ಭಟ್ಕಳ: ಅಸ್ಥಿಪಂಜರ ಪತ್ತೆ

ಭಟ್ಕಳ, ಜು.26: ತಾಲೂಕಿನ ಜಾಲಿ ಪ.ಪಂ. ವ್ಯಾಪ್ತಿಯ ಕಾರಗದ್ದೆ ಹುರುಳೀಸಾಲ್ ಪ್ರದೇಶದ ಗೊಂಡರಕೇರಿ ಬಳಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದ್ದು ಈ ಕುರಿತಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗ್ರಾಮೀಣ ಸಿಪಿಐ ಮಹಾಬಳೇಶ್ವರ ಹಾಗೂ ಪಿಎಸ್ಸೈ ಭರತ್ ತನಿಖೆಯನ್ನು ಕೈಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಪಿಐ ಮಹಾಬಲೇಶ್ವರ ಅಪರಿಚಿತ ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲಿ ಲುಂಗಿ ಬಟ್ಟೆ ದೊರಕಿದ್ದು ಇದು ಪುರುಷನ ಮೃತದೇಹ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ
Next Story





