ಶಸಸ್ತ್ರ ಪಡೆಗಳಿಗೆ 28,732 ಕೋ.ರೂ. ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ

ಹೊಸದಿಲ್ಲಿ, ಜು. 26: ಶಸಸ್ತ್ರ ಗುಂಪು ಡ್ರೋನ್, ಕಾರ್ಬೈನ್ಸ್ ಹಾಗೂ ಗುಂಡು ನಿರೋಧಕ ಜಾಕೆಟ್‌ಗಳು ಸೇರಿದಂತೆ ಶಸಸ್ತ್ರ ಪಡೆಗಳಿಗೆ 28,732 ಕೋ.ರೂ.ಗೂ ಅಧಿಕ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣ ಸಚಿವಾಲಯ ಮಂಗಳವಾರ ಅನುಮತಿ ನೀಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಹಾಗೂ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸುವ ನಮ್ಮ ಪಡೆಗಳಿಗೆ ಶತ್ರು ಸ್ನೈಪರ್ಸ್‌ಗಳಿಂದ ಇರುವ ಬೆದರಿಕೆಯ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲು ಗುಂಡು ನಿರೋಧಕ ಜಾಕೆಟ್‌ಗಳ ಖರೀದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮತಿ ನೀಡಿದೆ.
ಸೇವೆಗಳಿಗೆ ಸುಮಾರು 4 ಲಕ್ಷ ಕ್ವಾರ್ಟರ್ ಬ್ಯಾಟ್ಲ್ ಕಾರ್ಬೈನ್ಸ್ ನಿಯೋಜನೆಗೆ ಕೂಡ ಅನುಮೋದನೆ ನೀಡಲಾಗಿದೆ. ಆಧುನಿಕ ಯುದ್ಧದಲ್ಲಿ ಸೇನೆಯ ಸಾಮರ್ಥ್ಯವನ್ನು ವೃದ್ಧಿಸಲು ಸ್ವಾಯತ್ತ ಕಣ್ಗಾವಲು ಹಾಗೂ ಶಸಸ್ತ್ರ ಗುಂಪು ಡ್ರೋನ್‌ಗಳ ಖರೀದಿಗೆ ಕೂಡ ಡಿಎಸಿ ಅನುಮೋದನೆ ನೀಡಿದೆ.
Next Story





