Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಲ್‌ಎಸಿ ಸಮೀಪ ಚೀನಾ ಹೆದ್ದಾರಿ: ಪೂರ್ವ...

ಎಲ್‌ಎಸಿ ಸಮೀಪ ಚೀನಾ ಹೆದ್ದಾರಿ: ಪೂರ್ವ ಲಡಾಖ್ ಬಳಿ ಹೊಸ ರಸ್ತೆ, ಮೂಲ ಸೌಕರ್ಯಗಳ ನಿರ್ಮಾಣ

ವಾರ್ತಾಭಾರತಿವಾರ್ತಾಭಾರತಿ24 July 2022 10:23 PM IST
share
ಎಲ್‌ಎಸಿ ಸಮೀಪ ಚೀನಾ ಹೆದ್ದಾರಿ: ಪೂರ್ವ ಲಡಾಖ್ ಬಳಿ ಹೊಸ ರಸ್ತೆ, ಮೂಲ ಸೌಕರ್ಯಗಳ ನಿರ್ಮಾಣ

ಹೊಸದಿಲ್ಲಿ, ಜು.26: ಕಳೆದ ಎರಡು ವರ್ಷಗಳಿಂದ ಭಾರತದ ಜೊತೆಗಿನ ಗಡಿಬಿಕ್ಕಟ್ಟು ಉಲ್ಬಣಿಸಿರುವ ನಡುವೆಯೇ  ಚೀನಾವು ವಿವಾದಿತ ಅಕ್ಸಾಯಿ ಚಿನ್ ಹಾಗೂ  ಸಂಘರ್ಷಾವಸ್ಥೆ ತಲೆದೋರಿದ್ದ ಪೂರ್ವ ಲಡಾಕ್ ಮೂಲಕ ಹಾದುಹೋಗುವ  ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪ ಹೊಸ ಹೆದ್ದಾರಿಯೊಂದನ್ನು ನಿರ್ಮಿಸುತ್ತಿದೆ.

ಚೀನಾದ ಈ ನಡೆಯು ಭಾರತೀಯ ರಕ್ಷಣಾ ಹಾಗೂ ಭದ್ರತಾ ಇಲಾಖೆಗಳ ಗಮನಕ್ಕೆ ಬಂದಿದ್ದು, ಅವು ಈ ಬೆಳವಣಿಗೆಯನ್ನು ತದೇಕಚಿತ್ತದಿಂದ ಗಮನಿಸುತ್ತಿವೆ.
ಚೀನಾದ ಈ ಯೋಜಿತ ಹೆದ್ದಾರಿಯು ಚೀನಾದ ಕ್ಸಿಯಾನ್‌ಜಿಂಗ್ ಪ್ರದೇಶವನ್ನು ಟಿಬೆಟ್ ಜೊತೆಸಂಪರ್ಕಿಸುತ್ತದೆ. ರಸ್ತೆ ಸಂಪರ್ಕವು ಈ ಪ್ರದೇಶದಲ್ಲಿ ಚೀನಾದ ಆಯಕಟ್ಟಿನ ಸಂಪರ್ಕಶೀಲತೆಯನ್ನು  ಹೆಚ್ಚಿಸಲಿರುವುದು ಭಾರತದ ಕಳವಳವಕ್ಕೆ ಕಾರಣವಾಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ.
ಜಿ695 ರಾಷ್ಚ್ರೀಯ ಹೆದ್ದಾರಿಯೆಂಬುದಾಗಿ ಪ್ರಸ್ತಾವಿಸಲಾದ ಈ ಹೆದ್ದಾರಿಯು, ಇತ್ತೀಚೆಗೆ ಅನಾವರಣಗೊಳಿಸಲಾದ ಚೀನಾದ ರಾಷ್ಟ್ರೀಯ ಕಾರ್ಯಕ್ರಮದ ಭಾಗವಾಗಿದೆ. ಈ ಯೋಜನೆ ಯು 2035ರೊಳಗೆ ಒಟ್ಟು 4.61 ಲಕ್ಷ ಕಿ.ಮೀ. ಹೆದ್ದಾರಿ ಹಾಗ ಮೋಟಾರ್‌ವೇಯ ನಿರ್ಮಾಣ ಒಳಗೊಂಡಂತೆ ಒಟ್ಟು 345 ನೂತನ ಮೂಲಸೌಕರ್ಯ ಯೋಜನೆಗಳನ್ನು  ನಿರ್ಮಿಸುವ  ಗುರಿಯನ್ನು ಹೊಂದಿದೆ.

