ರಾಜ್ಯದಲ್ಲಿಂದು 1,151 ಕೊರೋನ ಪ್ರಕರಣ ದೃಢ

ಸಾಂದರ್ಭಿಕ ಚಿತ್ರ (PTI)
ಬೆಂಗಳೂರು, ಜು.24: ರಾಜ್ಯದಲ್ಲಿ ರವಿವಾರ 1,151 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೂನ್ಯವಾಗಿದ್ದು, 837 ಜನರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 39,95,778ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 40,090ಕ್ಕೆ ತಲುಪಿದೆ.
ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 9162ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.
ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 1151 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 6, ಬಳ್ಳಾರಿ 17, ಬೆಳಗಾವಿ 15, ಬೆಂಗಳೂರು ಗ್ರಾಮಾಂತರ 9, ಬೆಂಗಳೂರು ನಗರ 910, ಬೀದರ್ 8, ಚಿಕ್ಕಬಳ್ಳಾಪುರ 7, ಚಿಕಮಗಳೂರು 6, ದಕ್ಷಿಣ ಕನ್ನಡ 19, ದಾವಣಗೆರೆ 2, ಧಾರವಾಡ 26, ಗದಗ 1, ಕೋಲಾರ 5, ಕೊಪ್ಪಳ 1, ಮಂಡ್ಯ 12, ಮೈಸೂರು 24, ರಾಯಚೂರು 7, ಶಿವಮೊಗ್ಗ 6, ತುಮಕೂರು 19, ಉಡುಪಿ 7, ಉತ್ತರಕನ್ನಡ ಜಿಲ್ಲೆಯಲ್ಲಿ ಹದಿನಾರು ಪ್ರಕರಣಗಳು ಪತ್ತೆಯಾಗಿವೆ.







