ಅಡ್ಡೂರು ಸಹಾರಾ ಸ್ಕೂಲ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪ್ರೇರಣಾ ಮಾಹಿತಿ ಕಾರ್ಯಕ್ರಮ

ಮಂಗಳೂರು : ಆಡಳಿತಾತ್ಮಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಎಳೆ ವಯಸ್ಸಿನಲ್ಲೇ ಪ್ರೇರಣೆ ನೀಡಿ ಅವರನ್ನು ಸಜ್ಜುಗೊಳಿಸಬೇಕು. ಹಾಗಾದಲ್ಲಿ ಮಾತ್ರ ಜಿಲ್ಲೆಯಿಂದ ಸಾಕಷ್ಟು ಅಧಿಕಾರಿಗಳು ಸೃಷ್ಟಿಯಾಗಲಿದ್ದಾರೆ ಎಂದು ಮುಸ್ಲಿಂ ಶಿಕ್ಷಣ ಒಕ್ಕೂಟ (ಮೀಫ್) ಇದರ ವೀಕ್ಷಕ ಸಿರಾಜ್ ಮಣೆಗಾರ್ ಅಭಿಪ್ರಾಯಪಟ್ಟರು.
ಅಡ್ಡೂರಿನ ಸಹಾರಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಐಎಎಸ್ ಐಪಿಎಸ್, ಐಎಫ್‌ಎಸ್ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಯುಪಿ ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಮುಖ್ಯ ಶಿಕ್ಷಕ ಕೇಶವ ಎಚ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಂಗಳೂರಿನ ಸೈಯ್ಯದ್ ಹಶ್ಮಿ, ಶಾಲಾ ಸಂಚಾಲಕ ಎ.ಕೆ. ಇಸ್ಮಾಯಿಲ್, ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸಫಾ ಮರ್ವ ಸ್ವಾಗತಿಸಿದರು. ಸಹಶಿಕ್ಷಕಿ ಪ್ರಜ್ಞಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಫಾತಿಮಾ ಅಫೀಫಾ ವಂದಿಸಿದರು.
Next Story





