ಪಿಯು ಕಾಲೇಜಿನ ಎರಡು ವಿಭಾಗದಲ್ಲಿ 100 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುಲು ಅನುಮತಿ

ಬೆಂಗಳೂರು, ಜು. 25: 2022-23ನೆ ಸಾಲಿನಲ್ಲಿ ಪ್ರಥಮ ಪಿಯುಸಿ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿಯನ್ನು 80 ರಿಂದ 100ಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ದಾಖಲಾತಿ ಸಂಖ್ಯೆಯನ್ನು ಒಂದು ವಿಭಾಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈಗ ಪ್ರತಿ ಸಂಯೋಜನೆಯ ಗರಿಷ್ಟ 2 ವಿಭಾಗಕ್ಕೆ ಹೆಚ್ಚಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ.
ರಾಜ್ಯದ ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾಲೇಜಿನ ಮೂಲಭೂತ ಸೌಕಾರ್ಯಗಳು ಇರುವುದನ್ನು ಖಚಿತಪಡಿಸಿಕೊಂಡು ಅಗತ್ಯತೆ ಹಾಗೂ ಬೇಡಿಕೆಯ ಅನುಸಾರ, ಮಂಜೂರಾತಿ ಪಡೆದು ಸಂಯೋಜನೆಯ ಎರಡು ವಿಭಾಗಗಳಿಗೆ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ಪ್ರಸ್ತತ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದೆ.
Next Story





