ಸಂಜೀವಿನಿ ಸ್ವಸಹಾಯ ಮಹಿಳೆಯರಿಗೆ ಟೂರಿಸಂ ಅನುಭವ ಕುರಿತ ತರಬೇತಿಗೆ ಚಾಲನೆ

ಮಲ್ಪೆ: ಪ್ಲೇಸ್ ಎಕ್ಸೊಫ್ಲೋರ್ ರೆಡ್ ಡಾಟ್ ಫೌಂಡೇಶನ್, ಗ್ಲೋಬಲ್ ತಿನಿವಾ ದಿ ಅರ್ಬನ್ ವಿಷನ್, ಉಡುಪಿ ಜಿಲ್ಲಾ ಪಂಚಾಯತ್, ಎನ್‌ಆರ್‌ಎಲ್‌ಎಂ, ಉಡುಪಿ ಪ್ರವಾಸೋದ್ಯಮ ಇಲಾಖೆ, ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಸಂಜೀವಿನಿ ಸ್ವಸಹಾಯ ಮಹಿಳೆಯರಿಗೆ ಟೂರಿಸಂ ಅನುಭವ ಕುರಿತ ತರಬೇತಿಗೆ ಇಂದು ಮಲ್ಪೆ ಪ್ಯಾರಡೈಸ್ ಹೊಟೇಲ್‌ನಲ್ಲಿ ಚಾಲನೆ ನೀಡಲಾಯಿತು.
ಗ್ರಾಮೀಣ ಸಂಜೀವಿನಿ ಸಂಘದ ಮಹಿಳೆಯರಿಗೆ ಸಮುದಾಯ ಮಹಿಳೆ ಯರಿಗೆ ಟೂರಿಸಂ ಅನುಭವ ಹಾಗೂ ಸಣ್ಣ ಬಂಡವಾಳದೊಂದಿಗೆ ಪ್ರವಾ ಸೋದ್ಯಮ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳಾಗಿ ಮಹಿಳೆಯರನ್ನು ಬಲವರ್ಧನೆಗೊಳಿಸುವುದು ಇದರ ಉದ್ದೇಶವಾಗಿದೆ.
ಈ ತರಬೇತಿಯಲ್ಲಿ ಸಂಜೀವಿನಿ ಸಂಘದ 44 ಮಹಿಳೆಯರು ಭಾಗವಹಿಸಿದ್ದು ಅವರಿಗೆ ಟೂರಿಸಂ ಗೈಡ್, ಸಾಂಸ್ಕ್ರತಿಕ, ಕಲೆ, ಯೋಗ, ಕರಕುಶಲ, ಕಲೆ, ಫುಡ್ ಮೇಕಿಂಗ್ ಇತ್ಯಾದಿ ತರಬೇತಿ ನೀಡಿ ಅವರಿಗೆ ಅದರಿಂದ ಮುಂದಿನ ದಿನಗಳಲ್ಲಿ ಸ್ವಾಲಂಬಿಗಳಾಗಿ ಆರ್ಥಿಕ ಬಲವರ್ಧನೆ ಹೊಂದಲು ಸಂಪೂರ್ಣ ಸಹಕಾರ ನೀಡಲಾಗುತ್ತದೆ.
ಪ್ಲೇಸ್ ಎಕ್ಸೊಫ್ಲೋರ್‌ನ ಸಹ ಸಂಸ್ಥಾಪಕಿ ಪ್ರತಿಮಾ ಮನೋಹರ್, ರೆಡ್ ಡಾಟ್ ಫೌಂಡೇಶನ್ ಅಧ್ಯಕ್ಷೆ ಏಲ್ಸಾ ಮೇರಿ ಡಿಸೋಜ ಮಾತನಾಡಿ, ಮಹಿಳೆಯರ ನೈಪುಣ್ಯತೆಯನ್ನು ಅರಿತು ಅವರು ಉದ್ದಿಮೆದಾರಾಗಲು ಬೇಕಾದ ತರಬೇತಿಯೊಂದಿಗೆ ಅವರೊಂದಿಗೆ ನಾವೂ ಸದಾ ಬೆನ್ನೆಲುಬಾಗಿ ಇರುವುದಾಗಿ ತಿಳಿಸಿದರು.
ಎನ್.ಆರ್.ಎಲ್.ಎಂ. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಮಾತನಾಡಿ, ಜಿಲ್ಲೆಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿ ಗರು ಬರುವುದರಿಂದ ನಮ್ಮ ಸಂಜೀವಿನಿ ಮಹಿಳೆಯರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಲ್ಲಿ ಉದ್ಯೋಗದೊಂದಿಗೆ ಹೆಚ್ಚು ಆದಾಯ ಗಳಿಸಲು ಈ ತರಬೇತಿ ಅವರರಿಗೆ ಖಂಡಿತ ಸದುಪಯೋಗ ಆಗುತ್ತದೆ ಎಂದರು.
ಪ್ರವಾಸೋದ್ಯಮ ಇಲಾಖೆ ಸಮಾಲೋಚಕ ಭವಿಶ್ ಉಪಸ್ಥಿತರಿದ್ದರು.