Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದ ಆರ್ಥಿಕ ರಾಜಧಾನಿಯಲ್ಲಿ...

ಭಾರತದ ಆರ್ಥಿಕ ರಾಜಧಾನಿಯಲ್ಲಿ ಹೆಚ್ಚುತ್ತಿದೆ ಅಪೌಷ್ಟಿಕತೆ

ಶಿರೀಶ್ ಖರೆಶಿರೀಶ್ ಖರೆ25 July 2022 10:47 AM IST
share
ಭಾರತದ ಆರ್ಥಿಕ ರಾಜಧಾನಿಯಲ್ಲಿ ಹೆಚ್ಚುತ್ತಿದೆ ಅಪೌಷ್ಟಿಕತೆ

ಮಗುವಿಗೆ ಜನ್ಮ ನೀಡಿದ ಬಳಿಕವೂ, ತಾಯಿಗೆ ಸಮತೋಲಿತ ಆಹಾರ ಸಿಗುವುದಿಲ್ಲ. ಹಾಗಾಗಿ, ಮಕ್ಕಳಿಗೆ ತಾಯಿಯಿಂದ ಸಾಕಷ್ಟು ಆಹಾರ ಮತ್ತು ಪೌಷ್ಟಿಕ ಆಹಾರ ಸಿಗುವುದಿಲ್ಲ. ಸಮತೋಲಿತ ಮತ್ತು ಬೇಕಾದಷ್ಟು ಆಹಾರ ಸಿಗದೆ ಸಾವಿರಾರು ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಾರೆ. ಇಲ್ಲಿನ ಬಡತನದ ತೀವ್ರತೆ ಎಷ್ಟಿದೆಯೆಂದರೆ, ಅಪೌಷ್ಟಿಕತೆಗೆ ಒಳಗಾಗುವ ಮಕ್ಕಳ ಪರಿಸ್ಥಿತಿಯನ್ನು ನಿರ್ಲಕ್ಷಿಸುವ ಅನಿವಾರ್ಯತೆಗೆ ಹೆಚ್ಚಿನ ಸಂದರ್ಭಗಳಲ್ಲಿ ಹೆತ್ತವರು ಒಳಗಾಗುತ್ತಾರೆ.

ಭಾರತದ ಬೃಹತ್ ನಗರಗಳಲ್ಲಿ ಜನಸಂಖ್ಯೆ ಮತ್ತು ಸರಾಸರಿ ಸಂಪತ್ತು ಹೆಚ್ಚುತ್ತಿರುವಾಗ, ಅವುಗಳ ಹೊರವಲಯಗಳಲ್ಲಿ ಅಷ್ಟೇ ವೇಗವಾಗಿ ಅಪೌಷ್ಟಿಕತೆಯೂ ಹಬ್ಬುತ್ತಿದೆ.

ದೇಶದ ಆರ್ಥಿಕ ರಾಜಧಾನಿ ಎಂಬುದಾಗಿ ಪರಿಗಣಿಸಲ್ಪಟ್ಟಿರುವ ಮುಂಬೈ ಇದಕ್ಕೊಂದು ಉತ್ತಮ ಉದಾಹರಣೆ. ಮುಂಬೈ ನಗರದಲ್ಲಿ 4,000ಕ್ಕೂ ಅಧಿಕ ಮಕ್ಕಳು ತೀರಾ ಅಪೌಷ್ಟಿಕತೆಯಿಂದ ಬಳಲುತ್ತಿರು ವುದು ಪತ್ತೆಯಾಗಿದೆ ಎಂದು ಕಳೆದ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಮಾಹಿತಿ ನೀಡಲಾಗಿತ್ತು. ಕಾಂಗ್ರೆಸ್ ಎಮ್‌ಎಲ್‌ಸಿ ಭಾಯಿ ಜಗ್‌ತಾಪ್ ಕೇಳಿದ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಯಶೋಮತಿ ಠಾಕೂರ್ ಉತ್ತರಿಸಿ ಈ ಮಾಹಿತಿ ನೀಡಿದ್ದರು.

