ಸಿರಿಯಾ: ರಶ್ಯ ವಾಯುದಾಳಿಯಲ್ಲಿ 7 ಮಂದಿ ಮೃತ್ಯು
ದಮಾಸ್ಕಸ್, ಜು.22: ಉತ್ತರ ಸಿರಿಯಾದಲ್ಲಿ ಎದುರಾಳಿಗಳ ನಿಯಂತ್ರಣದಲ್ಲಿರುವ ಇದ್ಲಿಬ್ ಪ್ರಾಂತದ ಮೇಲೆ ರಶ್ಯ ನಡೆಸಿದ ವಾಯುದಾಳಿಯಲ್ಲಿ 4 ಮಕ್ಕಳ ಸಹಿತ 7 ಮಂದಿ ಮೃತಪಟ್ಟಿರುವುದಾಗಿ ಸಿರಿಯಾದ ನಾಗರಿಕ ರಕ್ಷಣಾ ಇಲಾಖೆ ಹೇಳಿದೆ. ಅಲ್-ಜದೀದಾಹ್ ಗ್ರಾಮದ ಮೇಲೆ ನಡೆದಿರುವ ದಾಳಿಯಲ್ಲಿ ಇತರ 12 ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ರಶ್ಯದ 2 ಎಸ್-ಯು34 ಯುದ್ಧವಿಮಾನಗಳು ದಾಳಿ ನಡೆಸಿದೆ.
4 ದಾಳಿ ನಡೆದಿದೆ ಎಂದು ಮಾನವ ಹಕ್ಕು ನಿಗಾ ಸಮಿತಿಯ ಸಿರಿಯಾ ಕಚೇರಿಯ ಹೇಳಿಕೆ ತಿಳಿಸಿದೆ. ಮೃತರಲ್ಲಿ ಇಬ್ಬರು ಬಾಲಕರು ಮತ್ತು ಇಬ್ಬರು ಬಾಲಕಿಯರು.
ಗಾಯಗೊಂಡವರಲ್ಲಿಯೂ ಹೆಚ್ಚಿನವರು ಮಕ್ಕಳೇ ಆಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಸಿರಿಯಾ ಬಿಕ್ಕಟ್ಟಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಮಾನವೀಯ ಕ್ರಮಗಳ ಪ್ರಾದೇಶಿಕ ಉಪಸಂಯೋಜಕ ಮಾರ್ಕ್ ಕಟ್ಸ್ ದಾಳಿಯನ್ನು ಖಂಡಿಸಿದ್ದಾರೆ
Next Story