Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ರಾಜಶೇಖರ್ | ಕೆಲವು ಮರೆಯದ ಝಲಕ್ ಗಳು...!

ರಾಜಶೇಖರ್ | ಕೆಲವು ಮರೆಯದ ಝಲಕ್ ಗಳು...!

ವಾರ್ತಾಭಾರತಿವಾರ್ತಾಭಾರತಿ24 July 2022 10:58 AM IST
share
ರಾಜಶೇಖರ್ | ಕೆಲವು ಮರೆಯದ ಝಲಕ್ ಗಳು...!

ಸಂವರ್ತ ‘ಸಾಹಿಲ್’ ಅವರು ಬರೆದಿರುವ ಸುದೀರ್ಘ ಲೇಖನದ ಆಯ್ದ ಕೆಲವು ಭಾಗಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

2019ರ ಮಳೆಗಾಲ. ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿ ಹೊರಬಂದಿದ್ದ ಜಿ. ರಾಜಶೇಖರ್ ಅವರಿಗೆ ಇನ್ನೊಂದು ಜೀವದ ಆಧಾರ ಇಲ್ಲದೆ ಓಡಾಡಲು ಕಷ್ಟವಾಗುತಿತ್ತು. ತನಗೆ ಸ್ವತಂತ್ರವಾಗಿ ಓಡಾಡಲು ಆಗುತ್ತದೆ ಎಂದು ಅವರು ಹೇಳುತ್ತಿದ್ದರೂ, ಅವರ ದೇಹ ಸಂಪೂರ್ಣವಾಗಿ ಸಾಥ್ ನೀಡುತ್ತಿರಲಿಲ್ಲ. ನಡೆದಾಡಲು ಆಗುತ್ತಿದ್ದರೂ, ಬ್ಯಾಲೆನ್ಸ್ ಮಾಡಲು ಇನ್ನೊಬ್ಬರು ಜೊತೆಗಿರಬೇಕಾಗುತಿತ್ತು. ಅಲ್ಲಿ ತನಕ ನಿತ್ಯವೂ ಲೈಬ್ರರಿ, ಪ್ರತಿಭಟನೆ, ಸಿನೆಮಾ, ನಾಟಕ, ಸರ್ಕಸ್, ಸಾಹಿತ್ಯ ಗೋಷ್ಠಿ, ಸಂಘಟನೆ ಮೀಟಿಂಗ್- ಹೀಗೆ ಎಲ್ಲಾ ಕಡೆ ತಮ್ಮ ಪಾಡಿಗೆ ಹೋಗಿ ಬಂದು ಮಾಡಿಕೊಂಡಿದ್ದ ಅವರಿಗೆ ಹಿಂದಿನಂತೆ ಎಲ್ಲಾ ಕಡೆ ಹೋಗಲು ಆಗದೆ ಇರುವುದು ಸಹಜವಾಗಿಯೇ ಕಿರಿಕಿರಿ ಉಂಟು ಮಾಡುತಿತ್ತು. ನಾನು ಅವರನ್ನು ಕಾಣಲು ಅವರ ಮನೆಗೆ ಆಗಾಗ ಹೋಗಿ ಬರುತ್ತಿದ್ದೆ. 

ಆಗೊಮ್ಮೆ ಗಿರೀಶ್ ಕಾರ್ನಾಡ್ ಸ್ಮರಣಾರ್ಥ ಮಣಿಪಾಲದಲ್ಲಿ ಒಂದು ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾನು ಆ ಕಾರ್ಯಕ್ರಮಕ್ಕೆ ಹೋಗಲು ಇಷ್ಟಪಡುತ್ತೇನೆ ಎಂದು ಜಿ.ಆರ್. ಅವರನ್ನು ಭೇಟಿ ಮಾಡಲು ಹೋದ ಸಂದರ್ಭದಲ್ಲಿ ನನ್ನ ಬಳಿ ಹೇಳಿದರು. ಹಾಗೆ ಹೇಳಿದವರೇ ತಕ್ಷಣಕ್ಕೆ, ನನಗೆ ಒಬ್ಬನಿಗೆ ಹೋಗಲು ಬಿಡುವುದಿಲ್ಲ ಅಂತ ನನ್ನ ಹೆಂಡತಿ ಮಕ್ಕಳು ಹೇಳುತ್ತಿದ್ದಾರೆ. ಆದರೆ ನಾನು ಹೋಗಲೇಬೇಕು ಎಂದರು. ಹಿಂದೆ ಅವರಿದ್ದ ಸ್ಥಿತಿಗೂ ಈಗ ಅವರಿರುವ ಸ್ಥಿತಿಗೂ ವ್ಯತ್ಯಾಸ ತಿಳಿದಿದ್ದರಿಂದ ಅವರ ಈ ದೃಢ ನಿರ್ಧಾರ ಕೇಳಿ ಆತಂಕಿತನಾದೆ. ಸರ್, ನಿಮಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಬೇಕೆಂದಿದ್ದರೆ ಓಕೆ. ಆದರೆ ನೀವೊಬ್ಬರೇ ಬಸ್ ಹತ್ತುವ ಸಾಹಸ ಎಲ್ಲಾ ಮಾಡಲು ಹೋಗಬೇಡಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ, ಎಂದೆ. ಅದನ್ನು ಕೇಳಿದ್ದೇ ತಡ, ಜಿ.ಆರ್. ಬಹಳ ಸಂತೋಷದಿಂದ, ಹೌದಾ? ಥ್ಯಾಂಕ್ಸ್! ಎಂದದ್ದು ಮಾತ್ರವಲ್ಲ, ತಮ್ಮ ಹೆಂಡತಿಯನ್ನು ಕರೆದು, ನೋಡು, ನಾನು ನಾಡಿದ್ದು ಒಬ್ಬನೇ ಹೋಗುವುದಿಲ್ಲ. ಸಂವರ್ತ ಬರ್ತಾರಂತೆ. ನಾನು ಅವರ ಜೊತೆ ಹೋಗ್ತೇನೆ, ಎಂದು ಹೋಗಲು ಪರ್ಮಿಷನ್ ತೆಗೆದುಕೊಂಡರು.

