ಸರಕಾರಿ ಅಭಿಯೋಜಕರಾಗಿ ಹಿರಿಯ ವಕೀಲ ಕಿರಣ್ ಜವಳಿ ನೇಮಕ

ಕಿರಣ್ ಜವಳಿ- ಹಿರಿಯ ವಕೀಲ
ಬೆಂಗಳೂರು, ಜು.26: ಹಿರಿಯ ವಕೀಲ ಕಿರಣ್ ಎಸ್. ಜವಳಿ ಅವರನ್ನು 2 ವರ್ಷಗಳ ಅವಧಿಗೆ ಅಥವಾ ಸರಕಾರದ ಮುಂದಿನ ನಿರ್ಧಾರದವರೆಗೆ ಅಡ್ವೊಕೇಟ್ ಜನರಲ್ ಅವರ ಕಚೇರಿಯಲ್ಲಿ ಸರಕಾರಿ ಅಭಿಯೋಜಕರ ಹುದ್ದೆಗೆ ನೇಮಕ ಮಾಡಿ ಕಾನೂನು ಇಲಾಖೆಯು ಆದೇಶ ಹೊರಡಿಸಿದೆ.
ವಕೀಲ ವಿಜಯಕುಮಾರ್ ಎಂ. ಶೀಲವಂತ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕಾನೂನು ಇಲಾಖೆಯು ನೇಮಕ ಮಾಡಿ ಆದೇಶ ಮಾಡಿದೆ.
Next Story





