ಎಸ್‌ಎಸ್‌ಎಫ್ ದ.ಕ.ಜಿಲ್ಲೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏಕದಿನ ಶಿಬಿರ
ಅಂಬ್ಯುಲೆನ್ಸ್ ಲೋಕಾರ್ಪಣೆ

ಬಂಟ್ವಾಳ: ಎಸ್‌ಎಸ್‌ಎಫ್ ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ವಿಭಾಗದ ವತಿಯಿಂದ ಇಂದು ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಅಸೆಂಬ್ಲಿ ಎಂಬ ಏಕದಿನ ಶಿಬಿರ ನಡೆಯಿತು.
ಬಂಟ್ವಾಳದ ಬಿಸಿ ರೋಡ್‌ನ ಸ್ಪರ್ಶ ಹಾಲ್‌ನಲ್ಲಿ ನೈತಿಕತೆ, ಸಮಗ್ರತೆ ಮತ್ತು ಸಮರ್ಪಣೆ ಎಂಬ ವಿಚಾರವಾಗಿ ಶಿಬಿರ ನಡೆದಿದ್ದು, ಶಿಬಿರದಲ್ಲಿ ವಿವಿಧ ವಿಚಾರಗಳ ಕುರಿತಾಗಿ ವಿಷಯ ಮಂಡನೆ ನಡೆಯಿತು.
ಕಾರ್ಯಕ್ರಮದಲ್ಲಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ವಿದ್ಯಾರ್ಥಿಗಳಿಗೆ ಶುಭ ಆರೈಸಿದರು.
ನವಾಝ್ ಸಖಾಫಿ ಅಡ್ಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಅಸೆಂಬ್ಲಿ ಗೆ ಸೈಯ್ಯದ್ ಮದಕ ತಂಙಲ್ ದುಆ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕರ್ನಾಟಕ ರಾಜ್ಯ ವಕ್ಫ್ ಚೆಯರ್ಮ್ಯಾನ್ ಶಾಫಿ ಸಅದಿ,ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಜಿಲ್ಲಾ ವಕ್ಫ್ ಅಧ್ಯಕ್ಷ ನಾಸಿರ್ ಲಕ್ಕಿ ಸ್ಟಾರ್, ಮುಹಮ್ಮದ್ ಹಾಜಿ ಸಾಗರ್, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ರಾಶಿದ್ ಬುಖಾರಿ, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ನೌಫಲ್ ಸಖಾಫಿ ಕಳಸ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಫಾರೂಕ್ ಸಖಾಫಿ ಕಾಟಿಪಳ್ಳ, ಶಾಹಿನ್ ಅಲಿ ವಿಚಾರ ಮಂಡಿಸಿದರು.
ಇದೇ ವೇಳೆ ಕರ್ನಾಟಕ ವಕ್ಫ್ ಬೋರ್ಡ್ ಚಯರ್ ಮ್ಯಾನ್ ಶಾಫಿ ಸಅದಿ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಸಿಎಫ್ ವತಿಯಿಂದ ಬಂಟ್ವಾಳ ವಿಭಾಗಕ್ಕೆ ನೀಡಲಾದ ನೂತನ ಆಂಬುಲೆನ್ಸ್‌ನ ಕೀಯನ್ನು ಎಪಿ ಉಸ್ತಾದ್ ಹಸ್ತಾಂತರಿಸಿದರು.