ಮಲ್ಪೆ ಕಳವು ಪ್ರಕರಣ: ಆರೋಪಿಗಳ ಬಂಧನ
ಕದ್ದ ಸೊತ್ತು ವಶ

ಇಕ್ಬಾಲ್ / ಸಾಗರ್ / ಇಮ್ತಿಯಾಜ್ / ದೀಪಕ್
ಉಡುಪಿ: ಕಳೆದ ಜು.19ರಂದು ಮಲ್ಪೆ ಠಾಣಾ ವ್ಯಾಪ್ತಿಯ ತೆಂಕನಿಡಿಯೂರಿನ ಮನೆ ಕೆಲಸ ನಡೆಯುತಿದ್ದ ಸೈಟ್ನಿಂದ ಸುಮಾರು ಒಂದು ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಕದ್ದ ಸೊತ್ತುಗಳನ್ನು ಹಾಗೂ ಕಳ್ಳತನಕ್ಕೆ ಬಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ವಾರ್ಡಿನ ದೀಪಕ್ (19), ಕಲ್ಯಾಣಪುರ ಮೂಡುತೋನ್ಸೆ ಗ್ರಾಮದ ಕಡವಿನ ಬಾಗಿಲು ಸಸಿತೋಟದ ಸಾಗರ್ (36), ಬಂಟ್ವಾಳ ಪರಂಗಿಪೇಟೆಯ ಇಮ್ತಿಯಾಜ್ (39) ಹಾಗೂ ಮಂಗಳೂರು ಬಜಾಲ್ನ ಮುಹಮ್ಮದ್ ಇಕ್ಬಾಲ್ (35) ಎಂದು ಗುರುತಿಸಲಾಗಿದೆ.
ತೆಂಕನಿಡಿಯೂರಿನ ಉಮೇಶ್ ಎಂಬವರು ಜು.19ರಂದು ಮಲ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಮನೆ ಪಕ್ಕ ಜಯಂತಿ ಎಂಬವರ ಮನೆಯ ಸೆಂಟ್ರಿಂಗ್ ಕೆಲಸ ವಹಿಸಿಕೊಂಡಿದ್ದು, ಸೈಟ್ಗೆ ತಂದು ಹಾಕಿದ ಸೆಂಟ್ರಿಂಗ್ ಶೀಟ್ ಹಾಗೂ ಪಿಲ್ಲರ್ ಬಾಕ್ಸ್ಗಳಲ್ಲಿ 80 ಶೀಟ್ ಹಾಗೂ ನಾಲ್ಕು ಪಿಲ್ಲರ್ ಬಾಕ್ಸ್ಗಳ ಸೆಟ್ಗಳನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡ ಮಲ್ಪೆ ಪೊಲೀಸರು ಪಿಎಸ್ಐ ಸಕ್ತಿವೇಲು ನೇತೃತ್ವದಲ್ಲಿ ಎಸ್ಪಿ ಎನ್.ವಿಷ್ಣುವರ್ದನ್, ಎಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ ಮಾರ್ಗ ದರ್ಶನ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕರ ನಿರ್ದೇಶನದಂತೆ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಅವರಿಂದ ಕದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಂಗ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳು ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 1.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳಿಂದ ಕಳ್ಳತನ ಮಾಡಿದ್ದ ಕಟ್ಟಡ ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಸೆಂಟ್ರಿಂಗ್ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಆರೋಪಿಗಳು ಕೃತ್ಯಕ್ಕೆ ಒಳಸಿದ ಗೂಡ್ಸ್ ವಾಹನ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಮೌಲ್ಯ 1.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಕಾರ್ಯಾಚರಣೆಯಲ್ಲಿ ಮಲ್ಪೆ ಠಾಣೆಯ ಪಿಎಸ್ಐ ಸಕ್ತಿವೇಲು, ಎಎಸ್ಐ ಜನಾರ್ಧನ ದೇವಾಡಿಗ, ರತ್ನಾಕರ, ರವಿಚಂದ್ರ, ಸಿಬ್ಬಂದಿಗಳಾದ ಲೋಕೇಶ್, ಸಂತೋಷ, ಜಯರಾಮ, ರವಿರಾಜ್, ಗುರುನಿಂಗಪ್ಪ ಭಾಗವಹಿಸಿದ್ದರು.







