ರಸ್ತೆಯಲ್ಲಿ ಸಿಕ್ಕಿದ 45 ಲಕ್ಷ ರೂ. ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಸಿಬ್ಬಂದಿ

Photo:twitter
ರಾಯಪುರ,ಜು.24: ರಸ್ತೆಯಲ್ಲಿ ಸಿಕ್ಕಿದ್ದ 45 ಲ.ರೂ.ಗಳನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ಇಲ್ಲಿಯ ಟ್ರಾಫಿಕ್ ಪೊಲೀಸ್ ಕಾನಸ್ಟೇಬಲ್ ಓರ್ವರು ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.
ನವಾ ರಾಯಪುರದ ಕಯಾಬಂಧಾ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಕಾನ್ಸ್ಟೇಬಲ್ ನೀಲಾಂಬರ ಸಿನ್ಹಾ ಅವರು ಶನಿವಾರ ಬೆಳಿಗ್ಗೆ ಮಾನಾ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆಯೊಂದರಲ್ಲಿ ಬಿದ್ದಿದ್ದ ಬ್ಯಾಗ್ ಅನ್ನು ಕಂಡಿದ್ದರು. ಬ್ಯಾಗ್ ಅನ್ನು ಪರಿಶೀಲಿಸಿದಾಗ ಅದರಲ್ಲಿ ಒಟ್ಟು 45 ಲ.ರೂ.ಗಳ 2,000 ಮತ್ತು 5,00 ರೂ.ನೋಟುಗಳ ಕಂತೆಗಳು ಪತ್ತೆಯಾಗಿದ್ದವು. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಸಿನ್ಹಾ ಹಣದ ಬ್ಯಾಗ್ ಅನ್ನು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಪ್ಪಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಸುಖನಂದನ ರಾಠೋರ್ ಸುದ್ದಿಗಾರರಿಗೆ ತಿಳಿಸಿದರು.
ಹಿರಿಯ ಅಧಿಕಾರಿಗಳು ಸಿನ್ಹಾ ಅವರಿಗೆ ಬಹುಮಾನವನ್ನು ಪ್ರಕಟಿಸಿದ್ದಾರೆ.
ನಗದುಹಣದ ಮೂಲವನ್ನು ಪತ್ತೆ ಹಚ್ಚಲು ಸಿವಿಲ್ ಲೈನ್ಸ್ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ರಾಠೋರ್ ತಿಳಿಸಿದರು.
रायपुर पुलिस में यातायात आरक्षक नीलाम्बर सिन्हा को ड्यूटी के दौरान रोड में 45,00,000 रुपये के नोट मिले जिसे उन्होंने थाने में जमा कर दिया. pic.twitter.com/YSitLNvLUc
— Awanish Sharan (@AwanishSharan) July 23, 2022







