ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ; ಶಕ್ತಿ ರೆಸಿಡೆನ್ಶಿಯಲ್, ಲೂರ್ಡ್ಸ್ ಸೆಂಟ್ರಲ್, ಎಕ್ಕೂರು ಶಾಲೆಗೆ ಶೇ.100 ಫಲಿತಾಂಶ

ಮಂಗಳೂರು: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಮೊದಲ ಬ್ಯಾಚ್‌ನ ಸಿಬಿಎಸ್‌ಇ ೧೦ನೇ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದಾರೆ.
39 ವಿದ್ಯಾರ್ಥಿಗಳ ಪೈಕಿ 7 ಮಂದಿ ವಿಶೇಷ ಶ್ರೇಣಿ ಹಾಗೂ ೨೭ ಮಂದಿ ಪ್ರಥಮ ಶ್ರೇಣಿ, ೫ ಮಂದಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ರೋಹಿತ್ ಕಲ್ಲೂರಾಯ 500 ರಲ್ಲಿ 482, ಶುಕ್ಲ ಎಚ್.ಸಿ, 500ರಲ್ಲಿ 465, ಸಿದ್ದಾಂತ್ ಜೀವನ್ ಆಚಾರ್ ೪೫೭, ಗುರುದೇವ್ ೪೫೫, ಸೃಷ್ಟಿ ಸಂದೀಪ್ ಚಂಚರ್ ೪೪೬, ಚಿರಂತನಾಡಿ ಎಂ. ೪೪೩, ಚಿನ್ಮಯಿ ಭಟ್ ೪೩೩ ಅಂಕ ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ.
*ತೇರ್ಗಡೆಯಾಗಿರುವ ವಿದ್ಯಾರ್ಥಿಗಳನ್ನು ಆಡಳಿತಾಧಿಕಾರಿ ಡಾ.ಕೆ.ಸಿ.ನಾಕ್, ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಅಭಿನಂದಿಸಿದ್ದಾರೆ.
ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ಗೆ ಶೇ.100 ಫಲಿತಾಂಶ
ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯಲ್ಲಿ ನಗರದ ಲೂರ್ಡ್ಸ್ ಸೆಂಟ್ರಲ್ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.
೧೫೧ ವಿದ್ಯಾರ್ಥಿಗಳಲ್ಲಿ ೯೮ ಮಂದಿ ವಿಶಿಷ್ಟ ಶ್ರೇಣಿಯಲ್ಲಿ, ೩೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅಡಿನ್ ರಿಯಾನ್ ಡಿಕೋಸ್ಟ ೪೯೧ (ಶೇ.೯೮.೨) ಅ೦ಕ ಗಳಿಸಿ ಶಾಲೆಗೆ ಪ್ರಥಮ, ಸ್ರಿಸ್ತಿರಾ ಮುಖರ್ಜಿ ೪೯೦ (ಶೇ.೯೮) ದ್ವಿತೀಯ, ರೈಸಲ್ ನೆವಾ ಡಿಸಿಲ್ವಾ ೪೮೭ (ಶೇ.೯೭.೪) ತೃತಿಯ ಸ್ಥಾನ ತಂದಿದ್ದಾರೆ ಎಂದು ಪ್ರಾಂಶುಪಾಲ ವಂ.ಫಾ. ರೋಬರ್ಟ್ ಡಿಸೋಜ ತಿಳಿಸಿದ್ದಾರೆ.
ಎಕ್ಕೂರು ಕೇಂದ್ರೀಯ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
ನಗರದ ಎಕ್ಕೂರಿನ ಕೇಂದ್ರೀಯ ವಿದ್ಯಾಲಯ (ನಂ.೨) ೨೦೨೧-೨೨ನೆ ಶೈಕ್ಷಣಿಕ ವರ್ಷದ ೧೦ನೆ ಮತ್ತು ೧೨ನೆ ತರಗತಿಯ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ದಾಖಲಿಸಿದೆ.
೧೨ನೆ ತರಗತಿಯ ಒಬ್ಬ ವಿದ್ಯಾರ್ಥಿ ಶೇ.೯೨.೪ದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ೧೦ನೆ ತರಗತಿಯ ೭೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ೧೧ ಮಂದಿ ಶೇ.೯೦ಕ್ಕೂ ಹೆಚ್ಚಿನ ಅಂಕ ಗಳಿಸಿದ್ದಾರೆ. ವಿಸ್ಮಿತ್ ಶೆಟ್ಟಿ ಶೇ. ೯೭ ಅಂಕದಿಂದ ಪ್ರಥಮ ಸ್ಥಾನಗಳಿಸಿದ್ದಾನೆ ಎಂದು ಪ್ರಾಂಶುಪಾಲ ಎನ್.ಎಸ್. ಯಾದವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
*ಸಿಬಿಎಸ್‌ಇ ೧೦ನೆ ತರಗತಿಯ ಪರೀಕ್ಷೆಯಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯವು ಶೇ.೧೦೦ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ ೧೨೮ ವಿದ್ಯಾರ್ಥಿಗಳ ಪೈಕಿ ೯೪ ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಸ್. ಬಾಲಯಾಮಿನಿ ಶೇ.೯೮.೪, ರಕ್ಷಾ ಎನ್‌ಎಸ್ ಶೇ.೯೮.೪, ಶ್ವೇತಾ ಕೆ. ಶೇ.೯೮.೨, ಶಿವಾನಿ ಬಿ. ಶೇ.೯೮.೨ ಫಲಿತಾಂಶ ದಾಖಲಿಸಿದ್ದಾರೆ.
ಸಿಬಿಎಸ್‌ಇ ೧೨ನೆ ತರಗತಿಯ ಪರೀಕ್ಷೆಯಲ್ಲಿ ಪಣಂಬೂರು ಕೇಂದ್ರೀಯ ವಿದ್ಯಾಲಯವು ಶೇ.೯೩.೮ ಫಲಿತಾಂಶ ದಾಖಲಿಸಿದೆ.
ಪರೀಕ್ಷೆ ಬರೆದ ೬೫ ವಿದ್ಯಾರ್ಥಿಗಳ ಪೈಕಿ ೬೧ ಮಂದಿ ತೇರ್ಗಡೆ ಹೊಂದಿದ್ದಾರೆ. ಅದರಲ್ಲಿ ೩೨ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೇಯಸ್ ಕುಮಾರ್ ಪಿಎನ್ ಶೇ.೯೬.೪ ಮತ್ತು ಅಕ್ಷಯಾ ಶೇ.೯೪.೬ ಹಾಗೂ ರಕ್ಷಾ ಶೇ. ೯೪ ಫಲಿತಾಂಶ ದಾಖಲಿಸಿದ್ದಾರೆ.