ಆ ಕಾರ್ಯಕ್ರಮಕ್ಕೆ ಹೋಗುವಾಗ ಜಿ.ಆರ್. ಹೇಳಿದ್ದು- ‘‘ಗಿರೀಶ್ ಒಬ್ಬರು ತುಂಬಾ ಇಂಪಾರ್ಟೆಂಟ್ ಪಬ್ಲಿಕ್ ಇಂಟಲೆಕ್ಚುಯಲ್ ಆಗಿದ್ರು. ಒಳ್ಳೆಯ ನಾಟಕಕಾರರೂ ಹೌದು. ಮತ್ತು ನನಗೆ ಸ್ನೇಹಿತರು ಸಹ ಆಗಿದ್ದರು. ಹಾಗಾಗಿ ಈ ಕಾರ್ಯಕ್ರಮ ಮಿಸ್ ಮಾಡಿಕೊಳ್ಳುವಂತಿಲ್ಲ’’

ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಹೊರಟ ಅವರ ನಡೆಯಲ್ಲೂ, ಅವರ ನುಡಿಯಲ್ಲೂ ಜಿ.ಆರ್. ಅವರಿಗಿರುವ ಬದ್ಧತೆ, ಕಲಾಪ್ರೀತಿ, ಮತ್ತು ಅವರ ಹೃದಯದಲ್ಲಿರುವ ನಿಷ್ಕಲ್ಮಶ ಪ್ರೀತಿ ಎರಡೂ ಸ್ಪಷ್ಟವಾಗಿ ಕಾಣಿಸುತಿತ್ತು. ಅದೇನೂ ಹೊಸತಲ್ಲ. ಅವರ ಬದ್ಧತೆ, ಅವರ ಪ್ರೀತಿ ಅವರ ಹೆಜ್ಜೆ-ಹೆಜ್ಜೆಯಲ್ಲೂ, ಅಕ್ಷರ-ಅಕ್ಷರದಲ್ಲೂ ಕಾಣಿಸುವಂತದ್ದು. ಅಂದು ಕಾರ್ನಾಡ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಿನೆ-ಚಿಂತಕ ಮತ್ತು ಕಲಾ ವಿಮರ್ಶಕ ಅಮೃತ್ ಗಂಗರ್ ಅವರಿಗೆ ಜಿ. ಆರ್. ಅನ್ನು ಪರಿಚಯ ಮಾಡಿಸುತ್ತ ಹೇಳಿದ್ದೆ, ನನಗೆ ಜೀವನದಲ್ಲಿ ನಿಮ್ಮನ್ನೂ ಸೇರಿಸಿ ಹಲವಾರು ಗುರುಗಳಿದ್ದಾರೆ. ಆದರೆ ನನ್ನ ಏಕೈಕ ಹೀರೋ ಎಂದರೆ ಇವರೇ- ಜಿ. ರಾಜಶೇಖರ್.

***************

ಆದಿ ಉಡುಪಿ ಬೆತ್ತಲೆ ಪ್ರಕರಣ ನಡೆದಾಗ ಅದರ ಕುರಿತು ಜಿ. ರಾಜಶೇಖರ್ ಬಹಳ ಮೂವಿಂಗ್ ಆದ ಒಂದು ಲೇಖನ ಬರೆದರು. ಅದುಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಮುಂದೆ ಕೋರ್ಟಿನಲ್ಲಿ ಆ ಕೇಸ್ ವಿಚಾರಣೆ ಆರಂಭಗೊಂಡಾಗ, ಪ್ರತೀ ವಿಚಾರಣೆಗೂ ಜಿ.ಆರ್. ಖುದ್ದು ಹೋಗಿ ಕೂರುತ್ತಿದ್ದರು. ಅಲ್ಲಿ ಅವರು ಸಾಕ್ಷಿಯೂ ಅಲ್ಲ, ನೊಂದವರೂ ಅಲ್ಲ. ಆದರೂ ಪ್ರತೀ ಹಿಯರಿಂಗ್ ದಿನ ಅವರು ಕೋರ್ಟ್‌ನಲ್ಲಿ ಹಾಜರಿರು ತ್ತಿದ್ದರು. ಇದು ಸಂಘ ಪರಿವಾರದವರು ಗಮನಿಸಿದ್ದರು. ಜಿ.ಆರ್. ಅವರು ಆ ಇಡೀ ವಿಚಾರಣೆಗೆ ಸಾಕ್ಷಿ ಆಗಿದ್ದು, ಸಂಘ ಪರಿವಾರದವರಿಗೆ ಎಷ್ಟೊಂದು ಕಿರಿಕಿರಿ ಉಂಟು ಮಾಡಿತ್ತು ಎಂಬುದು ಸ್ಪಷ್ಟವಾಗಿದ್ದು, ಆದಿ ಉಡುಪಿ ಬೆತ್ತಲೆ ಪ್ರಕರಣ ಕುರಿತಾಗಿ ಕೋರ್ಟ್ ತೀರ್ಪು ಹೊರಬಿದ್ದ ಕ್ಷಣ. ಅಂದು ಕೋರ್ಟ್ ತೀರ್ಪು ಬರುತ್ತಿದ್ದಂತೆ ಸಂಘ ಪರಿವಾರದವರು ಕೋರ್ಟ್ ಆವರಣದಲ್ಲಿಯೇ ವಿಜಯೋತ್ಸವ ಆಚರಿಸಿದರು ಮತ್ತು ಮೆರವಣಿಗೆ ಆರಂಭಿಸಿದರು. ಆ ವಿಜಯೋತ್ಸವದಲ್ಲಿ, ಮೆರವಣಿಗೆಯಲ್ಲಿ ಅವರು ಕೂಗಿದ ಘೋಷಣೆಗಳಲ್ಲಿ ಒಂದು: ರಾಜಶೇಖರ್ ಪಂಡ ಏರ್‌ಯಾ? ಆಯೇನ ಅಮ್ಮೆ ಬ್ಯಾರಿಯಾ! (ರಾಜಶೇಖರ್ ಅಂದರೆ ಯಾರದು? ಅವನು ಬ್ಯಾರಿ (ಮುಸಲ್ಮಾನ) ಗೆ ಹುಟ್ಟಿದವನ!)