‘‘ಈ ವರ್ಷ (2021)ದ ಆಗಸ್ಟ್ ವೇಳೆಗೆ, ಮುಂಬೈ ನಗರದಲ್ಲಿ 4,194 ಮಕ್ಕಳು ಅತಿ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಈ ಪೈಕಿ ಹೆಚ್ಚಿನ ಪ್ರಕರಣಗಳು ಧಾರಾವಿ, ಮಾಲ್ವಾಣಿ, ಮಾನ್‌ಖುರ್ಡ್ ಮತ್ತು ಗೋವಂಡಿ ಪ್ರದೇಶಗಳಲ್ಲಿ ಪತ್ತೆಯಾಗಿವೆ’’ ಎಂದು ಅವರು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಮಕ್ಕಳ ಅಪೌಷ್ಟಿಕತೆಯನ್ನು ಹೋಗಲಾಡಿಸುವುದಕ್ಕಾಗಿ ಆಗಸ್ಟ್ 20ರಂದು ಮುಂಬೈಯ ಶತಾಬ್ದಿ ಆಸ್ಪತ್ರೆಯಲ್ಲಿ ಪೌಷ್ಟಿಕತೆ ಪುನರ್ವಸತಿ ಕೇಂದ್ರವೊಂದನ್ನು ಸ್ಥಾಪಿಸಲಾಯಿತು. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ತಾಯಂದಿರ ಆರೋಗ್ಯ ವನ್ನು ಸುಧಾರಿಸುವುದಕ್ಕಾಗಿ ಇತರ ಯೋಜನೆಗಳನ್ನೂ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಯಶೋಮತಿ ಠಾಕೂರ್ ಹೇಳಿದರು.

ಅಪೌಷ್ಟಿಕತೆ ಪ್ರಕರಣಗಳು ಮತ್ತು ಅಪೌಷ್ಟಿಕತೆ ಸಂಬಂಧಿ ಸಾವುಗಳಿಗೆ ಸಂಬಂಧಿಸಿ ನೆರೆಯ ಥಾಣೆ ಜಿಲ್ಲೆಯ ಪರಿಸ್ಥಿತಿಯು ಮುಂಬೈಯ ಪರಿಸ್ಥಿತಿ ಗಿಂತಲೂ ಹದಗೆಟ್ಟಿದೆ. ಗ್ರಾಮೀಣ ಥಾಣೆಯಲ್ಲಿ ಹೆಚ್ಚಿನ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಆ ಸಮುದಾಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಡ ಕುಟುಂಬಗಳಿವೆ. ಆಹಾರ ಭದ್ರತೆ ಮತ್ತು ಅಪೌಷ್ಟಿಕತೆಯ ಸಮಸ್ಯೆ ಈ ವಲಯದಲ್ಲಿ ಗಂಭೀರವಾಗಿದೆ. ಈ ಬುಡಕಟ್ಟು ಕುಟುಂಬಗಳ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಸಿಗುವುದಿಲ್ಲ. ಹಾಗಾಗಿ, ಇಲ್ಲಿನ ಮಕ್ಕಳ ತೂಕ ನಷ್ಟವನ್ನು ಹೊಸ ಬಿಕ್ಕಟ್ಟಾಗಿ ಪರಿಗಣಿಸಲಾಗುತ್ತಿಲ್ಲ.

