ಉಡುಪಿ; ಹೆದ್ದಾರಿ ಹೊಂಡ ತಪ್ಪಿಸಲು ಹೋಗಿ ಗದ್ದೆಗೆ ಬಿದ್ದ ಕಾರು: ಪತ್ರಕರ್ತ ಪ್ರಾಣಾಪಾಯದಿಂದ ಪಾರು
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಸಮೀಪ ಹೆದ್ದಾರಿಯ ಹೊಂಡ ತಪ್ಪಿಸಲು ಹೋದ ಕಾರು ಗದ್ದೆಗೆ ಬಿದ್ದಿದ್ದು, ಪತ್ರಕರ್ತರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ನಡೆದಿದೆ.
ಪಡುಬಿದ್ರಿಯ ಪತ್ರಕರ್ತ ಹಮೀದ್ ಪಡುಬಿದ್ರೆ ತಮ್ಮ ಕಾರಿನಲ್ಲಿ ಉಡುಪಿಯಿಂದ ಪಡುಬಿದ್ರೆಗೆ ಮರಳುತಿದ್ದು, ಕಲ್ಲಾಪುವಿನಲ್ಲಿ ಹೆದ್ದಾರಿಯ ಹೊಂಡ ತಪ್ಪಿಸಲು ಹೋಗಿ ಕಾರನ್ನು ಎಡಕ್ಕೆ ತಿರುಸಿದಾಗ ನಾಯಿಯೊಂದು ಅಡ್ಡಬಂದಿದ್ದು, ಇದರಿಂದ ಕಾರು ರಸ್ತೆಯಿಂದ ಗದ್ದೆಗೆ ಉರುಳಿ ಬಿದ್ದಿದೆ.
ಘಟನೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದರೂ, ಸೀಟಿನ ಬೆಲ್ಟ್ ಕಟ್ಟಿಕೊಂಡಿದ್ದ ಹಮೀದ್, ಸಕಾಲದಲ್ಲಿ ಏರ್‌ಬ್ಯಾಗ್ ತೆರೆದ ಕಾರಣ ಯಾವುದೇ ಅಪಾಯದಿಂದ ಪಾರಾಗಿದ್ದಾರೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Next Story