ಈ ಘಟನೆಯಲ್ಲೂ ಮತ್ತೆ ಕಾಣಿಸಿಕೊಳ್ಳುವುದು ಅದೇ ಅವರ ಬದ್ಧತೆ. ಮತ್ತು ಅವರು ಕೇಸರಿಪಡೆಯವರಿಗೆ ಹೇಗೆ ದುಃಸ್ವಪ್ನವಾಗಿದ್ದರು ಎಂದು. ಆದರೆ, ರಾಜಶೇಖರ್ ಎಂದರೆ ಅಷ್ಟೆಯೇ- ಪ್ರಗತಿಪರರಿಗೆ ಹೀರೋ, ಜೀವವಿರೋಧಿಗಳಿಗೆ ದುಃಸ್ವಪ್ನ? ಸಂಘ ಪರಿವಾರ ಕೇಳಿದ ಪ್ರಶ್ನೆ - ರಾಜಶೇಖರ್ ಪಂಡ ಏರ್‌ಯಾ?- ಗೆ ಹೀಗೆ ಗುಣವಾಚಕ ಬಳಸಿ ವಿವರಿಸಲಾಗದು. ಅದು ರಾಜಶೇಖರ್ ಲೋಕವನ್ನು ಬದುಕನ್ನು ಅರಿಯುವ ಕ್ರಮವೂ ಅಲ್ಲ. ಹಾಗಿದ್ದರೆ, ರಾಜಶೇಖರ್ ಪಂಡ ಏರ್‌ಯಾ?

***************

ಮೊದಲಿಗೆ ನಾನು ಕೇಳಿ ತಿಳಿದುಕೊಂಡ ಎರಡು ಐತಿಹ್ಯಗಳನ್ನು ನಿಮ್ಮ ಮುಂದಿಡುತ್ತೇನೆ. ಜಿ.ಆರ್. ಮದುವೆ ಆದ ಆರಂಭದ ದಿನಗಳ ಮಾತು. ನಾಸ್ತಿಕರಾದ ಜಿ.ಆರ್. ಅವರ ಹೆಂಡತಿ ಅಪಾರ ದೇವ ಶ್ರದ್ಧೆ ಮತ್ತು ಭಕ್ತಿ ಉಳ್ಳವರು. ಆ ದಿನಗಳಲ್ಲಿ ಒಮ್ಮೆ ಪಂಢರಾಪುರಕ್ಕೆ ಹೋಗಲು ನಿರ್ಧರಿಸಿದ ಅವರ ಹೆಂಡತಿ, ಬಹುಶಃ ಅವರ ಇಂದಿನ ತಮಾಷೆಯ ರೀತಿಯಲ್ಲೇ ಏನೋ, ‘ನೀವು ಬರಹಗಾರ ಅಲ್ವಾ. ನನಗೊಂದು ಭಜನೆ ಬರೆದು ಕೊಡಿ ನೋಡುವ!’ ಎಂದು ಹೇಳಿದರಂತೆ. ಬಿಲೀವ್ ಇಟ್ ಔರ್ ನಾಟ್, ಜಿ.ಆರ್. ತಮ್ಮ ಹೆಂಡತಿಗೆ ಒಂದು ಭಜನೆಯನ್ನು ಬರೆದುಕೊಟ್ಟರಂತೆ! ಕೃಷ್ಣಾ ಸುಧಾಮನ ಕತೆಯನ್ನೊಳಗೊಂಡ ಆ ಭಜನೆ ಕೇವಲ ಆರಾಧನಾತ್ಮಕ ಆಗಿರದೆ ಕೃಷ್ಣ ಮತ್ತು ಸುಧಾಮ ನಡುವಿನ ಕ್ಲಾಸ್ ಡಿಫರೆನ್ಸ್ / ವರ್ಗ ತಾರತಮ್ಯವನ್ನು ಕಾಣಿಸುವಂತದ್ದಾಗಿತ್ತು ಎಂದು ಕೇಳಿದ್ದೇನೆ.

****************

 ಸುರತ್ಕಲ್ ಗಲಭೆ ನಡೆದ ನಂತರದ ದಿನಗಳಲ್ಲಿ ತಮ್ಮ ಕೆಲವು ಸಂಗಾತಿಗಳ ಜೊತೆ ಜಿ.ಆರ್. ಸತ್ಯಾನ್ವೇಷಣೆಗೆ ಗಲಭೆ ನಡೆದ ಪ್ರದೇಶಕ್ಕೆ ಹೋಗಿದ್ದರು. ನೊಂದವರ, ನಷ್ಟಕ್ಕೊಳಗಾದವರನ್ನು ಸಂದರ್ಶಿಸುತ್ತಾ ಇದ್ದರು. ಆ ಗಲಭೆಯಲ್ಲಿ ಓರ್ವ ಮಹಿಳೆ ಒಂದಿಷ್ಟು ಹುಡುಗರ ಸಹಾಯದಿಂದ ಮುಂದೆ ನಿಂತು ಒಂದಿಷ್ಟು ಮುಸಲ್ಮಾನರ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದರು. ಜಿ.ಆರ್. ಆ ಹೆಂಗಸನ್ನು ಭೇಟಿ ಆಗಲು ನಿರ್ಧರಿಸಿ, ಅವರ ಮನೆಯನ್ನು ಹುಡುಕುತ್ತಾ ಹೋದರಂತೆ.

