ಮೃತ ಮಸೂದ್ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ

ಮಂಗಳೂರು: ಸುಳ್ಯ ತಾಲೂಕಿನ ಕಳಂಜದಲ್ಲಿ ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಮಸೂದ್ ಮನೆಗೆ ಕೆಪಿಸಿಸಿ ಮುಖಂಡ ಟಿಎಂ ಶಾಹೀದ್ ತೆಕ್ಕಿಲ್ ನೇತೃತ್ವದ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿತು.
ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಟಿ, ಹನೀಫ್ ಸಂಟ್ಯಾರ್, ಸಿದ್ದೀಕ್ ಕೋಕೋ, ಕಳಂಜ ಜಮಾಅತ್ ಮಾಜಿ ಅಧ್ಯಕ್ಷ ಅಝೀಝ್ ಕಳಂಜ, ಅಶ್ರಫ್ ಪೆರ್ಲಂಪ್ಪಾಡಿ, ಹೈದರ್ ನಿಯೋಗದಲ್ಲಿದ್ದರು.
ಮೃತ ಮಸೂದ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಟಿಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದರೂ ಇದರ ಹಿಂದಿರುವ ಸೂತ್ರಧಾರಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Next Story