ಮಗುವಿಗೆ ಜನ್ಮ ನೀಡಿದ ಬಳಿಕವೂ, ತಾಯಿಗೆ ಸಮತೋಲಿತ ಆಹಾರ ಸಿಗುವುದಿಲ್ಲ. ಹಾಗಾಗಿ, ಮಕ್ಕಳಿಗೆ ತಾಯಿಯಿಂದ ಸಾಕಷ್ಟು ಆಹಾರ ಮತ್ತುಪೌಷ್ಟಿಕ ಆಹಾರ ಸಿಗುವುದಿಲ್ಲ. ಸಮತೋಲಿತ ಮತ್ತು ಬೇಕಾದಷ್ಟು ಆಹಾರ ಸಿಗದೆ ಸಾವಿರಾರು ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಾರೆ. ಇಲ್ಲಿನ ಬಡತನದ ತೀವ್ರತೆ ಎಷ್ಟಿದೆಯೆಂದರೆ, ಅಪೌಷ್ಟಿಕತೆಗೆ ಒಳಗಾಗುವ ಮಕ್ಕಳಪರಿಸ್ಥಿತಿಯನ್ನು ನಿರ್ಲಕ್ಷಿಸುವ ಅನಿವಾರ್ಯತೆಗೆ ಹೆಚ್ಚಿನ ಸಂದರ್ಭಗಳಲ್ಲಿ ಹೆತ್ತವರು ಒಳಗಾಗುತ್ತಾರೆ.

ಅಂಗನವಾಡಿ ಕಾರ್ಯಕರ್ತೆಯರ ಸಮೀಕ್ಷೆಯೊಂದನ್ನು ಆಧರಿಸಿ, ರಾಜ್ಯ ಸರಕಾರವು ಇತ್ತೀಚೆಗೆ 2021-22ರ ಸಾಲಿನ ಅಪೌಷ್ಟಿಕತೆ ವರದಿ ಯನ್ನು ಬಿಡುಗಡೆಗೊಳಿಸಿತು. ಥಾಣೆ ಜಿಲ್ಲೆಯಲ್ಲಿ 1,531 ಮಕ್ಕಳು ಲಘು ಅಪೌಷ್ಟಿಕತೆಗೆ ಮತ್ತು 122 ಮಕ್ಕಳು ತೀವ್ರ ಅಪೌಷ್ಟಿಕತೆಗೆ ಒಳಗಾಗಿದ್ದಾರೆ ಎಂಬುದಾಗಿ ವರದಿ ತಿಳಿಸಿದೆ. ಆದರೆ, ಕೋವಿಡ್ ಸಾಂಕ್ರಾಮಿಕಕ್ಕಿಂತ ಮೊದಲಿನ ಅವಧಿಗೆ ಹೋಲಿಸಿದರೆ ಅಪೌಷ್ಟಿಕತೆಗೆ ಒಳಗಾಗಿರುವ ಮಕ್ಕಳ ಸಂಖ್ಯೆಯಲ್ಲಿ ಕಡಿತವಾಗಿದೆ ಹಾಗೂ ಹಿಂದಿನದಕ್ಕೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳುತ್ತಾರೆ.

ಅಪೌಷ್ಟಿಕತೆ ವ್ಯಾಪಿಸಿರುವ ಜಿಲ್ಲೆಗಳಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಡಾ. ಎಪಿಜೆ ಅಬ್ದುಲ್ ಕಲಾಮ್ ಅಮೃತ ಆಹಾರ್ ಯೋಜನೆ ಮತ್ತು ಪೂರಕ ಪೌಷ್ಟಿಕತೆ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಯೋಜನೆ ಗಳಿಗೆ ಸಂಬಂಧಿಸಿ ಜನರಿಂದ ತಮಗೆ ಧನಾತ್ಮಕ ಪ್ರತಿಕ್ರಿಯೆಗಳು ಬರುತ್ತಿವೆ ಎಂಬುದಾಗಿ ಥಾಣೆ ಜಿಲ್ಲಾ ಪರಿಷತ್ ಹೇಳಿದೆ.