ಅವರಿವರನ್ನು ಕೇಳಿ ಆ ಹೆಂಗಸು ವಾಸವಾಗಿದ್ದ ಸ್ಥಳ ತಲುಪಿ ನೋಡಿದರೆ, ಅದೊಂದು ಸಣ್ಣ ಬಿಡಾರ. ಆ ಬಿಡಾರವೇ ಅಲ್ಲಿ ವಾಸವಾಗಿರುವವರ ಆರ್ಥಿಕ ಸ್ಥಿತಿ ಕುರಿತು ಹೇಳಿವಂತಿತ್ತು. ಆ ಬಿಡಾರದ ಬಾಗಿಲಿನಲ್ಲಿ ಒಬ್ಬ ಯುವತಿ ಕೂತಿದ್ದಳು, ಆಕೆಯನ್ನು ಕೇಳಿದರೆ ಅದು ಜಿ.ಆರ್. ಮತ್ತು ಸಂಗಾತಿಗಳು ಕಾಣಲು ಇಚ್ಛಿಸುತ್ತಿದ್ದ ಹೆಂಗಸಿನ ಮನೆಯೇ ಆಗಿತ್ತು. ಅವರನ್ನು ಭೇಟಿ ಆಗಬೇಕಿತ್ತು ಎಂದಾಗ, ಈ ಯುವತಿ, ಸರಿ, ಕರೆಯುತ್ತೇನೆ ಎಂದು ಒಳಗೆ ಹೋದಳು. ಅದೆಷ್ಟೋ ನಿಮಿಷವಾದರೂ, ಆ ಮಹಿಳೆ ಹೊರಗೆ ಬರಲಿಲ್ಲ. ಒಳಗೆ ಹೋದ ಯುವತಿಯೂ ಹೊರಬರಲಿಲ್ಲ. ಆಮೇಲೆ ಒಂದ್ಹತ್ತು ನಿಮಿಷದ ನಂತರ ಆ ಮಹಿಳೆ ಹೊರಗೆ ಬಂದು ಸತ್ಯಾನ್ವೇಷಣೆಗೆ ಹೋಗಿದ್ದವರಿಗೆ ಒಂದು ಸಂದರ್ಶನ ನೀಡಿದರು.

ಆ ಅಷ್ಟೂ ಹೊತ್ತು, ಬಾಗಿಲ ಬಳಿ ಮೊದಲು ಕುಳಿತಿದ್ದ ಯುವತಿ ಹೊರಬರಲೇ ಇಲ್ಲ. ಆ ಮಹಿಳೆ ಇವರ ಪ್ರಶ್ನೆಗಳಿಗೆ ನೀಡಿದ ಉತ್ತರ, ಸಮಜಾಯಿಷುಗಳನ್ನೆಲ್ಲ ಕೇಳಿಸಿಕೊಂಡು ಹೊರಟಾಗ, ಜಿ.ಆರ್. ತಮ್ಮ ಸಂಗಾತಿಗಳ ಬಳಿ, ನೋವಿನ ದನಿಯಲ್ಲಿ, ಗಮನಿಸಿದ್ರಾ? ಎಂದು ಕೇಳಿದರಂತೆ. ಏನು ಎಂದು ತಿಳಿಯದ ಇತರರು ಏನನ್ನು ಗಮನಿಸಬೇಕಿತ್ತು ಎಂದು ಕೇಳಿದರೆ, ಜಿ.ಆರ್. ಆ ಯುವತಿ ಹಾಕಿಕೊಂಡಿದ್ದ ಕುಪ್ಪಸವನ್ನೇ, ಈ ಹೆಂಗಸು ಹಾಕಿಕೊಂಡಿದ್ದರು, ಎಂದರಂತೆ. ಆ ಮನೆಯ ಆರ್ಥಿಕ ಸ್ಥಿತಿ ಎಂಥದ್ದಾಗಿತ್ತೆಂದರೆ ಒಂದೇ ಕುಪ್ಪಸವನ್ನು ಇಬ್ಬರು ಬಳಸುತ್ತಿದ್ದರು. ಒಬ್ಬರು ಹೊರ ಬಂದಾಗ ಇನ್ನೊಬ್ಬರು ಹೊರ ಬರುವ ಸ್ಥಿತಿಯಿಲ್ಲ. ಇದನ್ನು ಗಮನಿಸಿರದ ಇತರ ಸಂಗಾತಿಗಳು ನಡೆದದ್ದೇನು ಎಂದು ಗ್ರಹಿಸಲು ಚುಕ್ಕಿಗಳನ್ನು ಜೋಡಿಸುತ್ತಿರುವಾಗ ಜಿ.ಆರ್.

ನಿಟ್ಟುಸಿರು ಬಿಡುತ್ತಾ ಹೇಳಿದರಂತೆ, ಛೆ! ಎಂಥಾ ಬಡತನ! ಆಕ್ರಮಣಕ್ಕೆ ಒಳಗಾದ ಮಂದಿಯ ಪರವಾಗಿ ಫ್ಯಾಕ್ಟ್ಸ್ ಸಂಗ್ರಹಿಸಲು ಹೋಗಿದ್ದ ವ್ಯಕ್ತಿಗೆ ಆಕ್ರಮಣ ಮಾಡಿದ ಜನರ ಜೀವನದ ಕಷ್ಟವನ್ನು ಸಹ ಕಾಣುವ, ಅದನ್ನು ಸೂಕ್ಷ್ಮವಾಗಿಯೇ ಗ್ರಹಿಸುವ ಶಕ್ತಿ/ ನೋಟ ಇದೆ ಎಂದರೆ, ಅಬ್ಬಬ್ಬಾ!

**************

 2018ರಲ್ಲಿ ಜಿ.ಆರ್. ಅವರನ್ನು ಗುರುಗಳಾದ ರಹಮತ್ ತರೀಕೆರೆ ಸಂದರ್ಶನ ಮಾಡಿದಾಗ ತಮ್ಮ ಊರಿನ ಬನ್ನಂಜೆಯಲ್ಲಿರುವ/ ಇದ್ದ ಒಂದು ಗುಡಿಯ ಕುರಿತು ಹೇಳುತ್ತಾರೆ: ‘ಅಲ್ಲೊಂದು ಬಹಳ ಸುಂದರವಾದ ದೇವಸ್ಥಾನ ಇತ್ತು. ಸರಳವಾದ ಜಾಮಿಟ್ರಿಕಲ್ ಆದ ವಾಸ್ತು ಅದು. ಈಗ ಆ ಟೆಂಪಲ್‌ನವರಿಗೆ ಬುದ್ಧಿ ಬಂದು, ಅದರ ಮೂಲ ಆಕೃತಿ ಮರವೆ ಆಗುವ ಹಾಗೆ ಸುತ್ತ ಒಂದು ತಗಡಿನ ಚಪ್ಪರ ಎಬ್ಬಿಸಿ, ಅದರ ಎದುರುಗಡೆ ಶಿಲೆಯ ಕಾಂಕ್ರೀಟಿನಲ್ಲಿ ಏನೆಲ್ಲವನ್ನು ಮಾಡಬಹುದೊ ಅದನ್ನೆಲ್ಲ ಮಾಡಿದಾರೆ’. ಈ ಮಾತನ್ನು ಕೋಟ್ ಮಾಡಿ ರಹಮತ್ ಹೇಳುವುದು: ಮಸೀದಿ ಕೆಡವಿ ಗುಡಿ ಕಟ್ಟುವುದನ್ನು ಸಾಂಸ್ಕೃತಿಕ ಅಪಚಾರವೆಂದು ಭಾವಿಸಿರುವ ಚಿಂತಕನಿಗೆ, ತನ್ನೂರಿನ ಗುಡಿಯ ವಾಸ್ತುವಿನ ಬಗ್ಗೆ ಇದ್ದ ಆಸಕ್ತಿ ಪ್ರೀತಿ ಸೋಜಿಗ ಹುಟ್ಟಿಸಿತು.

