: ಅಪರ್ಣಾ ಬಾಲಮುರಳಿ  (ಸೂರಾರೈ ಪೊಟ್ರು, ತಮಿಳು)

ಅತ್ಯುತ್ತಮ ನಿರ್ದೇಶಕ:  ದಿವಂಗತ ಸಚಿದಾನಂದನ್ ಕೆ.ಆರ್.- ಚಿತ್ರ: ಅಯ್ಯಪ್ಪನುಂ ಕೋಶಿಯುಂ (ಮಲಯಾಳಂ)

ಅತ್ಯುತ್ತಮ ಮೂಲ ಚಿತ್ರಕಥೆ: ಸೂರಾರೈ ಪೊಟ್ರು (ತಮಿಳು)

ಶ್ರೇಷ್ಠ ಸಂಭಾಷಣೆ: ಮಂಡೇಲಾ (ತಮಿಳು)

ಶ್ರೇಷ್ಠ ಛಾಯಾಗ್ರಹಕ: ಅವಿಜಾತ್ರಿಕ್ (ಬಂಗಾಳಿ)

ಅತ್ಯುತ್ತಮ ಪೋಷಕ ನಟ: ಲಕ್ಷ್ಮಿ ಪ್ರಿಯಾ ಚಂದ್ರಮೌಳಿ-ಶಿವರಂಜನಿಯುಂ ಇನ್ನುಂ ಸಿಲ ಪೆಣ್ಮುಗಳುಂ (ತಮಿಳು)

ಅತ್ಯುತ್ತಮ ಪೋಷಕ ನಟ: ಬಿಜು ಮೆನನ್- ಅಯ್ಯುಪ್ಪನುಂ ಕೋಶಿಯುಂ (ಮಲಯಾಳಂ)

ಸಾಮಾಜಿಕ ಕಾಳಜಿಯ ಚಿತ್ರ: ಫ್ಯುನೆರಲ್ (ಮರಾಠಿ)

ಮಹಿಳಾ ಹಿನ್ನೆಲೆ ಗಾಯಕಿ: ನಂಚಮ್ಮ - ಅಯ್ಯಪ್ಪುನುಂ ಕೋಶಿಯುಂ (ಮಲಯಾಳಂ)

ಹಿನ್ನೆಲೆಗಾಯಕ: ರಾಹುಲ್‌ದೇಶಪಾಂಡೆ- ಮಿ ವಸಂತರಾವ್ (ಮರಾಠಿ)
  
ಅತ್ಯುತ್ತಮ ಚೊಚ್ಚಲ ನಿರ್ದೇಶನಕ್ಕಾಗಿನ  ಇಂದಿರಾಗಾಂಧಿ ಪುರಸ್ಕಾರ: ಮಡೊನ್ನೆ ಅಶ್ವಿನ್ ಫಾರ್ ಮಂಡೇಲಾ (ತಮಿಳು)

ಶ್ರೇಷ್ಠ ಮಕ್ಕಳ ಚಿತ್ರ: ಸುಮಿ (ಮರಾಠಿ) 

ಪರಿಸರ ಸಂರಕ್ಷಣೆ: ತಲೆದಂಡ (ಕನ್ನಡ)