ಡಾ. ಎಪಿಜೆ ಅಬ್ದುಲ್ ಕಲಾಮ್ ಅಮೃತ್ ಆಹಾರ ಯೋಜನೆಯಡಿ ಯಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿರುವ ಗರ್ಭಿಣಿ ಮತ್ತು ಹಾಲೂಡಿಸುವ ಮಹಿಳೆಯರಿಗೆ ದಿನಕ್ಕೆ ಒಂದು ಬಿಸಿ ಊಟವನ್ನು ನೀಡಲಾಗುತ್ತಿದೆ. ಈಯೋಜನೆಯನ್ನು ಮಹಾರಾಷ್ಟ್ರ ಸರಕಾರವು 2015ರಿಂದ ನಡೆಸಿ ಕೊಂಡುಬರುತ್ತಿದೆ. ಈವರೆಗೆ, ಥಾಣೆ ಜಿಲ್ಲೆಯೊಂದರಲ್ಲೇ 8,865 ಗರ್ಭಿಣಿಯರುಮತ್ತು ಹಾಲೂಡಿಸುವ ತಾಯಂದಿರು ಈ ಯೋಜನೆಯ ಪ್ರಯೋಜನ ವನ್ನು ಪಡೆದುಕೊಂಡಿದ್ದಾರೆ ಎಂದು ಸರಕಾರಿ ಅಂಕಿಅಂಶಗಳು ತಿಳಿಸಿವೆ.

ಪೂರಕ ಪೌಷ್ಟಿಕತೆ ಯೋಜನೆಯನ್ನು ರಾಜ್ಯ ಸರಕಾರವು ಕೇಂದ್ರ ಸರಕಾರದ ನೆರವಿನೊಂದಿಗೆ ನಡೆಸಿಕೊಂಡು ಬರುತ್ತಿದೆ. ಈ ಯೋಜನೆ ಯಡಿ, ಆರು ತಿಂಗಳು ಮತ್ತು ಆರು ವರ್ಷಗಳ ನಡುವಿನ ಮಕ್ಕಳಿಗೆ ತಿಂಗಳೊಂದರಲ್ಲಿ ಕನಿಷ್ಠ 25 ದಿನ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. 3-6 ವರ್ಷಗಳ ಮಕ್ಕಳಿಗೆ ಪ್ರತ್ಯೇಕ ಆಹಾರ ಪಟ್ಟಿಯೇ ಇದೆ. ಅವರಿಗೆ ಬಿಸಿ ಮತ್ತು ವೈವಿಧ್ಯಮಯ ಆಹಾರವನ್ನು ನೀಡಲಾಗುತ್ತಿದೆ. ಅದೇ ವೇಳೆ, ಆರು ತಿಂಗಳು ಮತ್ತು 3 ವರ್ಷಗಳ ನಡುವಿನ ಮಕ್ಕಳಿಗೆ ಸಿಹಿ ಅಂಬಲಿಯಂಥ ಲಘು ಆಹಾರವನ್ನು ನೀಡಲಾಗುತ್ತಿದೆ.