ಇದು ಸೋಜಿಗದ ವಿಷಯವೇ ಹೌದು. ಜಿ.ಆರ್. ಬದುಕಿನಲ್ಲಿ ಕಂಸಿಸ್ಟೆಂಟ್ ಆಗಿ ಕಾಣಸಿಗುವಂತ ಗುಣ. ಅದು ವಿರೋಧಾಭಾಸದಂತೆ ಕಂಡರೂ, ಅದು ಹಾಗಲ್ಲ. ಲೋಕವನ್ನು, ಬದುಕನ್ನು, ಮನುಷ್ಯನನ್ನು ಎಲ್ಲಾ ವೈರುಧ್ಯ, ವಿಪರ್ಯಾಸ, ಸಂಕೀರ್ಣತೆಗಳ ಸಮೇತ ಗ್ರಹಿಸುವ, ಅರಿಯುವ ಸ್ವಭಾವ ಅವರದ್ದು. ಹಾಗಾಗಿ ಅದು ಸೋಜಿಗದ ಮಾತೇ! ಹಾಗೆ ನೋಡಿದರೆ, ಜಿ.ಆರ್. ಅವರೇ ಒಂದು ಸೋಜಿಗ! ಅದಕ್ಕೆ ಹೇಳಿದ್ದು, ಬರಿ ವ್ಯಕ್ತಿವಿಶೇಷಣ, ಗುಣವಾಚಕ ಬಳಸಿ ಜಿ.ಆರ್. ಕುರಿತು ಹೇಳಲಾಗದು ಎಂದು.

****************

 ಹೆಗ್ಗೋಡಿನ ನೀನಾಸಂ ಪ್ರತೀವರ್ಷ ನಡೆಸುವ ಸಂಸ್ಕೃತಿ ಶಿಬಿರದಲ್ಲಿ ಒಮ್ಮೆ - ಅದು 2007 ಎಂದು ನೆನಪು - ಅವರು ಮಾಡಿದ ಭಾಷಣ ನಾನು ಕೇಳಿಸಿಕೊಂಡ ಅವರ ಭಾಷಣಗಳಲ್ಲಿ ಅತ್ಯುತ್ತಮವಾದದ್ದರಲ್ಲೊಂದು. ಅಂದು ಅವರು ಕುವೆಂಪು ಅವರ ಆತ್ಮಕಥೆಯಲ್ಲಿ ಬರುವ ಒಂದು ಸಂದರ್ಭವನ್ನು ವಿವರಿಸಿ ಮಾತನಾಡಿದ್ದರು. ರಾಮಕೃಷ್ಣ ಪರಮಹಂಸರ ಅಭಿಮಾನಿ ಆಗಿದ್ದ ಕುವೆಂಪು ಒಮ್ಮೆ ಕಲ್ಕತ್ತೆಯಲ್ಲಿರುವ ರಾಮಕೃಷ್ಣ ಆಶ್ರಮ ನೋಡಲು ಹೋಗುತ್ತಾರೆ. ಗಂಗೆಯಿಂದ ಒಡೆದು ಹರಿಯುವ ಹೂಗ್ಲಿ ನದಿಯ ತಟದಲ್ಲಿ ರಾಮಕೃಷ್ಣರ ಆಶ್ರಮ. ನದಿ ದಾಟಿ ಆಚೆ ಹೋದರೆ, ಮತ್ತೊಂದು ದಡದಲ್ಲಿ ಕಾಳಿ ಮಂದಿರ. ಒಂದು ಸಣ್ಣ ದೋಣಿಯ ಮೂಲಕ ನದಿಯನ್ನು ದಾಟುವ ಕುವೆಂಪು ಆ ನದಿ ಎಷ್ಟು ಕಲುಷಿತವಾಗಿತ್ತು ಎಂದು ವಿವರವಾಗಿ ಬರೆಯುತ್ತಾರೆ.

 ಆ ನದಿಯ ನೀರಿನ ಒಂದು ಹನಿಯೂ ತನ್ನ ಮೈಗೆ ತಾಕಿದರೆ ಚರ್ಮರೋಗ ಬರಬಹುದೇನೋ ಎಂಬಷ್ಟು ಕಲುಷಿತವಾಗಿತ್ತು ಎಂದು ಹೇಳುವ ಕುವೆಂಪು, ಆ ರಾತ್ರಿ ತಾನು ತಂಗಿದ್ದ ಕೋಣೆಯಲ್ಲಿ ಒಂದು ಕವಿತೆ ಬರೆದಿದ್ದು ಅದು ಎಲ್ಲಿಯೂ ಪ್ರಕಟವಾಗದೆ ಉಳಿದಿದೆ ಎನ್ನುತ್ತಾ ಆ ಕವಿತೆಯನ್ನು ಓದುಗರ ಮುಂದಿಡುತ್ತಾರೆ. ಆ ಕವಿತೆಯಲ್ಲಿ ಗಂಗೆಯನ್ನು ಪವಿತ್ರೆ, ಪಾಪನಾಶಿನಿ ಎಂದೆಲ್ಲ ವರ್ಣಿಸುತ್ತಾರೆ. 

