ಪಡು ಬೊಂಡಂತಿಲದಲ್ಲಿ ಕ್ರೀಡೋತ್ಸವ

ಮಂಗಳೂರು: ಗ್ರಾಮಗಳ ಅಭಿವೃದ್ಧಿಯಲ್ಲಿ ಆಯಾಯ ಗ್ರಾಮದ ಸಂಘಟನೆಗಳ ಪಾತ್ರ ಹಿರಿದಾಗಿದೆ. ಈ ನಿಟ್ಟಿನಲ್ಲಿ ಪಡು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯು ಗ್ರಾಮದಲ್ಲಿ ಹಮ್ಮಿಕೊಳ್ಳುತ್ತಿರುವ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮವು ಶ್ಲಾಘನೀಯವಾದುದು ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು.
ನಗರ ಹೊರವಲಯದ ಪಡುಬೊಂಡಂತಿಲ ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ 32ನೇ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ರವಿವಾರ ನಡೆದ ಕ್ರೀಡೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯ ಶಿವಪ್ಪ ಸುವರ್ಣ ಪಕ್ಕಲಪಾದೆ, ಉದ್ಯಮಿ ರಮೇಶ್ ಆಚಾರ್ಯ, ಹಿರಿಯರಾದ ಶಂಕರ್ ಸಾಲ್ಯಾನ್, ಗ್ರಾಪಂ ಸದಸ್ಯ ಕಿಶೋರ್ ಉಗ್ಗಕೋಡಿ, ಸಚಿನ್ ಹೆಗ್ಡೆ ಹೊಸಮನೆ, ಬೊಂಡಂತಿಲ ಬಿಎಂಎಸ್ ಅಧ್ಯಕ್ಷ ಹರೀಶ್ ಹೊಸಮನೆ, ನೀರುಮಾರ್ಗ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸತೀಶ್ ಕಂಪ, ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಮಹಿಳಾ ಸಮಿತಿ ಸಂಚಾಲಕಿ ಅನುಷಾ ಮೇಗಿನಮನೆ ಉಪಸ್ಥಿತರಿದ್ದರು.
ವಿಜಯ್ ಕೋಟ್ಯಾನ್ ಪಡು ಸ್ವಾಗತಿಸಿದರು. ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು. ಸುನೀಲ್ ಪಡು ವಂದಿಸಿದರು.