ಈ ಹೆದ್ದಾರಿಯ ನಿರ್ಮಾಣದಿಂದಾಗಿ ಅಗತ್ಯ ಬಿದ್ದಾಗಲೆಲ್ಲಾ ಚೀನಾವ   ತನ್ನ ಸೇನೆಯನ್ನು ಜಮಾವಣೆಗೊಳಿಸಲು ಹಾಗೂ ಎಲ್‌ಎಸಿಯಲ್ಲಿರುವ ತನ್ನ  ಮುಂಚೂಣಿ ಸ್ಥಲಗಳಿಗೆ ಸೇನಾಪಡೆಗಳನ್ನು ತ್ವರಿತವಾಗಿ ಕಳುಹಿಸುವುದಕ್ಕೆ ಇನ್ನೊಂದು ಪ್ರವೇಶಕೇಂದ್ರವಾಗಲಿದೆ. ಅಲ್ಲದೆ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿಯೋಜಿತವಾಗಿರುವ ತನ್ನ ಸೇನಾಪಡೆಗಳ ಸುಗಮ ನಿರ್ವಹಣೆಯನ್ನು ಖಾತರಿಪಡಿಸುತ್ತದೆ.

ವಾಸ್ತವ ಗಡಿನಿಯಂತ್ರಣ ರೇಖೆ ಸಮೀಪದ ವಿವಾದಿತ ಪ್ರದೇಶದಲ್ಲಿ ಚೀನಾವು ಹೆದ್ದಾರಿಯನ್ನು ನಿರ್ಮಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ರಕ್ಷಣಾ ಹಾಗೂ ಭದ್ರತಾ ಸಂಸ್ಥಾಪನೆಗಳು, ತಾವು ಈ ಬೆಳವಣಿಗೆಗಳನ್ನು ಗಮನಿಸುತ್ತಿರುವುದಾಗಿ ಹೇಳಿವೆ.
ಆದಾಗ್ಯೂ ಭಾರತ ಕೂಡಾ ತನ್ನ ಗಡಿಪ್ರದೇಶದಲ್ಲಿ ಹೊಸ ರಸ್ತೆಗಳು ಹಾಗೂ ಸುರಂಗಮಾರ್ಗಗಳ ನಿರ್ಮಾಣ ಸೇರಿದಂತೆ ಗಡಿಮೂಲಸೌಕರ್ಯವನ್ನು  ತ್ವರಿತಗೊಳಿಸುತ್ತದೆ. ಇದರಿಂದಾಗಿ ಗಡಿಗ್ರಾಮಗಳಲ್ಲಿ ವಾಸವಾಗಿರುವ ಜನರ ಜೀವನ ಕೂಡಾ ಸುಗಮಗೊಳ್ಳಲಿದೆ ಹಾಗೂ ಸೇನಾ ಸಿಬ್ಬಂದಿಯ ತ್ವರಿತ ಸಾಗಾಟ ಸುಲಭವಾಗಲಿದೆಯೆಂದು ಅವು ಹೇಳಿವೆ.

ಜಿ695 ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಎರಡನೆ ಅತಿ ದೊಡ್ಡ ಹೆದ್ದಾರಿ ಯೋಜನೆಯಾಗಿದೆ. 1955ರಲ್ಲಿ ಚೀನಾವು ಜಿ219 ಯೋಜನೆಯನ್ನು ಪೂರ್ಣಗೊಳಿಸಿತ್ತು.

ಚೀನಾದ ನೂತನ ಜಿ695 ಹೆದ್ದಾರಿ ಯೋಜನೆಯು, ಹಾಟ್‌ಸ್ಪ್ರಿಂಗ್ಸ್, ಡೆಪ್ಸಾಂಗ್ ಪ್ರಸ್ಥಭೂಮಿ ಹಾಗೂ ಗಲ್ವಾನ್ ಕಣಿವೆ ಸೇರಿದಂತೆ ಕಳೆದ 24 ತಿಂಗಳುಗಳಿಗೂ ಅಧಿಕ ಸಮಯ ಭಾರತ -ಚೀನಾ ಗಡಿಯಲ್ಲಿ  ಸಂಘರ್ಷಾವಸ್ಥೆ ತಲೆದೋರಿದ್ಧ ಸ್ಥಳಗಳಿಗೆ  ತನ್ನ ಸೇನಾ ಪಡೆಗಳನ್ನು ತ್ವರಿತವಾಗಿ ಕಳುಹಿಸಲು ಸಾಧ್ಯವಾಗಲಿದೆ. ಗಲ್ವಾನ್ ಕಣಿವೆಯಲ್ಲಿ 2020ರಲ್ಲಿ ಭಾರತ ಹಾಗೂ ಚೀನಾದ ಸೇನಾಪಡೆಗಳ ನಡುವೆ  ನಡುವೆ ನಡೆದ ಘರ್ಷಮೆಯಲ್ಲಿ ಎರಡೂ ಕಡೆಗಳಲ್ಲಿನ ಯೋಧರು ಸಾವನ್ನಪ್ಪಿದ್ದರು ಕಳೆದ ರವಿವಾರ ಎಲ್‌ಎಸಿ ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪರಿಹಾರಸೂತ್ರವನ್ನು ಕಂಡುಹಿಡಿಯಲು ಭಾರತ ಹಾಗೂ ಚೀನಾವು ನಡೆಸಿದ 16ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಯಾವುದೇ ತಕ್ಷಣದ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X