ಕುವೆಂಪು ಜೀವನದ ಈ ಎಪಿಸೋಡ್ ಒಂದನ್ನು ಎತ್ತಿಕೊಂಡು ಅಂದು ಜಿ.ಆರ್. ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಏನೆಂದರೆ, ಫಿಸಿಕಲ್ ಗಂಗಾ ಮತ್ತು ಮಿಥಿಕಲ್ ಗಂಗಾ ಒಂದೇ ಅಲ್ಲ ಎಂಬುದನ್ನು. ಅಲ್ಲಿಂದ ಮುಂದೆ ಹೋಗಿ ಅವರು ಆ ದಿನ, ಕಾಣುವ ಸತ್ಯ, ಕಾಣಿಸಿದ ಸತ್ಯ, ಕಂಡ ಸತ್ಯ, ಉಣಬಡಿಸಿದ ಸತ್ಯ, - ಹೀಗೆ ಬದುಕಿನಲ್ಲಿ ನಮ್ಮೆದುರಿಗಿರುವ, ನಮ್ಮೆಳಗಿರುವ ಹಲವಾರು ಶೇಡ್ ಕಡೆ ಗಮನ ಸೆಳೆದಿದ್ದರು.

*****************

ಒಮ್ಮೆ ಒಂದು ಮೀಟಿಂಗಿಗೆ ಬಂದವರ ಮೊಗದಲ್ಲಿ ಅವರು ತಡೆಹಿಡಿದುಕೊಂಡಿದ್ದ ನಗು ಹೊಸ ಹೊಳಪನ್ನೇ ಮೂಡಿಸಿತ್ತು. ಬಹಳ ಪುಳಕಿತರಾಗಿರುವಂತೆ ಕಂಡ ಜಿ.ಆರ್. ಹೇ ಸಂವರ್ತ, ನೀವು ಬಾಡಿಗಾರ್ಡ್ ಸಿನೆಮಾ ನೋಡಿದ್ದೀರಾ? ಎಂದು ಕೇಳಿದರು. ನಾನು ಬಹಳ ಕಾಂಡಸೆಂಡಿಂಗ್ ದನಿಯಲ್ಲಿ, ಏ, ಎಂದು ಡಿಸ್ಮಿಸ್ ಮಾಡುತ್ತಾ, ಇಲ್ಲಾ ಎಂದೆ. ಅವರು, ಹೌದಾ? ಎನ್ನುತ್ತಾ, ನನ್ನ ಡಿಸ್ಮಿಸ್ಸಿವ್ ಉತ್ತರಕ್ಕೆ ಏನೇನೂ ವೇಟ್ ಕೊಡದೆ, ಗೊತ್ತಾ, ಅದರಲ್ಲಿ ಸಲ್ಮಾನ್ ಖಾನ್ ತನ್ನ ಬೈಸೆಪ್ಸ್ ಅನ್ನು ಫ್ಲೆಕ್ಸ್ ಮಾಡ್ತಾನೆ. 

ಅದು ನೃತ್ಯದ ಒಂದು ಸ್ಟೆಪ್! ಎಂದು ಜೋರಾಗಿ ನಕ್ಕರು. ಆ ಹೊತ್ತಿಗೆ ಅವರು ಸಲ್ಮಾನ್ ಖಾನ್ ಮಾಡುವಂತೆ ತನ್ನೆರಡು ಕೈಗಳನ್ನು ಎತ್ತಿ ಅಣಕ ಮಾಡಿದ ರೀತಿ ಕಂಡು ನಾನು ಸಹ ನಕ್ಕಿದ್ದೆ. ಆದರೆ ನಿಜವಾಗಿಯೂ ನನಗೆ ಆಶ್ಚರ್ಯ ಆಗಿದ್ದು, ಜಿ.ಆರ್. ಅವರು ಹೋಗಿ ಸಲ್ಮಾನ್ ಖಾನ್ ಸಿನೆಮಾ ನೋಡಿದ್ದು. ಆಮೇಲೆ ತಿಳಿದ ವಿಷಯ ಏನೆಂದರೆ ಜಿ.ಆರ್. ತೀರಾ ಜನಪ್ರಿಯವಾದ ಸಿನೆಮಾಗಳನ್ನೆಲ್ಲಾ ನೋಡುತ್ತಾರೆ ಎಂದು! ಅವರಷ್ಟು ವಿದ್ವತ್ತು ಮತ್ತು ಕಲಾಭಿರುಚಿ ಇರುವ ವ್ಯಕ್ತಿ ಪಾಪ್ಯುಲರ್ ಕಲ್ಚರ್ ಅನ್ನು ಕುತೂಹಲದಿಂದ ಗಮನಿಸುತ್ತಿದ್ದರು. 

ಅವರಿಗೆ ಅವೆಲ್ಲ ಕೀಳಭಿರುಚಿ ಮತ್ತು ತಿರಸ್ಕರಿಸಬೇಕಾದ ಸಂಗತಿ ಅಲ್ಲವೇ ಅಲ್ಲ. ಅವೆಲ್ಲವೂ ಜನರ ನಾಡಿಮಿಡಿತವನ್ನು ಹಿಡಿದ ಸಂಗತಿಗಳು. ಅವೆಲ್ಲವೂ ನಮ್ಮ ನಿತ್ಯ ಜೀವನದ ಭಾಗ. ಹಾಗಾಗಿ ಅವರಿಗೆ ಅವೆಲ್ಲವೂ ಮುಖ್ಯ. ಮತ್ತು ಅವುಗಳ ಮೂಲಕವೂ ಜಗತ್ತನ್ನು ಕಾಲದ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಜನಪ್ರಿಯವಾದದ್ದು ಜನಪರ ಆಗಿರಬೇಕಿಲ್ಲ ಎಂಬ ಸಾಮಾನ್ಯಜ್ಞಾನ ಹೊಂದಿದ್ದ ಅವರು ಜನಪ್ರಿಯವಾದದ್ದಕ್ಕೆ ಬೆನ್ನು ತಿರುಗಿಸಿರಲಿಲ್ಲ. ಸಾಮಾನ್ಯರ ಬದುಕಿನ ಭಾಗವಾಗಿದ್ದ ಪಾಪ್ಯುಲರ್ ಕಲ್ಚರ್ ಅನ್ನು ಸಾಮಾನ್ಯರಂತೆ ಅವರು ಅನುಭವಿಸಿದ್ದರು.

