ಎಸ್ಪಿ ನಾಯಕ ಅಝಂ ಖಾನ್ ಅರ್ಜಿ ವಜಾ ಮಾಡಿದ ಸುಪ್ರೀಂ
ಪುತ್ರನ ನಕಲಿ ಜನನ ಪ್ರಮಾಣಪತ್ರ ಪ್ರಕರಣ

ಹೊಸದಿಲ್ಲಿ,ಜು.25: ತನ್ನ ಪುತ್ರನ ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿಯ ದೋಷಾರೋಪಣ ಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಎಸ್ಪಿ ನಾಯಕ ಅಝಂ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ವಜಾಗೊಳಿಸಿದೆ.
ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ತನಗೆ ಕಂಡು ಬಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಅಝಂ ಪುತ್ರ ಅಬ್ದುಲ್ಲಾ ಅಝಂ ಖಾನ್ ಲಕ್ನೋ ಮತ್ತು ರಾಮಪುರಗಳಿಂದ ಎರಡು ಬೇರೆ ಬೇರೆ ದಿನಾಂಕಗಳ ನಕಲಿ ಜನನ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಆಕಾಶ ಸಕ್ಸೇನಾ 2019,ಜ.3ರಂದು ರಾಮಪುರದ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಝಂ ಮತ್ತು ಪತ್ನಿ ತಝೀನ್ ಫಾತಿಮಾ ಇದಕ್ಕೆ ನೆರವಾಗಿದ್ದರು ಎಂದೂ ಅವರು ಆರೋಪಿಸಿದ್ದರು. ಅಲಹಾಬಾದ್ ಉಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ಮೂವರನ್ನೂ ಜೈಲಿಗೆ ಕಳುಹಿಸಿತ್ತು.
Next Story