ಶ್ರೇಷ್ಠ ಹಿಂದಿ ಚಿತ್ರ: ತುಳಸಿದಾಸ್ ಜೂನಿಯರ್

ಶ್ರೇಷ್ಠ ಬಂಗಾಳಿ ಚಿತ್ರ:ಅವಿಜಾತ್ರಿಕ್

ಶ್ರೇಷ್ಠ ತೆಲುಗು ಚಿತ್ರ: ಕಲರ್ ಫೋಟೋ

ಶ್ರೇಷ್ಠ ತಮಿಳು ಚಿತ್ರ: ಶಿವರಂಜನಿಯುಂ ಇನ್ನು ಸಿ ಪೆನ್ನುಂಗಳುಂ

ಶ್ರೇಷ್ಠ ಅಸ್ಸಾಮಿ ಚಿತ್ರ: ಬ್ರಿಜ್

ಶ್ರೇಷ್ಠ ಹರ್ಯಾಣವಿ ಚಿತ್ರ: ದಾದಾ ಲಕ್ಷ್ಮಿ

ಶ್ರೇಷ್ಠ ಅಸ್ಸಾಮಿ ಚಿತ್ರ: ಬ್ರಿಜ್

ಶ್ರೇಷ್ಠ ಮಲಯಾಳಂ ಚಿತ್ರ: ತಿಂಗಳಾಯ್ಚ ನಿಶ್ಚಯಂ

ಶ್ರೇಷ್ಠ ದಿಮಾಸಾ ಚಿತ್ರ: ಸೆಮ್‌ಖೋರ್

ಶ್ರೇಷ್ಠ ತುಳು ಚಿತ್ರ: ಜೀಟಿಗೆ
 
ಶ್ರೇಷ್ಠ ಮರಾಠಿ ಚಿತ್ರ:  ಗೋಷ್ಟ ಏಕಾ ಪೈದಾನಿಚಿ

ಶ್ರೇಷ್ಠ ಕನ್ನಡ ಚಿತ್ರ: ಡೊಳ್ಳು

ಶ್ರೇಷ್ಠ ಸಾಹಸ ನಿರ್ದೇಶನ ಪುರಸ್ಕಾರ: ಎ.ಕೆ. ,ಅಯ್ಯಪ್ಪನುಂ ಕೋಶಿಯುಂ (ಮಲಯಾಳಂ)

ಅತ್ಯುತ್ತಮ ಕೊರಿಯೋಗ್ರಫಿ: ಸಂಧ್ಯಾ ರಾಜು - ನಾಟ್ಯಂ  (ತೆಲುಗು)

ಅತ್ಯುತ್ತಮ ಗೀತರಚನೆ: ಮನೋಜ್ ಮುಂತಾಸಿರ್ -ಸೈನಾ (ಹಿಂದಿ)

ಅತ್ಯುತ್ತಮ ಸಂಗೀತ ನಿರ್ದೇಶನ: ತಮಮ್ ಎಸ್.- ಅಲಾ ವೈಕುಂಠಪುರ‌್ರಂಮುಲೋ (ತೆಲುಗು)

ಅತ್ಯುತ್ತಮ ಹಿನ್ನೆಲೆ ಸಂಗೀತ: ಜಿ.ವಿ. ಪ್ರಕಾಶ್ -ಸೂರಾರೈ ಪೊಟ್ರು (ತಮಿಳು)

ಅತ್ಯುತ್ತಮ ವಸ್ತ್ರವಿನ್ಯಾಸ:ತಾನಾಜಿ: ದಿ ಅನ್‌ಸಂಗ್ ವಾರಿಯರ್

ಶ್ರೇಷ್ಠ ಮೇಕಪ್ ಕಲಾವಿದ: ಟಿ.ವಿ. ರಾಮಬಾಬು-ನಾಟ್ಯಂ (ತೆಲುಗು)

ಶ್ರೇಷ್ಠ ನಿರ್ಮಾಣ ವಿನ್ಯಾಸ: ಕಪ್ಪೆಲಾ (ಮಲಯಾಳಂ)

ಶ್ರೇಷ್ಠ ಸಂಕಲನ: ಶಿವರಂಜನಿಯುಂ ಇನ್ನು ಸಿಲ ಪೆಣ್‌ಗಳ್ (ತಮಿಳು)

ಅತ್ಯುತ್ತಮ ಧ್ವನಿ ವಿನ್ಯಾಸ: ಮಿ ವಸಂತರಾವ್

ನಾನ್‌ಫೀಚರ್ (ಕಥಾಚಿತ್ರೇತರ) ಚಿತ್ರಗಳ ವಿಭಾಗದಲ್ಲಿ ಮರಾಠಿಯ ಕುಂಕುಮಾರ್ಚನ್ ಶ್ರೇಷ್ಠ ಚಿತ್ರ ಪ್ರಶಸ್ತಿ ಗೆದ್ದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X