ಇಲ್ಲಿರುವ ಪ್ರಶ್ನೆಯೆಂದರೆ, ಈ ಯೋಜನೆಗಳನ್ನು ಉತ್ತಮವಾಗಿ ಜಾರಿ ಗೊಳಿಸಿದರೆ, ಈ 122 ಮಕ್ಕಳು ಹೇಗೆ ಗಂಭೀರ ಅಪೌಷ್ಟಿಕತೆಗೆ ಒಳ ಗಾದರು? ಅದೂ ಅಲ್ಲದೆ, ಇತರ 1,531 ಮಕ್ಕಳು ಲಘು ಅಪೌಷ್ಟಿಕತೆ ಯ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ತಾವಿನ್ನು ಈ ಮಕ್ಕಳಿಗೆ ವಿವಿಧ ಯೋಜನೆಗಳ ಮೂಲಕ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತೇವೆ ಹಾಗೂ ಅಪೌಷ್ಟಿಕತೆಯ ಮಟ್ಟವನ್ನು ಕೆಳಗೆ ತರುತ್ತೇವೆ ಎಂಬುದಾಗಿ ಈ ಅಂಕಿಅಂಶಗಳು ಬಹಿರಂಗಗೊಂಡ ಬಳಿಕ ಜಿಲ್ಲಾ ಪರಿಷತ್ ಹೇಳಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ ಜಿಲ್ಲೆಯಲ್ಲಿರುವ ಅಂಗನವಾಡಿಗಳನ್ನು ಎರಡು ವರ್ಷಗಳ ಕಾಲ ಮುಚ್ಚಲಾಗಿದೆ. ಆದರೆ, ಸಾಂಕ್ರಾಮಿಕ ದ ತೀವ್ರತೆ ತಗ್ಗಿದ ತಕ್ಷಣ ಅಂಗನವಾಡಿಗಳು ಮತ್ತೆ ಸಕ್ರಿಯವಾಗಿವೆ. ಹಾಗಾಗಿ, ಥಾಣೆ ಜಿಲ್ಲೆಯಲ್ಲಿ 7 ತಿಂಗಳು ಮತ್ತು 6 ವರ್ಷಗಳ ನಡುವಿನ ವಯೋ ಗುಂಪಿನ ಮಕ್ಕಳಿಗೆ ವಾರಕ್ಕೆ 4 ದಿನ ಮೊಟ್ಟೆಗಳು ಮತ್ತು ಬಾಳೆ ಹಣ್ಣುಗಳನ್ನು ನೀಡಲಾಗುತ್ತಿದೆ. ಜಿಲ್ಲಾಡಳಿತದ ಅಂಕಿಸಂಖ್ಯೆಗಳ ಪ್ರಕಾರ, ಈವರೆಗೆ 45,230 ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ಜಿಲ್ಲೆಯ ಎಲ್ಲ ನೋಂದಾಯಿತ ಫಲಾನುಭವಿ ಗಳಿಗೆ ಈ ಯೋಜನೆ ತಲುಪುತ್ತಿದೆ ಎಂದು ಥಾಣೆ ಜಿಲ್ಲಾ ಪರಿಷತ್‌ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಿಳಿಸಿದೆ.

ಕೋವಿಡ್ ಸಾಂಕ್ರಾಮಿಕ ಸ್ಫೋಟ ಮತ್ತು ಅದರ ಪರಿಣಾಮಗಳ ಹಿನ್ನೆಲೆಯಲ್ಲಿ ಗರ್ಭಿಣಿಯರು, ಹಾಲೂಡಿಸುವ ತಾಯಂದಿರು ಮತ್ತು ಶಿಶುಗಳಿಗೆ ಆಹಾರ ಒದಗಿಸಲು ಕಷ್ಟವಾಗುತ್ತಿತ್ತು ಎಂದು ಥಾಣೆ ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಭಾವು ಸಾಹೇಬ್ ದಾಂಗ್ಡೆ ಹೇಳಿದ್ದಾರೆ. ಹಾಗಾಗಿ, ಆ ಅವಧಿಯಲ್ಲಿ ಅಪೌಷ್ಟಿಕತೆ ಯನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗಲಿಲ್ಲ. ಈಗ ಅಂಗನವಾಡಿ ಗಳು ಪುನರಾರಂಭಗೊಂಡಿದ್ದು, ಈ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಅದೂ ಅಲ್ಲದೆ, ಮುಂಬೈಗೆ ಹೊಂದಿಕೊಂಡ ಪಾಲ್ಘರ್ ಜಿಲ್ಲೆಯಂಥ ಬುಡಕಟ್ಟು ಪ್ರದೇಶಗಳಲ್ಲೂ ಅಪೌಷ್ಟಿಕತೆಯು ಗಂಭೀರ ಸಮಸ್ಯೆಯಾಗಿದೆ. ಪಾಲ್ಘರ್‌ನಲ್ಲಿ ಸುಮಾರು ಒಂದು ಲಕ್ಷ ಮಕ್ಕಳು ಮತ್ತು ಸುಮಾರು 30,000 ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರಿಗೆ ಅಂಗನವಾಡಿಗಳ ಮೂಲಕ ಆಹಾರ ನೀಡಲಾಗುತ್ತಿದೆ. ಆದರೆ, ಈ ಯೋಜನೆಯನ್ನು ಈಗ ಒಂದು ತಿಂಗಳಿಗೂ ಹೆಚ್ಚಿನ ಸಮಯದಿಂದ ನಿಲ್ಲಿಸಲಾಗಿದೆ. ಆಹಾರ ವಸ್ತುಗಳ ಬೆಲೆಗಳು ದುಬಾರಿಯಾಗಿವೆ, ಆದರೆ ಸರಕಾರ ನೀಡುತ್ತಿರುವ ಹಣ ತುಂಬಾ ಕಡಿಮೆಯಾಗಿದೆ ಎಂಬುದಾಗಿ ಅಂಗನವಾಡಿ ಕಾರ್ಯಕರ್ತೆಯರು ಕಳೆದ ಒಂದು ತಿಂಗಳಿನಿಂದ ಹೇಳುತ್ತಿದ್ದಾರೆ. ಹಾಗಾಗಿ, ಅವರು ಅಡುಗೆ ಮಾಡುವುದನ್ನು ನಿಲ್ಲಿಸಿದ್ದಾರೆ. ಯೋಜನೆ ಸ್ಥಗಿತಗೊಳ್ಳಲು ಇದೇ ಕಾರಣವಾಗಿದೆ.