******************

ಉಡುಪಿಯಲ್ಲಿ ಡಾ ಪಿ.ವಿ. ಭಂಡಾರಿ ಮುಂದಾಳತ್ವದಲ್ಲಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಉಳಿಸಲು ಹೋರಾಟ ನಡೆಯುತ್ತಿದ್ದಾಗ, ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರನ್ನು ಕಡೆಗಣಿಸಿ ಹೋರಾಟದ ಮೀಟಿಂಗ್ ಅಟೆಂಡ್ ಮಾಡಿದ್ದರು. ಅಂದು ಸ್ನೇಹಿತರೊಬ್ಬರು ಅವರನ್ನು ಮನೆಗೆ ಬಿಡುತ್ತೇನೆ ಎಂದಾಗ ಓಕೆ ಎಂದರು. ಆದರೆ ದೇಹಕ್ಕೆ ಆರಾಮಿಲ್ಲದ್ದು, ಅದರ ನಡುವೆ ಮೀಟಿಂಗ್ ಅಟೆಂಡ್ ಮಾಡಿದ್ದು ದೈಹಿಕ ಆರೋಗ್ಯದ ಮೇಲೆ ಒಂದಿಷ್ಟು ಪರಿಣಾಮ ಬೀರಿತ್ತು. ಗಾಡಿಯ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಕಷ್ಟವಾಗಿ ಚಲಿಸುವ ಗಾಡಿಯಿಂದ ಇನ್ನೇನು ಬಿದ್ದೇ ಬೀಳುತ್ತಾರೆ ಅನ್ನುವಂತಾಗಿತ್ತು.

 ಆಕಸ್ಮಿಕವಾಗಿ ಸ್ನೇಹಿತರ ಗಾಡಿಯ ಹಿಂದೆಯೇ ಹೊರಟಿದ್ದ ಕೆ. ಫಣಿರಾಜ್, ಆಧಾರ ತಪ್ಪಿದ್ದ ಜಿ.ಆರ್. ಅವರನ್ನು ಹಿಡಿದುಕೊಂಡರು. ಆಮೇಲೆ ಆರೋಗ್ಯ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿದ್ದರು. ಆಗ ಅವರನ್ನು ನೋಡಲು ಹೋದಾಗ, ಬಹಳ ಸೀರಿಯಸ್ ಆಗಿ, ಇಲ್ಲ, ನನಗೇನೂ ಆಗಿಲ್ಲ. ಒಂದು ಚೂರು ತಲೆ ಸುತ್ತಿದ ಹಾಗಾಯ್ತು ಅಷ್ಟೇ! ಅಂದರು. ಆರಾಮ ಮಾಡಿಕೊಂಡು ಮನೆಯಲ್ಲಿ ಇರಬಹುದಿತ್ತಲ್ಲ ಅಂದ್ರೆ, ಮೀಟಿಂಗ್ ಇತ್ತಲ್ವ. ಹೋದೆ, ಅಂದರು. ಅಲ್ಲೇ ಇದ್ದ ಮತ್ತೊಬ್ಬ ಜೀವಪರ ಜೀವಿ ದಿನಕರ ಬೆಂಗ್ರೆ ತಮ್ಮದೇ ಶೈಲಿಯಲ್ಲಿ. ಆ ಆಸ್ಪತ್ರೆ ಉಳಿಸಲಿಕ್ಕೆ ಹೋಗಿ, ಈ ಆಸ್ಪತ್ರೆಗೆ ಬಂದರು, ಎಂದರು. ಕೇಳಿದ್ದೆ ತಡ ಜಿ.ಆರ್. ಜೋರಾಗಿ ನಕ್ಕರು!

*******************

ಅವರು 2019ರಲ್ಲಿ ಪಾರ್ಕಿನ್ಸನ್ ಇದೆ ಎಂದು ತಿಳಿದುಬಂದ ಸಂದರ್ಭ ಆಸ್ಪತ್ರೆಯಲ್ಲಿ ಇದ್ದ ಜಿ.ಆರ್. ಅದೇ ಸಮಯದಲ್ಲಿ ಇದ್ದ ಪ್ರತಿಭಟನೆಗಳಿಗೆ ಹೋಗಲಾಗುತ್ತಿಲ್ಲ ಎಂದು ಚಡಪಡಿಸುತ್ತಿದ್ದರು. ಆಮೇಲೆ ಅವರ ಆರೋಗ್ಯ ನಿಧಾನವಾಗಿ, ಹಂತಹಂತವಾಗಿ ಕ್ಷೀಣಿಸುತ್ತಾ ಹೋಯಿತು. ಆದರೂ ಅವರು ನಂಬಿದ್ದ ಆದರ್ಶಗಳನ್ನು ಪಾಲಿಸುವ, ಅವರು ಸಮಾಜಮುಖಿ ಕನಸನ್ನು ಹಂಚಿಕೊಂಡ ಯಾವುದೇ ಕಾರ್ಯಕ್ರಮ ಇದ್ದರೆ ಜಿ.ಆರ್. ತಮ್ಮ ಹೆಂಡತಿ ಇಲ್ಲ ಮಕ್ಕಳ ಜೊತೆಗೆ ಬರುತ್ತಿದ್ದರು. 

ಪಾರ್ಕಿನ್ಸನ್ ಇದೆ ಎಂದು ತಿಳಿದ ಬಳಿಕ, ಅವರು ಒಮ್ಮೆ ದಲಿತ ಸಂಘರ್ಷ ಸಮಿತಿ ನಡೆಸಿದ್ದ ಮೆರವಣಿಗೆಯಲ್ಲಿ ತಾನೂ ನಡೆದರು! ಮುಂದೆ ಸಿ.ಎ.ಎ.-ಎನ್.ಆರ್.ಸಿ. ವಿರೋಧಿಸಿ ಪ್ರತಿಭಟನೆಗಳು ಆರಂಭಗೊಂಡಾಗ ಸಮಾಲೋಚನಾ ಸಭೆಗಳಿಗೂ ಹಾಜರಾಗುತ್ತಿದ್ದರು. ಉಡುಪಿಯ ಡಿ.ಸಿ. ಆಫೀಸ್ ಎದುರುಗಡೆ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಿದಾಗ, ನಮ್ಮೆಲ್ಲರ ಬೇಡ ಬೇಡ ಒತ್ತಾಯಕ್ಕೆ ವಿರುದ್ಧವಾಗಿ ಉಪವಾಸ ಮಾಡಿದ್ದರು! ಅಂದು ಅಲ್ಲಿ ನಾನು ಆಝಾದಿ ಘೋಷಣೆ ಕೂಗುತ್ತಿದ್ದಾಗ ನನ್ನ ಹಿಂದೆ ಕೂತು ದನಿಗೆ ದನಿ ಸೇರಿಸಿದ್ದರು. ಪತ್ರಕರ್ತ ಮಿತ್ರ ನಝೀರ್ ಪೊಲ್ಯ ಆ ಕ್ಷಣದ ಒಂದು ವಿಡಿಯೋ ತೆಗೆದಿದ್ದ. ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಜಿ.ಆರ್. ದೈಹಿಕವಾಗಿ ಸ್ವಲ್ಪ ಸುಸ್ತಾಗಿದ್ದಾರೆ. ಆದರೂ ಹುಮ್ಮಸ್ಸಿನಿಂದ ಕೈ ಎತ್ತುತ್ತಾ ಘೋಷಣೆ ಕೂಗುತ್ತಿದ್ದಾರೆ!

