ಜು. 24: ಆಲಿಯಾ ಹಳೆ ವಿದ್ಯಾರ್ಥಿ ಸಮಾವೇಶ
ಮಂಗಳೂರು : ಕಾಸರಗೋಡು ಜಿಲ್ಲೆಯ ಆಲಿಯಾ ಕ್ಯಾಂಪಸ್‌ನಲ್ಲಿ ಜು.24ರಂದು ಬೆಳಗ್ಗೆ 9.30ರಿಂದ ಸಂಜೆ 4ರವರೆಗೆ ಆಲಿಯಾ ಹಳೆ ವಿದ್ಯಾರ್ಥಿ ಸಮಾವೇಶ (ಅಲುಮ್ನಿ ಮೀಟ್) ನಡೆಯಲಿದೆ.
ಖ್ಯಾತ ಭಾಷಾ ವಿದ್ವಾಂಸ ಹಾಗೂ ಆಲಿಯಾ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿ ಅಬ್ದೂ ಶಿವಪುರಂ ಶಾರ್ಜಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಆಲಿಯಾ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಹಬೀಬುರ‌್ರಹ್ಮಾನ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಮುಹಮ್ಮದ್, ನಿವೃತ್ತ ಪ್ರಾಂಶುಪಾಲ ಕೆ.ವಿ.ಅಬೂಬಕ್ಕರ್ ಉಮರಿ ಮತ್ತು ಅಬುಲ್ ಗೈಸ್ ನದ್ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story