ಪಾಲ್ಘರ್ ಜಿಲ್ಲೆಯಲ್ಲಿ 2,709 ಅಂಗನವಾಡಿ ಕೇಂದ್ರಗಳು ಕಾರ್ಯಾ ಚರಿಸುತ್ತಿವೆ. ಈ ಪೈಕಿ 1,805 ಅಂಗನವಾಡಿ ಕೇಂದ್ರಗಳು ಅಡುಗೆ ಮಾಡಲು ನಿರಾಕರಿಸಿವೆ. ಬೆಲೆಯೇರಿಕೆಯ ಈ ದಿನಗಳಲ್ಲಿ ಒಂದು ಮಗುವಿಗೆ ರೂ. 6 ಮತ್ತು ಒಂದು ತಾಯಿಗೆ ರೂ. 35 ಸಾಕಾಗುವುದಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಅಡುಗೆ ಅನಿಲ, ಧಾನ್ಯಗಳು ಮತ್ತು ತರಕಾರಿಗಳ ಬೆಲೆ ಗಗನಕ್ಕೇರಿದೆ. ಅಂಗನವಾಡಿಗಳು ಆಹಾರ ಪೂರೈಸುವುದನ್ನು ನಿಲ್ಲಿಸಿದರೆ, ಅಪೌಷ್ಟಿಕತೆ ಹೆಚ್ಚುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

ತಮ್ಮ ವೇತನವನ್ನು ತಿಂಗಳಿಗೆ ರೂ. 15,000ಕ್ಕೆ ಏರಿಸಬೇಕು ಹಾಗೂ ನಿವೃತ್ತಿಯ ಬಳಿಕ ತಿಂಗಳ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಮಹಾರಾಷ್ಟ್ರದ ಅಂಗನವಾಡಿ ಕಾರ್ಯಕರ್ತೆಯರು 2022ರ ಆರಂಭ ದಿಂದ ಧರಣಿ ನಡೆಸುತ್ತಿದ್ದಾರೆ. ಪ್ರಸಕ್ತ, ಅಂಗನವಾಡಿ ಕಾರ್ಯಕರ್ತೆ ಯರಿಗೆ ತಿಂಗಳಿಗೆ 8,500 ರೂ. ಮತ್ತು ಸಹಾಯಕರಿಗೆ 4,500 ರೂ. ನೀಡಲಾಗುತ್ತಿದೆ.

ಕೃಪೆ: countercurents.org

share
ಶಿರೀಶ್ ಖರೆ
ಶಿರೀಶ್ ಖರೆ
Next Story
X