ಮುಂದೆ ಅವರ ಆರೋಗ್ಯ ಇನ್ನಷ್ಟು ಕ್ಷೀಣಿಸಿತು. ಮೈನಡುಕ ಹೆಚ್ಚಾಯಿತು. ಆಗೊಮ್ಮೆ ಯಾಸೀನ್ ಕೋಡಿಬೆಂಗ್ರೆ, ಹುಸೈನ್ ಇವರು ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಶಿವಸುಂದರ್ ಮುಖ್ಯ ಮಾತುಗಾರರಾಗಿ ಬಂದಿದ್ದರು. ಆಗಾಗ ಹೋಗಿ ಜಿ.ಆರ್. ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿಬರುತ್ತಿದ್ದ ನಾನು ಅವರು ಹಿಂದಿನಂತೆ ಓಡಾಡಲು ಸಾಧ್ಯ ಆಗದಿರುವುದನ್ನು ಅರಿತು, ಹಿರಿಯ ಸ್ನೇಹಿತರಲ್ಲಿ ಆಗಾಗ, ನೀವು ಉಡುಪಿಗೆ ಬಂದರೆ ಹೇಳಿ. ಹೋಗಿ ಜಿ.ಆರ್. ಅವರನ್ನು ನೋಡಿಕೊಂಡು ಬರಬಹುದು, ಎನ್ನುತ್ತಿದ್ದೆ. 

ಅಂದು ಬೆಳಗ್ಗೆ ಮಣಿಪಾಲದಲ್ಲಿ ಭೇಟಿ ಆದಾಗ ಶಿವಸುಂದರ್ ಬಳಿ, ಜಿ.ಆರ್. ಅವರನ್ನು ಭೇಟಿ ಮಾಡಿದ್ರ? ಎಂದು ಕೇಳಿದೆ. ಅದಕ್ಕವರು, ಇವತ್ತು ಸಂಜೆ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ಹಠ ಹಿಡಿದಿದ್ದಾರಂತೆ. ಅದು ಬೇಡ, ನಾನೇ ಬಂದು ನಿಮ್ಮನ್ನು ಮಾತನಾಡಿಸುತ್ತೇನೆ ಅಂತ ಹೇಳಿದ್ದೇನೆ. ಈಗ ಅಲ್ಲಿಗೆ ಹೋಗುತ್ತಿದ್ದೇನೆ, ಎಂದು ಜಿ.ಆರ್. ಮನೆಗೆ ತೆರಳಿದರು. ಅಂದು ಸಂಜೆ ಶಿವಸುಂದರ್ ಮಾತು ಆರಂಭಿಸಿದಾಗ ಜಿ.ಆರ್. ತಮ್ಮ ಮಗ ವಿಷ್ಣುವಿನ ಸಹಾಯದೊಂದಿಗೆ ಸಭೆಗೆ ಬಂದೇ ಬಿಟ್ಟರು! ಆಗಂತು ಅವರು ಕೂತರೂ ಮೈ ನಡುಗುತ್ತಿತ್ತು. 

ಆದರೂ ಶಿವಸುಂದರ್ ಮಾತುಗಳನ್ನು ಕೇಳಿಸಿಕೊಂಡು ನಂತರ ಸಂವಾದ ಆರಂಭಗೊಂಡಾಗ ಆಯೋಜಕರಲ್ಲಿ ಕೇಳಿ ಮೈಕ್ ಪಡೆದು, ಶಿವಸುಂದರ್ ಅವರ ಮಾತಿನಲ್ಲಿ ಬಿಟ್ಟು ಹೋಗಿದ್ದ ಕೆಲವು ಅಂಶಗಳನ್ನು ಸೇರಿಸಿ, ವಿಷಯಕ್ಕೆ ಹೊಸ ನೋಟ ನೀಡಿದರು.

**************

ಉಡುಪಿಗೆ ಸರ್ಕಸ್ ಬಂದಿತ್ತು. ಹೋಗಬೇಕು ಹೋಗಬೇಕು ಎಂದುಕೊಳ್ಳುತ್ತಾ ಇದ್ದೆ ಆದರೆ ಹೋಗಲು ಆಗಿರಲಿಲ್ಲ. ಅದೇ ಸಮಯದಲ್ಲಿ ಒಂದು ದಿನ ಸ್ನೇಹಿತೆ ಸಹಮತ ಬೊಳುವಾರ್ ಫೋನ್ ಮಾಡಿ ಉಡುಪಿಗೆ ಬರಲಿಕ್ಕಿದೆ ಎಂದು ಹೇಳಿದಾಗ, ಬಾ, ಹೋಗಿ ಸರ್ಕಸ್ ನೋಡಬಹುದು, ಎಂದಿದ್ದೆ. ಆದರೆ ಸಹಮತ ಕೈ ಕೊಟ್ಟಳು.

ಇದಾಗಿ ಸ್ವಲ್ಪ ಸಮಯದಲ್ಲಿ ಒಂದು ದಿನ ಜಿ. ರಾಜಶೇಖರ್ ಫೋನ್ ಮಾಡಿ, ತೀಸ್ತಾ ಅವರ ಆತ್ಮಕತೆ ನಿಮ್ಮ ಬಳಿ ಇದೆಯಲ್ಲ. ನಾನು ಬೊರೋ ಮಾಡ ಬಹುದಾ? ಎಂದು ಕೇಳ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X