ಲಿಬಿಯಾ: ಭದ್ರತಾ ಪಡೆಯ ಯೋಧರ ಮಧ್ಯೆ ಸಂಘರ್ಷ; ಹಲವರ ಮೃತ್ಯು
ಟ್ರಿಪೋಲಿ, ಜು.22: ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ಭದ್ರತಾ ಪಡೆಗಳ ಪ್ರತಿಸ್ಪರ್ಧಿ ಬಣಗಳ ಮಧ್ಯೆ ನಡೆದ ತೀವ್ರ ಘರ್ಷಣೆಯಲ್ಲಿ ಹಲವರು ಮೃತಪಟ್ಟಿದ್ದು , ಈ ಘರ್ಷಣೆಯು ದೇಶದಲ್ಲಿ ಮತ್ತೆ ರಾಜಕೀಯ ಅಸ್ಥಿರತೆಯ ಅಪಾಯಕ್ಕೆ ಕಾರಣವಾಗಬಹುದು ಎಂದು ವರದಿಯಾಗಿದೆ.
ಟ್ರಿಪೋಲಿಯ ಅಯ್ನಿ ಝರಾ ವಲಯದಲ್ಲಿ ಗುರುವಾರ ರಾತ್ರಿ ಅಧ್ಯಕ್ಷರ ಸಮಿತಿಯ ಭದ್ರತಾ ಪಡೆ ಮತ್ತು ವಿಶೇಷ ನಿರೋಧ ಪಡೆಯ ಮಧ್ಯೆ ಘರ್ಷಣೆ ಆರಂಭವಾಗಿದೆ. ಬಳಿಕ ಶುಕ್ರವಾರ ಬೆಳಿಗ್ಗೆ ಸೆಂಟ್ರಲ್ ಡಿಸ್ಟ್ರಿಕ್ಟ್ ನ ರ್ಯಾಡಿಸನ್ ಬ್ಲೂಹೋಟೆಲ್ ನ ಬಳಿ ಘರ್ಷಣೆ ನಡೆದಿದೆ. ಈ ಪ್ರದೇಶದಲ್ಲಿ ಹಲವು ಸರಕಾರಿ ಮತ್ತು ಮತ್ತು ಅಂತರಾಷ್ಟ್ರೀಯ ಏಜೆನ್ಸಿಗಳ, ರಾಜತಾಂತ್ರಿಕ ಕಚೇರಿಗಳಿವೆ. ಘರ್ಷಣೆಯ ಮಾಹಿತಿ ಲಭಿಸುತ್ತಿದ್ದಂತೆಯೇ ಸೇನೆಯ ವಾಹನಗಳು ಪ್ರದೇಶವನ್ನು ಸುತ್ತುವರಿದಿದೆ ಎಂದು ವರದಿಯಾಗಿದೆ.
Next Story